ಪೆಟ್ರೋಲ್ ಬೈಕ್‌ಗಳಿಗೆ ಕರೆಂಟ್ ಶಾಕ್!ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳತ್ತ ಹೆಚ್ಚಿದ ಒಲವು
ವಾಹನ ಉತ್ಪಾದನಾ ಸಂಸ್ಥೆಗಳು ಸಹ ಇದೀಗ ಇಲೆಕ್ಟ್ರಿಕ್ ವಾಹನ ಉತ್ಪಾದನೆ ಮಾಡುತ್ತಿವೆ.
Team Udayavani, Mar 26, 2022, 2:46 PM IST
ಹುಬ್ಬಳ್ಳಿ: ಪರಿಸರಸ್ನೇಹಿ ಇಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಕಡೆ ಜನರು ಹೆಚ್ಚು ವಾಲುತ್ತಿದ್ದು, ಪೆಟ್ರೋಲ್ ವಾಹನಗಳ ವಹಿವಾಟಿಗೆ ಹೊಡೆತ ಬೀಳತೊಡಗಿದೆ. ಇ-ಸ್ಕೂಟರ್ ಬಳಕೆಯ ಹೊಸ ಟ್ರೆಂಡ್ ಶುರುವಾಗಿದೆ. ಪೆಟ್ರೋಲ್ ದರ ಲೀಟರ್‌ಗೆ 100ರೂ. ದಾಟಿರುವುದರಿಂದ ಅವಳಿನಗರಗಳಲ್ಲಿ ಇಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ಹೆಚ್ಚಾಗಿದೆ. ಇ-ಸ್ಕೂಟರ್‌ಗಳನ್ನು ಬುಕ್ ಮಾಡಿದ ವಾರದಲ್ಲಿ ವಾಹನ ದೊರೆಯತೊಡಗಿದೆ.
ಬೇಡಿಕೆ ಇಳಿಮುಖ: ನಗರದ ಬಹುತೇಕ ಪೆಟ್ರೋಲ್ ಬೈಕ್ ಶೋರೂಮ್‌ಗಳಲ್ಲಿ ಕಳೆದ ಕೆಲವು ದಿನಗಳಿಂದ ವಾಹನಗಳ ಮಾರಾಟ ಇಳಿಮುಖವಾಗಿದೆ. ಟಿವಿಎಸ್, ಬಜಾಜ್ ಸೇರಿದಂತೆ ಇನ್ನಿತರ ವಾಹನಗಳ ಮಾರಾಟದಲ್ಲಿ ಶೇ.30-40 ಇಳಿಮುಖವಾಗಿರುವುದು ಕಂಡುಬಂದಿದೆ.
ಆದರೆ ಹೀರೊ ಹಾಗೂ ಹೊಂಡಾ ಕಂಪನಿಯ ಮಾರಾಟದಲ್ಲಿ ಅಷ್ಟೇನೂ ಪರಿಣಾಮ ಬೀರಿರುವುದು ಕಂಡುಬಂದಿಲ್ಲ,ಈ ಹಿಂದೆ ಇಲೆಕ್ಟ್ರಿಕ್ ವಾಹನಗಳ ಖರೀದಿ ದೊಡ್ಡ ನಗರಗಳಲ್ಲಿ ಮಾತ್ರ ಜೋರಾಗಿತ್ತು. ಈಗ ದ್ವಿತೀಯ ಸ್ತರದ ನಗರಗಳಲ್ಲಿ ಬ್ಯಾಟರಿ ಚಾಲಿತ ದ್ವಿಚಕ್ರ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಮೊದಲು ಇ ಸ್ಕೂಟರ್ ಅನ್ನು ಪರಿಸರ ಕಾಳಜಿ ಮಾಡುವವರು ಮಾತ್ರ ಬಳಕೆ ಮಾಡುತ್ತಿದ್ದರು. ಆದರೆ, ಸಾಂಪ್ರದಾಯಿಕ ಇಂಧನ ಬೆಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚತೊಡಗಿದೆ.
