ಕೋಟ್ಯಂತರ ರೂ. ಆದಾಯದ ದೇಗುಲ: ಅಂಜನಾದ್ರಿ ವಶಕ್ಕೆ ರಾಜವಂಶಸ್ಥರ-ಬಾಬಾ ಸಿದ್ಧತೆ!

ಸರ್ಕಾರ ದೇಗುಲಗಳನ್ನು ಖಾಸಗಿಯವರಿಗೆ ಕೊಡುವ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.

Team Udayavani, Jan 7, 2022, 3:48 PM IST

ಕೋಟ್ಯಂತರ ರೂ. ಆದಾಯದ ದೇಗುಲ: ಅಂಜನಾದ್ರಿ ವಶಕ್ಕೆ ರಾಜವಂಶಸ್ಥರ-ಬಾಬಾ ಸಿದ್ಧತೆ!

ಗಂಗಾವತಿ: ತಾಲೂಕಿನ ಇತಿಹಾಸ ಪ್ರಸಿದ್ಧ ಕಿಷ್ಕಿಂದಾ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ದೇಗುಲ ವಶಕ್ಕೆ ಪಡೆಯಲು ಆನೆಗೊಂದಿ ರಾಜವಂಶಸ್ಥರು ಹಾಗೂ ಅರ್ಚಕ ಮಹಾಂತ ವಿದ್ಯಾದಾಸ ಬಾಬಾ ಸಿದ್ಧತೆ ನಡೆಸಿದ್ದು, ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಮುಂದೆ ಹಕ್ಕು ಮಂಡನೆಗೆ ಸಿದ್ಧರಾಗಿದ್ದಾರೆ.

ಸರ್ಕಾರಿ ವ್ಯಾಪ್ತಿಯಲ್ಲಿರುವ ದೇಗುಲಗಳನ್ನು ಖಾಸಗೀಕರಣ ಮಾಡಲು ಅಗತ್ಯ ತಯಾರಿ ನಡೆಸಲಾಗುತ್ತಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ ಬೆನ್ನಲ್ಲೇ ತಾಲೂಕಿನ ಕಿಷ್ಕಿಂದಾ ಅಂಜನಾದ್ರಿ ದೇಗುಲ ಸುಪರ್ದಿಗೆ ಪಡೆಯಲು ಆನೆಗೊಂದಿ ರಾಜರು ಮತ್ತು ಪ್ರಸ್ತುತ ಅರ್ಚಕ ವಿದ್ಯಾದಾಸ ಬಾಬಾ ಪೈಪೋಟಿಗೆ ಬಿದ್ದಂತೆ ಸಕಲ ಸಿದ್ಧತೆ ನಡೆಸಿದ್ದಾರೆ.

ಕಿಷ್ಕಿಂದಾ ಅಂಜನಾದ್ರಿ ದೇಗುಲವನ್ನು ಹಲವು ದಶಕಗಳ ಕಾಲ ಆನೆಗೊಂದಿ ರಾಜರು ನೋಡಿಕೊಳ್ಳುತ್ತಿದ್ದರು. ಪೂಜೆ ಇತರೆ ಧಾರ್ಮಿಕ ಕಾರ್ಯ ಮಾಡಲು ಅರ್ಚಕ ಮಹಾಂತ ವಿದ್ಯಾದಾಸಬಾಬಾ ಅವರನ್ನು ನೇಮಕ ಮಾಡಿದ ನಂತರ ಬಾಬಾ ಪ್ರತ್ಯೇಕ ಟ್ರಸ್ಟ್‌ ರಚನೆ ಮಾಡಿ ರಾಜವಂಶಸ್ಥರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆಂದು ಬಾಬಾ ಅವರನ್ನು ಪದಚ್ಯುತಿ ಮಾಡಲಾಯಿತು.

