ಸೈಬರ್‌ ಕ್ರೈಂ; ಪತ್ತೆ ಇಲ್ಲ, ಶಿಕ್ಷೆಯೂ ಇಲ್ಲ!

ಸೈಬರ್‌ ವಂಚಕರಿಗೆ ವಿದ್ಯಾವಂತರೇ ಹೆಚ್ಚು ಬಲಿ

Team Udayavani, Apr 20, 2022, 9:14 AM IST

1

ಬೆಂಗಳೂರು: ವರ್ಷಗಳು ಉರುಳಿದಂತೆ ಸೈಬರ್‌ ಅಪರಾಧಗಳ ಸಂಖ್ಯೆ ಬೆಟ್ಟದಷ್ಟಾಗುತ್ತಿದ್ದರೂ, ಶಿಕ್ಷೆಗೊಳಗಾದವರ ಸಂಖ್ಯೆ ಮಾತ್ರ ಎರಡಂಕಿಯೂ ದಾಟುತ್ತಿಲ್ಲ! ವಂಚಕರು ಲಕ್ಷ ಲಕ್ಷ ದೋಚುತ್ತಲೇ ಇದ್ದರೂ, ಕಾನೂನಿನ ಕೈಗೆ ಮಾತ್ರ ಅವರು ಸಿಕ್ಕಿಬೀಳುತ್ತಲೇ ಇಲ್ಲ!

ಹೌದು. ಸೈಬರ್‌ ಅಪರಾಧಗಳನ್ನು ಮಟ್ಟ ಹಾಕಲು ಎಷ್ಟೇ ಕಠಿಣ ಕಾನೂನುಗಳು ಜಾರಿಗೆ ತಂದರೂ, ಏನೇ ಆಧುನಿಕ ತಂತ್ರಜ್ಞಾನ ಬಳಸಿದರೂ ಅದಕ್ಕೆ ಸವಾಲು ಎಂಬಂತೆ ರಾಜ್ಯ ದಲ್ಲಿ ಸೈಬರ್‌ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ವಂಚಕರ ಪತ್ತೆ ಪೊಲೀಸರಿಗೆ ಕಬ್ಬಿಣದ ಕಡಲೆಯಾಗಿದೆ. ದಾಖಲಾದ ಪ್ರಕರಣಗಳ ಪೈಕಿ ಪತ್ತೆಯಾಗದ ಪ್ರಕರಣಗಳದ್ದೇ ಸಿಂಹಪಾಲು.

ವಿಶೇಷವೆಂದರೆ, ಸೈಬರ್‌ ವಂಚಕರ ಜಾಲಕ್ಕೆ ಬಲಿಯಾಗುತ್ತಿರುವವರಲ್ಲಿ ವಿದ್ಯಾವಂತರೇ ಹೆಚ್ಚಿದ್ದಾರೆ. ಅಷ್ಟೇ ಅಲ್ಲ, ವಂಚಕರಿಂದಾಗಿ ಜನರು ಕಳೆದುಕೊಂಡ ಹಣದ ಪೈಕಿ ಈವರೆಗೆ ಜಪ್ತಿ ಮಾಡಲು ಸಾಧ್ಯವಾಗಿದ್ದು ಕೇವಲ ಶೇ.20ರಿಂದ 21ರಷ್ಟು ಮಾತ್ರ.

ಕೊರೊನಾ ಕಾಲದಲ್ಲೂ ವಂಚನೆ: ಕಳೆದ 4 ವರ್ಷಗಳ ಅಂಕಿ-ಅಂಶಗಳ ಪ್ರಕಾರ, 2019ರಲ್ಲಿ ಇಂಥ ವಂಚನೆ ಪ್ರಕರಣಗಳ ಸಂಖ್ಯೆ 11 ಸಾವಿರದ ಗಡಿ ದಾಟಿದೆ. 2020 ಮತ್ತು 2021ರ ಕೊರೊನಾದಿಂದ ಜನ ತತ್ತರಿಸಿದ್ದಾಗಲೂ ಸೈಬರ್‌ ವಂಚಕರು ಕೈಚಳಕ ತೋರಿದ್ದಾರೆ. 2020ರಲ್ಲಿ 10 ಸಾವಿರ ಮತ್ತು 2021ರಲ್ಲಿ 8 ಸಾವಿರಕ್ಕೂ ಹೆಚ್ಚು ವಂಚನೆ ನಡೆದಿದೆ.