ಪೆಟೋಲ್ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆಗಳು ಸಹ ಇದೀಗ ಇಲೆಕ್ಟ್ರಿಕ್ ವಾಹನ ಉತ್ಪಾದನೆ ಮಾಡುತ್ತಿವೆ. ಇವುಗಳೊಂದಿಗೆ ಓಲಾ, ಏಥರ್ ಸ್ಟಾರ್ಟ್‌ಅಪ್ ಗಳು ಮಿಂಚುತ್ತಿವೆ. ಇವುಗಳೊಂದಿಗೆ ಚೀನಾದ ಕೆಲ ಕಂಪನಿಗಳ ಬ್ಯಾಟರಿ ಆಧಾರಿತ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿವೆ. ಡಿಸೈನ್, ಬಣ್ಣ ಮತ್ತಿತರ ವಿಭಾಗಗಳಲ್ಲಿಯೂ ಪೆಟ್ರೋಲ್ ಸ್ಕೂಟರ್‌ಗಳಿಗೆ ಸ್ಪರ್ಧೆ ನೀಡುವ ದಿಸೆಯಲ್ಲಿ ಇ-ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.
80ರಿಂದ 1,95,000 ರೂ.ವರೆಗೆ
ಈಗಾಗಲೇ ಮಾರುಕಟ್ಟೆಯಲ್ಲಿ ಓಲಾ ಎಸ್1, ಓಲಾ ಎಸ್1 ಪ್ರೊ, ಏಥರ್ 450ಎಕ್ಸ್, 450 ಪ್ಲಸ್, ಕೊಮಾತಿ ಎಸ್‌ಐ, ಎಕ್ಸ್‌ಟಿಟಿ, ಎಕ್ಸ್4, ಬಜಾಜ್ ಚೇತಕ್, ಟಿವಿಎಸ್ ಐಕ್ಯೂಬ್ ಇಲೆಕ್ಟ್ರಿಕ್, ಓನಾವಾ ಐಪ್ರಸ್, ಹೀರೋ ಆಪ್ಟಿಮಾ ಸೇರಿದಂತೆ ವಿವಿಧ ಕಂಪನಿಗಳ ಹಲವು ಬಗೆಯ ಸ್ಕೂಟರ್‌ಗಳಿವೆ. ಇವುಗಳ ಬೆಲೆ 80,000ರೂ.ಗಳಿಂದ 1,95,000 ರೂ.ವರೆಗೆ ಇವೆ. ಈಗಾಗಲೇ ನಗರದಲ್ಲಿ ಏಥರ್ ಎನರ್ಜಿ ವತಿಯಿಂದ ನಾಲ್ಕು ಕಡೆ ಸ್ಪೀಡ್ ಚಾರ್ಜಿಂಗ್ ಪಾಯಿಂಟ್ ಮಾಡಲಾಗಿದ್ದು, ಇನ್ನೂ ನಾಲ್ಕು ಕಡೆ ಮಾಡಲು ಸಿದ್ಧತೆ ನಡೆದಿದೆ.
ಕೆಲವೊಂದು ಇಲೆಕ್ಟ್ರಿಕ್ ವಾಹನಗಳಿಗೆ ನೋಂದಣಿಯಲ್ಲಿ ರಿಯಾಯಿತಿ ಇದ್ದು, ಇನ್ನು ಕೆಲವು ವಾಹನಗಳಿಗೆ ನೋಂದಣಿ ಕಡ್ಡಾಯವಾಗಿದೆ. ಇಲೆಕ್ಟ್ರಿಕ್ ವಾಹನಗಳಿಗೆ ಟ್ಯಾಕ್ಸ್‌ನಲ್ಲಿ ರಿಯಾಯಿತಿಯೂ ಇದೆ. 250 ವ್ಯಾಟ್‌ಗಿಂತ ಕಡಿಮೆ ಶಕ್ತಿಯ ಬ್ಯಾಟರಿ ಹಾಗೂ 25 ಕಿಮೀ ವೇಗಮಿತಿ ಇರುವ ಇ-ವಾಹನಗಳಿಗೆ ನೋಂದಣಿ ಅಗತ್ಯವಿಲ್ಲ. ಇದಕ್ಕಿಂತ ಹೆಚ್ಚಿನ ಶಕ್ತಿಶಾಲಿ ಬ್ಯಾಟರಿ ಇರುವ ಹಾಗೂ ವೇಗ ಹೆಚ್ಚಳವಿರುವ ವಾಹನಗಳಿಗೆ ನೋಂದಣಿ ಕಡ್ಡಾಯ.