ಬಾಬಾ ಭಕ್ತರು ಮತ್ತು ರಾಜರ ನೇತೃತ್ವದ ಟ್ರಸ್ಟ್‌ ನಡುವೆ ಸಂಘರ್ಷ ಏರ್ಪಟ್ಟಿದ್ದರಿಂದ ಅಂದಿನ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಪೊಲೀಸ್‌ ಹಾಗೂ ಕಂದಾಯ ಇಲಾಖೆ ವರದಿ ಆಧರಿಸಿ ದೇಗುಲವನ್ನು 2018, ಜು.23ರಂದು ಜಿಲ್ಲಾಡಳಿತದ ವಶಕ್ಕೆ ತೆಗೆದುಕೊಳ್ಳಲಾಯಿತು. ಸರ್ಕಾರದ ವಶಕ್ಕೆ ದೇಗುಲ ಬಂದ ನಂತರ ಭಕ್ತರ ಕಾಣಿಕೆ ಹುಂಡಿ ಹಾಗೂ ವಾಹನಗಳ ಪಾರ್ಕಿಂಗ್‌, ಇತರೆ ಆದಾಯ ಸೇರಿ ಇದುವರೆಗೂ ಸುಮಾರು 4 ಕೋಟಿ ರೂ. ದೇಗುಲ ಕಮಿಟಿಯ
ಬ್ಯಾಂಕ್‌ ಖಾತೆಯಲ್ಲಿದೆ. ಪ್ರತಿ 2-3 ತಿಂಗಳು, ಕೆಲವೊಮ್ಮೆ ಒಂದೇ ತಿಂಗಳಿನಲ್ಲಿ ಹುಂಡಿ ಎಣಿಕೆ ಮಾಡಲಾಗುತ್ತಿದ್ದು, ಕನಿಷ್ಟ 10 ಲಕ್ಷ ರೂ. ಸಂಗ್ರಹವಾಗುತ್ತಿದೆ. ಇಷ್ಟು ಆದಾಯ ಬರುವ ಅಂಜನಾದ್ರಿಯನ್ನು ತಮ್ಮ ವಶಕ್ಕೆ ಪಡೆಯಲು ಆನೆಗೊಂದಿ ರಾಜರು, ವಿದ್ಯಾದಾಸಬಾಬಾ, ಇತರೆ ಸಂಘ-ಸಂಸ್ಥೆ ಹಾಗೂ ಟ್ರಸ್ಟ್‌ನವರು ಸರ್ಕಾರದ ಮೇಲೆ ಒತ್ತಡ ಹಾಕುವ ಯತ್ನ ನಡೆಸಿದ್ದಾರೆ.

ಅಂಜನಾದ್ರಿ ದೇಗುಲದ ಮಾಲೀಕತ್ವ ತಮ್ಮದೆಂದು ಮೂರು ವರ್ಷಗಳ ಹಿಂದೆ ಧಾರವಾಡ ಹೈಕೋರ್ಟ್‌ನಲ್ಲಿ ರಾಜಮನೆತನದ ನೇತೃತ್ವದ ಅಂಜಿನಿದೇವಿ ಚಾರಿಟೇಬಲ್‌ ಟ್ರಸ್ಟ್‌ ಮತ್ತು ವಿದ್ಯಾದಾಸ ಬಾಬಾ ನೇತೃತ್ವದ ಟ್ರಸ್ಟ್‌ ದಾವೆ ಹೂಡಿದ್ದು, ಇನ್ನೂ ನಿರ್ಣಯವಾಗಿಲ್ಲ. ಈ ಮಧ್ಯೆ ಸರ್ಕಾರ ದೇಗುಲಗಳನ್ನು ಖಾಸಗಿಯವರಿಗೆ ಕೊಡುವ ಹೇಳಿಕೆ ಮತ್ತಷ್ಟು ಮಹತ್ವ ಪಡೆದಿದೆ.

ನೂರಾರು ವರ್ಷಗಳಿಂದ ರಮಾನಂದ ಸಂಪ್ರದಾಯದಂತೆ ಉತ್ತರ ಭಾರತದ ಅರ್ಚಕರು ಅಂಜನಾದ್ರಿಯ ನೇತೃತ್ವ ವಹಿಸಿಕೊಂಡು ಪೂಜೆ, ಧಾರ್ಮಿಕ ಕಾರ್ಯ ಮಾಡುತ್ತಿದ್ದಾರೆ. ಅಂಜನಾದ್ರಿಯಲ್ಲಿ ಅರ್ಚಕ ನಾರಾಯಣ ಗುರು, ಲಕಡದಾಸಬಾಬಾ, ತುಳಸಿದಾಸ ಸೇರಿ ಹಲವರು ಅರ್ಚಕರಾಗಿದ್ದರು. ನಾನು ಸಹ ರಮಾನಂದ ಪರಂಪರೆಯಲ್ಲೇ ಅರ್ಚಕನಾಗಿ ನೇಮಕವಾಗಿದ್ದೇನೆ.