ಈ ವರ್ಷ ಮಾರ್ಚ್‌ ಅಂತ್ಯದವರೆಗೆ ಇದು 3 ಸಾವಿರ ಸಮೀಪಿಸಿದೆ. ಸೈಬರ್‌ ಕ್ರೈಂ ಪ್ರಕರಣಗಳಲ್ಲಿ “ಐಟಿ ಹಬ್‌’ ಬೆಂಗಳೂರು ಮೊದಲ ಸ್ಥಾನದಲ್ಲಿದ್ದರೆ, ಮೈಸೂರು, ಹುಬ್ಬಳ್ಳಿ, ತುಮಕೂರು, ರಾಮನಗರ, ಶಿವಮೊಗ್ಗ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.

ಹೆಚ್ಚು: ದಾಖಲಾದ ಪ್ರಕರಣಗಳಿಗಿಂತ ಪತ್ತೆಯಾಗದ ಪ್ರಕರಣಗಳ ಸಂಖ್ಯೆಯೇ ಹೆಚ್ಚು. ಪೊಲೀಸರ ಅಂಕಿ-ಅಂಶಗಳ ಪ್ರಕಾರ, ಕಳೆದ 4 ವರ್ಷಗಳಲ್ಲಿ ಸುಮಾರು ಶೇ.22ರಷ್ಟು ಪ್ರಕರಣಗಳು ಮಾತ್ರ ಪತ್ತೆಯಾಗಿವೆ. ಬಾಕಿ ಪ್ರಕರಣಗಳ ಪತ್ತೆ ಕಾರ್ಯ ಇನ್ನೂ ನಡೆಯುತ್ತಿದೆ.

ಪತ್ತೆ ಕಬ್ಬಿಣದ ಕಡಲೆ: ಸೈಬರ್‌ ಕಳ್ಳರು ನೆರೆಯ ಒಡಿಶಾ, ಮಹಾರಾಷ್ಟ್ರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ ಹೀಗೆ ದೇಶ ವಿವಿಧ ರಾಜ್ಯಗಳು ಅಥವಾ ವಿದೇಶದಲ್ಲಿ ಕುಳಿತು ಕೇವಲ ಮೊಬೈಲ್‌ ನಂಬರ್‌, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಮಾಹಿತಿ ಪಡೆದು ಕ್ಷಣಾರ್ಧದಲ್ಲಿಯೇ ಖಾತೆಯನ್ನು ಬರಿದಾಗಿಸುತ್ತಿದ್ದಾರೆ. ಅಂತಹ ರಹಸ್ಯ ಸ್ಥಳದಲ್ಲಿ ಕುಳಿತು ಅಮಾಯಕ ಜನರ ಹಣ ದೋಚುವ ವಂಚಕರ ಪತ್ತೆ ಪೊಲೀಸರಿಗೆ ಕಬ್ಬಿಣ ಕಡಲೆಯಾಗಿದೆ. ಕೆಲವೊಮ್ಮೆ ಐಪಿ ವಿಳಾಸ ಸಿಕ್ಕರೆ, ಕೃತ್ಯ ಎಸಗಿದ ವ್ಯಕ್ತಿ ಸಿಗುವುದಿಲ್ಲ. ಆರೋಪಿ ಸಿಕ್ಕರೂ, ಆರೋಪ ಸಾಬೀತಿಗೆ ಬೇಕಾದ ಸಾಕ್ಷ್ಯ ದೊರೆಯುವುದಿಲ್ಲ. ಹೀಗಾಗಿ ಆರೋಪಿಗಳನ್ನು ಬಂಧಿಸಿದರೂ ಅವರಿಗೆ ಶಿಕ್ಷೆಯಾಗುವ ಪ್ರಮಾಣ ಕಡಿಮೆ ಎಂದು ಸೈಬರ್‌ ಕ್ರೈಂ ಮೂಲಗಳು ಹೇಳುತ್ತವೆ.

