ಸ್ಥಳೀಯ ಉದ್ಯೋಗ ಸೃಷ್ಟಿಯಿಂದ ಸಂಸ್ಕೃತಿ ರಕ್ಷಣೆ: ಅದಮಾರು ಶ್ರೀಗಳ ಅಭಿಮತ
Team Udayavani, Jan 13, 2022, 5:45 AM IST
ಉಡುಪಿ: ಸ್ಥಳೀಯ ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ, ಮುಂದುವರಿಸಿಕೊಂಡು ಹೋಗಲು ನಮ್ಮಲ್ಲಿಯೇ ಉದ್ಯೋಗ ಸೃಷ್ಟಿಸಿಕೊಳ್ಳುವ ವ್ಯವಸ್ಥೆ ಆಗಬೇಕು ಎಂದು ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಈಶ
ಪ್ರಿಯ ತೀರ್ಥ ಶ್ರೀಪಾದರು ಹೇಳಿದರು.
ಎರಡು ವರ್ಷಗಳ ಪರ್ಯಾಯ ಪೂಜಾಧಿಕಾರ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅವರು ಸಂದೇಶ ನೀಡಿದರು.
ಪರ್ಯಾಯ ಪೀಠ ಅಲಂಕರಿಸುವ ಸಂದರ್ಭ ಯಾವುದೇ ಕಾರ್ಯ ಯೋಜನೆ ಸಂಕಲ್ಪ ಮಾಡಿಕೊಂಡಿರಲಿಲ್ಲ. ದೇವರ ಪೂಜೆ ಚೆನ್ನಾಗಿ ಆಗಬೇಕು ಎಂದುಕೊಂಡಿದ್ದೆವು. ಅದು ಚೆನ್ನಾಗಿಯೇ ಆಗಿದೆ. ಸೋಲಾರ್ ವ್ಯವಸ್ಥೆ ಅಳವಡಿಸಿರುವುದರಿಂದ ಹೆಚ್ಚಿನ ರೀತಿಯಲ್ಲಿ ಅನುಕೂಲ ಆಗಲಿದೆ. ಲಾಕ್‌ಡೌನ್ ಅವಧಿಯನ್ನು ಸದುಪಯೋಗ ಪಡಿಸಿಕೊಂಡು ಶ್ರೀಕೃಷ್ಣ ಮಠದ ಪೈಂಟಿಂಗ್ ಕಾರ್ಯವನ್ನು ಪೂರ್ಣಗೊಳಿಸಿದ್ದೆವು. ಪರ್ಯಾಯದ ಅನಂತರವೂ ಯಾವುದೇ ಯೋಜನೆ ಹಾಕಿಕೊಂಡಿಲ್ಲ. ಶಕ್ತಿಗೆಅನುಸಾರವಾಗಿ ಸಮಾಜಕ್ಕೆ ಸ್ಪಂದಿಸಲಾಗುವುದು ಎಂದರು.
ಇದನ್ನೂ ಓದಿ:ಸಿಧು ಇರುವುದಕ್ಕೆ ಪಾಕ್ ಅರ್ಥ ವ್ಯವಸ್ಥೆ ಉತ್ತಮ!
ಶುಚಿತ್ವಕ್ಕೆ ಆದ್ಯತೆ
ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸಿದ್ದೇವೆ. ಮನುಷ್ಯ ಜೀವನದಲ್ಲಿ ಯಾತ್ರೆ ಮಾಡುವ ಸಂಸ್ಕೃತಿ ಬೆಳೆಸಬೇಕು. ಹೊರಗಿನದ್ದನ್ನು ನೋಡಿ ಉತ್ತಮವಾದುದನ್ನು ತೆಗೆದುಕೊಂಡು ನಮ್ಮತನ ಉಳಿಸುವ ಅಗತ್ಯ ಇದೆ ಎಂದರು.
ಶ್ರೀಮಠದ ವ್ಯವಸ್ಥಾಪಕ ಗೋವಿಂದರಾಜ್ ಮಾತನಾಡಿ, ಶ್ರೀಗಳ ಮೇಲುಸ್ತುವಾರಿಯಲ್ಲಿ ಕಾರ್ಕಳದ ಚಾರದಲ್ಲಿ ಬೆಳೆದ ಬಾಳೆ ಎಲೆಗಳ ಉಪಯೋಗ ಹೆಚ್ಚಾಗಿ ಮಾಡಿದ್ದೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.