ದೇಶ, ವಿದೇಶದ ಭಕ್ತರು ಇಲ್ಲಿಗೆ ಬರುವಂತೆ ಪ್ರೇರಣೆ ನೀಡಿದ್ದು, ನಾವು ಇಲ್ಲಿಗೆ ಬಂದ ನಂತರ ಅಭಿವೃದ್ಧಿ ಕಾರ್ಯಗಳು ಜರುಗಿವೆ. ಉತ್ತರದಲ್ಲಿ ಭದ್ರಿನಾಥ, ಪಶುಪತಿನಾಥ, ಕೇದಾರ್‌ ದೇಗುಲಗಳಲ್ಲಿ ಕರ್ನಾಟಕದ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಂತೆ ಅಂಜನಾದ್ರಿಯಲ್ಲಿ ಉತ್ತರದ ಸಾಧು ಸಂತರು ದೇಗುಲದ ಮುಖ್ಯಸ್ಥರಾಗಿದ್ದಾರೆ. ಇದರಲ್ಲಿ ಆನೆಗೊಂದಿ ರಾಜರ ಪಾತ್ರ ಏನೂ ಇಲ್ಲ. ಆದ್ದರಿಂದ ಸರ್ಕಾರ ತಮಗೆ ದೇಗುಲ ವಹಿಸಿಕೊಡುವ ಭರವಸೆ ಇದೆ.
*ಮಹಾಂತ ವಿದ್ಯಾದಾಸಬಾಬಾ, ಅರ್ಚಕ

ತಲೆ ತಲಾಂತರದಿಂದಲೂ ಆನೆಗೊಂದಿ ರಾಜಮನೆತನದವರು ಅಂಜನಾದ್ರಿ ಸೇರಿ ಈ ಭಾಗದ ಪ್ರಮುಖ ದೇಗುಲ ಮುಖ್ಯಸ್ಥರಾಗಿ ಧಾರ್ಮಿಕ ಕಾರ್ಯ ನಡೆಯಲು ನೆರವು ನೀಡಿದ್ದಾರೆ. ಈಗ ಬೇರೆಡೆಯಿಂದ ಆಗಮಿಸಿದವರು ದೇಗುಲದ ಮಾಲೀಕರಾಗಲು ಹೇಗೆ ಸಾಧ್ಯ. ಆದ್ದರಿಂದ ಅಂಜನಾದ್ರಿ, ಪಂಪಾ ಸರೋವರ, ಆದಿಶಕ್ತಿ, ಋಷಿಮುಖ ದೇಗುಲಗಳನ್ನು ಒಂದು ಟ್ರಸ್ಟ್‌ ಅಡಿಯಲ್ಲಿ ತಂದು ಸರ್ಕಾರ ರಾಜರ ನೇತೃತ್ವದ ಟ್ರಸ್ಟ್‌ಗೆ ವಹಿಸಬೇಕು. ಈಗಾಗಲೇ ಆನೆಗೊಂದಿ ಹಳೆಯ ಮಂಡಲ ಪ್ರಮುಖ ಸಭೆ ನಡೆಸಿದ್ದು ಸರ್ಕಾರಕ್ಕೆ ದೇಗುಲ ಮಾಲೀಕತ್ವ ನೀಡಬೇಕು. ಇಲ್ಲವೇ ಸರ್ಕಾರದ ಅಧಿಧೀನದಲ್ಲೇ ದೇಗುಲಗಳು ಮುಂದುವರಿಸುವಂತೆ ಮನವಿ ಮಾಡಲಾಗುತ್ತದೆ.
ಲಲಿತಾರಾಣಿ ಶ್ರೀರಂಗದೇವರಾಯಲು, ರಾಜವಂಶಸ್ಥರು

ಕೆ. ನಿಂಗಜ್ಜ

ಟಾಪ್ ನ್ಯೂಸ್

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ

Koppala ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

Koppala: ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು: ಕೂಡಲಸಂಗಮ ಶ್ರೀ

3-gangavathi

Vijayanagara ಕಾಲುವೆಗೆ ಬಿದ್ದು ಮತ್ತೊಬ್ಬ ಬೈಕ್ ಸವಾರ ಸಾವು

2-koppala

Anjanadri ಬೆಟ್ಟದಲ್ಲಿ ಬೆಳಗಿನ ಜಾವದಿಂದಲೇ ಮಾಲಾಧಾರಿಗಳಿಂದ ಮಾಲೆ ವಿಸರ್ಜನೆ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

ಹನುಮಮಾಲಾ ವಿಸರ್ಜನೆ: ಕಿಷ್ಕಿಂಧಾ ಅಂಜನಾದ್ರಿಗೆ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Kundapura: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

‌BBK11: ಬಾಯಿ ಮುಚ್ಕೊಂಡು ಇರು..‌ ಫೈಯರ್‌ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.