ಕೆ. ದಾಮೋದರ, ಆರ್‌ಟಿಒ ಹುಬ್ಬಳ್ಳಿ
ಸದ್ಯ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಇಲೆಕ್ಟ್ರಿಕ್ ಬೈಕ್‌ಗಳದ್ದೇ ಹವಾ ನಡೆಯುತ್ತಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಬೈಕ್ ಸವಾರಿ ಮಾಡಬಹುದು. ಮನೆಯಲ್ಲಿಯೇ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಬಹುದಾಗಿದ್ದು, ಪರಿಸರ ಸ್ನೇಹಿಯೂ ಆಗಿದೆ. ಕೆಲವೊಂದು ಮಾಡೆಲ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಅಂತಹವುಗಳ ಕೊರತೆ ಕಂಡುಬರುತ್ತಿದೆ. ಯುಗಾದಿ ಹಿನ್ನೆಲೆಯಲ್ಲಿ ವಾಹನಗಳಿಗೆ ಇನ್ನೂ ಹೆಚ್ಚಿನ ಬೇಡಿಕೆ ಬರುವ ನಿರೀಕ್ಷೆ ಇದೆ.
ಅನಿಲ್ ಬಾಗರೇಚಾ,
ಕೊಮಾಕಿ ವೆಹಿಕಲ್ಸ್ ಶಾಖೆಯ ಮಾಲೀಕ
ಇಲೆಕ್ಟ್ರಿಕ್ ಬೈಕ್‌ಗಳು ಮಾರುಕಟ್ಟೆಗೆ ಬಂದಾಗಿನಿಂದ ಪೆಟ್ರೋಲ್ ಬೈಕ್ ಗಳ ಮಾರಾಟದಲ್ಲಿ ಸುಮಾರು ಶೇ.30 ಇಳಿಮುಖವಾಗಿದೆ. ಪ್ರತಿ ತಿಂಗಳು ಕಡಿಮೆ ಎಂದರೂ 120ಕ್ಕೂ ಹೆಚ್ಚು ವಾಹನಗಳನ್ನು ಮಾರುತ್ತಿದ್ದೆವು. ಆದರೆ ಇದೀಗ ಅದು 80-90 ವಾಹನಗಳಿಗೆ ಬಂದು ನಿಂತಿದೆ.
ಎಡ್ವರ್ಡ್ ಸೈಮನ್, ಬೆಲ್ಲದ ಹೀರೊ ಧಾರವಾಡ ಬ್ರ್ಯಾಂಚ್ ವ್ಯವಸ್ಥಾಪಕ
ಕೆಲ ದಿನಗಳಿಂದ ಹಳೇ ವಾಹನ ಮಾರಾಟದಲ್ಲೂ ಇಳಿಮುಖ ಕಂಡಿದೆ. ಹೆಚ್ಚಿನ ಜನರು ಇಲೆಕ್ಟ್ರಿಕ್ ಬೈಕ್ ಖರೀದಿಗೆ ಮುಂದಾಗಿದ್ದು ಕಾರಣ ಇರಬಹುದು.
ರಾಜು ಕೋರ್ಯಾನಮಠ, ಕಾರ್ಯದರ್ಶಿ
ಹಳೇ ದ್ವಿಚಕ್ರ ವಾಹನಗಳ ಮಾರಾಟಗಾರರ ಹಾಗೂ ಮಧ್ಯವರ್ತಿಗಳ ಸಂಘ
*ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Apple AirPod; ಮುಂದಿನ ವರ್ಷದಿಂದ ದೇಶದಲ್ಲೇ ಉತ್ಪಾದನೆ
Reliance Digital ‘ಹ್ಯಾಪಿನೆಸ್ ಪ್ರಾಜೆಕ್ಟ್’ ನಡೆಸಲಿದ್ದಾರೆ ಸೆಲಿಬ್ರಿಟಿ ಫರಾಹ್ ಖಾನ್
Spam Call/SMS report: ಸ್ಪ್ಯಾಮ್ ವರದಿ ಬಿಡುಗಡೆಗೊಳಿಸಿದ ಏರ್‌ಟೆಲ್
ಮಂಗಳೂರಿನ ಐಟಿ ಕ್ಷೇತ್ರದಲ್ಲಿ 1800ಕ್ಕೂ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಷ್ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.