ಪ್ರಸ್ತುತ ರಾಜಕೀಯ ನಾಯಕರಿಗೆ ಸಮಾಜ ಕಟ್ಟುವ ಕೈಂಕರ್ಯ ಮರೆತಿದೆ: ಹಿರೇಮಗಳೂರು ಕಣ್ಣನ್
ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಬ್ಧಿ ಕಾರ್ಯಕ್ರಮ, ದಯಾನಂದ ನಾಯಕರ ಜೀವನ ಹಲವರಿಗೆ ಮಾದರಿ
Team Udayavani, Sep 23, 2024, 7:49 PM IST
ಮೂಡಿಗೆರೆ: ನಿಮ್ಮ ಹೃದಯದಲ್ಲಿ ನನ್ನ ಜೀವನದ ನೆನಪು ಮರಣದ ನಂತರವೂ ಸಾವಿರ ಕಾಲ ಇರುವ ರೀತಿ ಬಾಳಿ ಬದುಕಬೇಕು ಎಂದು ಹಿರೇಮಗಳೂರು ಕಣ್ಣನ್ ತಿಳಿಸಿದರು.
ಇಲ್ಲಿನ ಜೆಸಿ ಭವನದಲ್ಲಿ ನಡೆದ ದಿ. ಉಲ್ಲಾಳ ದಯಾನಂದ ನಾಯಕರ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ ಮೇಲಿನ ವಾಕ್ಯ ನಾಯಕರಿಗೆ ಸದಾ ಪ್ರಸ್ತುತ ಹುಟ್ಟಿದಾಗ ಉಸಿರಿರುತ್ತದೆ ನಂತರ ಹೆಸರು ಬರುವುದು ಆ ಹೆಸರು ಚಿರಸ್ಥಾಯಿಯಾಗಿರಬೇಕು ಆದರೆ ಧಾರ್ಮಿಕವಾಗಿ ಇಂದು ಹಬ್ಬ ಹರಿದಿನಗಳಲ್ಲಿ ಸಂತೋಷವಾಗಿ ಕುಣಿಯೋಣ ಬಾರ ಎಂದರೆ. ಕೆಲವರು ಕೆಣಕೋಣ ಬಾರ ಎಂದರೆ, ರಾಜಕೀಯ ನಾಯಕರು ನುಂಗೋಣ ಬಾರ ಎನ್ನುತ್ತಿದ್ದು. ಸಮಾಜ ಕಟ್ಟುವ ಕೈಂಕರ್ಯ ಮರೆತು ಹೋಗಿದೆ. ದೇಶ ಭಕ್ತ, ದೇಶ ಪ್ರೇಮಿ ಎಂಬ ವಾಕ್ಯಗಳೇ ನಾಶವಾಗಿವೆ. ಮನುಷ್ಯನಲ್ಲಿ ಸಮಾಜ ಕಟ್ಟುವ ಸುಗುಣಗಳಿರಬೇಕು. ಮತ್ಸರ ಬಿಟ್ಟು ಸಮಾಜ ಬೆಳೆಸಬೇಕು ಎಂದರು.
ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಮಾತನಾಡಿ ದಯಾನಂದ ನಾಯಕರ ಬಗ್ಗೆ ಮಾತನಾಡುವುದು ಸೂರ್ಯನಿಗೆ ಬೆಟ್ಟು ಮಾಡಿದಷ್ಟು ಸಮ. ವ್ಯಾಪಾರಕ್ಕಾಗಿ ಬಂದವರು. ಅನ್ನಕ್ಕಾಗಿ ಮಾತ್ರ ಉಳಿಸಿಕೊಂಡು ಉಳಿದೆಲ್ಲ ಸಮಾಜಕ್ಕೆ ದಾನ ಮಾಡಿದವರು. ಜೀವನದ ದಾರಿ ಹೇಗೆ ನಡೆಸಬೇಕು ಎಂಬ ಸಂದರ್ಭದಲ್ಲಿ ಸಂಸ್ಕಾರ ನೀಡುವ ಶಿಕ್ಷಣ ಕೊಡಿಸಿದರು. ಸಮಾಜದಲ್ಲಿ ಯುವಕರಲ್ಲಿ ದೇಶಾಭಿಮಾನ ಹುಟ್ಟುವ ಕೆಲಸದ ಜೊತೆಗೆ ಸಿದ್ದಾಂತದಲ್ಲಿ ರಾಜಿ ಆಗದೆ ಜಾತಿ, ಮತ, ಭೇದ ಮೀರಿ ದೇಶಕ್ಕೆ ಏನು ಕೊಡಬೇಕು ಎಂಬ ಮನಸ್ಸಿನ ಯುವ ಪೀಳಿಗೆ ತಯಾರು ಮಾಡಿದರು. ರಾಜಕಾರಣದಲ್ಲಿ ವೈಯಕ್ತಿಕ ಬೇಡವೇ ಬೇಡ ನಿಸ್ವಾರ್ಥವಾಗಿ ಬದುಕೋಣ ಎಂದು ತೋರಿಸಿದರು ಎಂದರು.