ಒಟಿಪಿ ವಂಚನೆ: ಪೊಲೀಸರ ಪ್ರಕಾರ ಸೈಬರ್‌ ವಂಚನೆಯಲ್ಲಿ ಒಟಿಪಿ ವಂಚನೆ ಪ್ರಕರಣಗಳೇ ಹೆಚ್ಚಾಗಿವೆ. ಹೆಚ್ಚು ವಿದ್ಯಾವಂತರೇ ಸೈಬರ್‌ ವಂಚಕರು ಕರೆ ಮಾಡಿದ ಕೂಡಲೇ ತಮ್ಮ ಮೊಬೈಲ್‌ಗೆ ಬರುವ ಒಟಿಪಿ ನೀಡಿ ಲಕ್ಷ-ಲಕ್ಷ ಕಳೆದುಕೊಳ್ಳುತ್ತಿದ್ದಾರೆ. 2019ರಲ್ಲಿ 4,254 ಪ್ರಕರಣಗಳಲ್ಲಿ 67 ಪ್ರಕರಣ ಪತ್ತೆಯಾಗಿದೆ. 2020ರಲ್ಲಿ 2,545 ಪ್ರಕರಣಗಳ ಪೈಕಿ 477 ಪತ್ತೆಯಾಗಿವೆ. 2021ರಲ್ಲಿ 2130ರ ಪೈಕಿ 472, 2022ರಲ್ಲಿ 450ರಲ್ಲಿ 37 ಪತ್ತೆಯಾಗಿವೆ. ಸೋಷಿಯಲ್‌ ಮಿಡಿಯಾ ವಂಚನೆಯಲ್ಲಿ 2019ರಲ್ಲಿ 421ರಲ್ಲಿ 57, 2020ರಲ್ಲಿ 2095 ಪೈಕಿ 796, 2021ರಲ್ಲಿ 1335 ಪೈಕಿ 352, 2022ರಲ್ಲಿ 249ರಲ್ಲಿ 6 ಪತ್ತೆಯಾಗಿವೆ. ಇನ್ನೂ ಆನ್‌ಲೈನ್‌ ಫಿಶಿಂಗ್‌ ಕೇಸ್‌ಗಳು, 2019ರಲ್ಲಿ 2737ರಲ್ಲಿ 116, 2020ರಲ್ಲಿ 3215ರಲ್ಲಿ 633, 2021ರಲ್ಲಿ 2692ರಲ್ಲಿ 521, 2022ರಲ್ಲಿ 520ರ ಪೈಕಿ 23 ಪ್ರಕರಣಗಳು ಸಿಕ್ಕಿವೆ.

ಹಣ ಜಪ್ತಿಯೂ ಕ್ಷೀಣ: ಕಳೆದ 4 ವರ್ಷಗಳಲ್ಲಿ ಪ್ರತಿ ವರ್ಷ ವಂಚನೆ ಹಣ ಕೋಟಿ ಲೆಕ್ಕದಲ್ಲಿ ಏರಿಕೆ ಯಾಗುತ್ತಿದೆ. ಆದರೆ, ಆರೋಪಿಗಳ ಬಂಧನದ ಜತೆ, ಅವರಿಂದ ಜಪ್ತಿ ಮಾಡಲಾದ ಹಣ ಪ್ರಮಾಣ ಶೇ.20ರಿಂದ 20ರಷ್ಟು ಮಾತ್ರ. ಕೆಲ ಸಂದರ್ಭದಲ್ಲಿ ವಂಚಕ ಎಲ್ಲ ಹಣವನ್ನು ದುರ್ಬಳಕೆ ಮಾಡಿ ಕೊಂಡಿರುತ್ತಾನೆ.

