Education: ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ
ಕಾರ್ಮಿಕ ಇಲಾಖೆ ಆದೇಶ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೆಟ್ಟು
Team Udayavani, Nov 6, 2023, 12:22 AM IST
ಕಲಬುರಗಿ: ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಾರ್ಷಿಕ ಶೈಕ್ಷಣಿಕ ಸಹಾಯಧನಕ್ಕೆ ರಾಜ್ಯ ಸರಕಾರ ಭಾರೀ ಪ್ರಮಾಣದ ಕತ್ತರಿ ಹಾಕಿದ್ದು, “ಗ್ಯಾರಂಟಿ’ಗೆ ಹಣ ಹೊಂದಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಆದೇಶ 2022-23ಕ್ಕೂ ಅನ್ವಯ ಎನ್ನುವ ಮೂಲಕ ಈಗಾಗಲೇ ಸಹಾಯಧನ ಬರುತ್ತದೆಂದು ನಂಬಿಕೊಂಡು ಸಾಲ ಮಾಡಿ ಉನ್ನತ ಶಿಕ್ಷಣ ಪಡೆಯಲು ಪ್ರವೇಶ ಪಡೆದ ಮಕ್ಕಳಿಗೂ ಬರೆ ಎಳೆದಿದೆ.
ಈ ಆದೇಶವನ್ನು ಅ.30ರಂದು ಕಾರ್ಮಿಕ ಇಲಾಖೆ ಹೊರಡಿಸಿದೆ. ಶೇ.80ರಷ್ಟು ಸಹಾಯಧನ ಕಡಿತ ಮಾಡಿದೆ.
ಒಂದರಿಂದ 4ನೇ ತರಗತಿವರೆಗೆ ವಾರ್ಷಿಕ 5 ಸಾವಿರ ರೂ., 5ರಿಂದ 8ನೇ ತರಗತಿಗೆ 8 ಸಾವಿರ ಮತ್ತು 9ರಿಂದ ಮೆಟ್ರಿಕ್‌ವರೆಗೆ 12 ಸಾವಿರ ರೂ. ಇತ್ತು. ಅದನ್ನು ಕ್ರಮವಾಗಿ ಒಂದರಿಂದ 5ನೇ ತರಗತಿವರೆಗೆ ವಾರ್ಷಿಕ 1,100, 6 ಮತ್ತು 7ನೇ ತರಗತಿಗೆ 1,250, 8ನೇ ತರಗತಿಗೆ 1,350 ರೂ. ಮತ್ತು 9ರಿಂದ ಮೆಟ್ರಿಕ್‌ವರೆಗಿನ ವಾರ್ಷಿಕ ಸಹಾಯಧನವನ್ನು 3,000 ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ಪದವಿ ಶಿಕ್ಷಣಕ್ಕೆ 6 ಸಾವಿರ ರೂ., ಪಿಎಚ್‌ಡಿಗೆ 11,000 ರೂ., ಎಂಡಿ ಕೋರ್ಸ್‌ಗೆ 12,000 ರೂ., ಎಲ್‌ಎಲ್‌ಬಿಗೆ 10,000 ರೂ., ಎಂಜಿನಿ ಯರಿಂಗ್, ಎಂಟೆಕ್, ನರ್ಸಿಂಗ್, ಪ್ಯಾರಾ ಮೆಡಿಕಲ್, ಸ್ನಾತಕೋತ್ತರ ಕೋರ್ಸ್‌ಗೆ ವಾರ್ಷಿಕ 10 ಸಾವಿರ ರೂ. ಸಹಾಯಧನ ನೀಡಲು ಕಾರ್ಮಿಕ ಇಲಾಖೆ ತೀರ್ಮಾನ ಕೈಗೊಂಡಿದೆ.
ಹಿಂದೆ ಎಷ್ಟಿತ್ತು?
ಈ ಹಿಂದೆ ಪದವಿಗೆ 25 ಸಾವಿರ ರೂ., ಎಲ್‌ಎಲ್‌ಬಿ, ಎಲ್‌ಎಲ್‌ಎಂ ಓದಲು 30 ಸಾವಿರ ರೂ., ಸ್ನಾತಕೋತ್ತರ ಪದವಿಗೆ 35 ಸಾವಿರ ರೂ., ಬಿಇ, ಬಿಟಕ್‌ಗೆ 50 ಸಾವಿರ ರೂ., ಎಂಟೆಕ್‌ಗೆ 60 ಸಾವಿರ ರೂ., ಎಂಬಿಬಿಎಸ್, ಎಂಡಿಗೆ 60ರಿಂದ 75 ಸಾವಿರ ರೂ.ಗಳನ್ನು ನೀಡಲಾಗುತ್ತಿತ್ತು.
ಸರಕಾರದ ಈ ಆದೇಶದಿಂದ ಈಗಾಗಲೇ ಕೆಲವು ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆದಿರುವ ಮಕ್ಕಳ ಗತಿ ಏನು? ಅಲ್ಲದೆ, ಈ ಆದೇಶ ಹಿಂದಿನ ಸಾಲಿಗೂ ಅನ್ವಯ ಎನ್ನುವುದು ಎಷ್ಟು ಸರಿ. ಇಂತಹ ನಿರ್ಧಾರದಿಂದ ಕೂಡಲೇ ಸರಕಾರ ಹಿಂದೆ ಸರಿಯಬೇಕು. ಕಾರ್ಮಿಕ ಸಚಿವರು ಕೂಡಲೇ ಇದನ್ನು ಪರಿಷ್ಕರಿಸಬೇಕು. – ಶಂಕರ ಕಟ್ಟಿಸಂಗಾವಿ, ಮಾಜಿ ನಿರ್ದೇಶಕ, ರಾಜ್ಯ ಕಾರ್ಮಿಕರ ಕಲ್ಯಾಣ ಮಂಡಳಿ
ಸರಕಾರದ ಆದೇಶಗಳಿಂದ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಬದುಕು ಹಾಳಾಗುತ್ತದೆ. ಪರಿಜ್ಞಾನವಿಲ್ಲದೆ ಶೇ.80 ಸಹಾಯಧನ ಕಡಿಮೆ ಮಾಡಲಾಗಿದೆ. ಅಲ್ಲದೆ, ಇದು ಮಂಡಳಿ ಹಣ. ಇದಕ್ಕೆ ಸರಕಾರವನ್ನು ಕಾಯುವ ಅಗತ್ಯವೇನೂ ಇಲ್ಲ. ಸರಕಾರ ತನ್ನ ನಿರ್ಧಾರವನ್ನು ಮರು ಪರಿಶೀಲಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ.
– ಹಣಮಂತ ಪೂಜಾರಿ, ಕಾರ್ಯದರ್ಶಿ, ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘ
ಸೂರ್ಯಕಾಂತ್ ಎಂ.ಜಮಾದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
Chikkmagalur: ಸಿ.ಟಿ ರವಿ ಬಂಧನ ಖಂಡಿಸಿ ಪ್ರತಿಭಟನೆ; ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Mandya: ಹಲವು ಪವಾಡಗಳ ಕ್ಷೇತ್ರ ಶ್ರೀಕಾಲಭೈರವೇಶ್ವರ; ಚಿಕ್ಕರಸಿಕೆರೆ ನಡೆದಾಡುವ ದೈವ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Mandya: ಮನಸೂರೆಗೊಳ್ಳುವ ಶ್ರೀ ಆತ್ಮಲಿಂಗೇಶ್ವ ರ-ಧಾರ್ಮಿಕ ಚರ್ಚೆ, ಸಂವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.