ಸ್ವಾರ್ಥಕ್ಕಾಗಿ ಸಮಾಜ ಬಳಸಿಕೊಂಡಿಲ್ಲ:
ಮಾಜಿ ಸಚಿವ ಬಿ.ಎಲ್. ಶಂಕರ್ ಮಾತನಾಡಿ ದಯಾನಂದ ನಾಯಕರು ಸಂಘಟನೆಗಾಗಿ ದುಡಿದವರು, ರಾಜಕೀಯಕ್ಕಾಗಿ ಆಸೆ ಪಟ್ಟವರಲ್ಲ. ಠಾಕ್ರೆ, ಯಡಿಯೂರಪ್ಪ, ವಾಜಪೇಯಿ, ಆಡ್ವಾಣಿಯವರ ಸಂಪರ್ಕವಿದ್ದರೂ ತನಗಾಗಿ ಬಳಸದೆ ಸಮಾಜಕ್ಕಾಗಿ ಬಳಸಿಕೊಂಡವರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂಘವನ್ನು ನಿಷೇಧಿಸಿದಾಗ ಮೂರು ಬಾರಿ ಸಂಘಟನೆಗಾಗಿ ಜೈಲು ಸೇರಿದ್ದರು. ಎಲ್ಲಾ ಸಂಘಟನೆಯಲ್ಲೂ ಒಳ್ಳೆಯವರು ಇರಬೇಕು ಎನ್ನುವ ಅಭಿಪ್ರಾಯ ನಾಯಕರು ಹೊಂದಿದ್ದರು. ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಹಣ ಮಾಡುವ ಕುತಂತ್ರಿಗಳೇ ತುಂಬಿದ್ದು ಈ ಕ್ಯಾನ್ಸರ್ ಗುಣ ಮಾಡಿದರೆ ಮಾತ್ರ ಸಮಾಜ ಉಳಿಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೀತಾರಾಮ್ ಕೆದಿಲಾಯ, ಕಾಸ ನಿರ್ಮಲ್ ಕುಮಾರ್, ಸುಮತಿ ದಯಾನಂದ ನಾಯಕ್, ಎಂ. ಆರ್. ಜಗದೀಶ್, ಎನ್ಎಲ್ ಸುಂದರೇಶ್ವರ್ ಎಂಜಿ ದಿನೇಶ್, ಕೆಂಜಿಗೆ ಕೇಶವ್, ಪ್ರಶಾಂತ್ ಚಿಪ್ರಗುತ್ತಿ, ದೀಪಕ್ ದೊಡ್ಡಯ್ಯ, ಜೈರಾಮ್ ಬಿದ್ರಹಳ್ಳಿ, ಸುಂದರೇಶ್ ಕೊಣಗೆರೆ, ಮನಮೋಹನ್, ಜಗದೀಪ್, ಸುರೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: 5 ವರ್ಷದ ಮಗು ಮೇಲೆ ಬೀದಿ ನಾಯಿ ದಾಳಿ
Chikkamagaluru: ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ವ್ಯಾನ್ ಪಲ್ಟಿ; ಗಾಯ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.