ಸೈಬರ್‌ ಕ್ರೈಂ ಬಗ್ಗೆ ಎಚ್ಚರಿಕೆ ವಹಿಸಿ:

ಸೈಬರ್‌ ಕ್ರೈಂ ಎಂದರೆ, ಒಟಿಪಿ, ಸಾಮಾಜಿಕ ಜಾಲ ತಾಣ ವಂಚನೆ, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ವಂಚನೆ, ಆನ್‌ಲೈನ್‌ ಶಾಪಿಂಗ್  ಮಾತ್ರವಲ್ಲ.  ಸೈಬರ್‌ ಅಶ್ಲೀಲತೆ, ಸೈಬರ್‌ ಮಾನಹಾನಿ, ಜೂಜು, ಆನ್‌ಲೈನ್‌ ಭಯೋತ್ಪಾದನೆ, ಆನ್‌ಲೈನ್‌ ಗೇಮಿಂಗ್‌, ಬ್ಲ್ಯಾಕ್‌ ಮೇಲ್‌. ಸಾಲ ಕೊಡುವ ಸೋಗಿನಲ್ಲಿ ಸುಸ್ತಿದಾರರ ಮಾನ ಹಾನಿ ಮಾಡುವಂತಹ ಪ್ರಕರಣಗಳು. ತೀರಾ ಇತ್ತೀಚೆಗೆ ಬ್ಯಾಂಕ್‌, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಮಾಹಿತಿ ಕೊಡದೆಯೂ ಸೈಬರ್‌ ವಂಚಕರು ಹಣ ದೋಚುತ್ತಿದ್ದಾರೆ. ಗೂಗಲ್‌ ಸರ್ಜ್‌ ಎಂಜಿನ್‌ನಲ್ಲಿ ಸಿಗುವ ಮೊಬೈಲ್‌ ನಂಬರ್‌ಗಳಿಗೆ ಕರೆ ಮಾಡಿದರೂ ಹಣ ಕಡಿತವಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟರ್‌ ಸೇರಿ ಎಲ್ಲ ಮಾದರಿಯ ಸಾಮಾಜಿಕ ಜಾಲತಾಣ ಬಳಕೆದಾರರು ಅಪರಿಚಿತರ ಸಂದೇಶ, ಕರೆಗಳ ಬಗ್ಗೆ ಜಾಗ್ರತೆ ವಹಿಸಬೇಕಿದೆ.

ಸೈಬರ್‌ ಕ್ರೈಂ ಪತ್ತೆಗೆ ಸಾಕಷ್ಟು ತಾಂತ್ರಿಕ ತನಿಖೆ ನಡೆಸಬೇಕಿರುತ್ತದೆ. ಹೀಗಾಗಿ ಪ್ರಕರಣಗಳ ಇತ್ಯರ್ಥ ನಿಧಾನವಾಗುತ್ತಿದೆ. ಆದರೂ ಪತ್ತೆ ಕಾರ್ಯ ನಿರಂತರವಾಗಿ ಸಾಗಿದೆ. ● ಕಮಲ್‌ ಪಂತ್‌, ನಗರ ಪೊಲೀಸ್‌ ಆಯುಕ್ತ

-ಮೋಹನ್ ಭದ್ರಾವತಿ

ಟಾಪ್ ನ್ಯೂಸ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Vijay Hazare Trophy: ಮಯಾಂಕ್‌ ಅಗರ್ವಾಲ್‌ ಶತಕದಾಟ; ಪಂಜಾಬ್‌ ಕೈನಿಂದ ಜಯ ಕಸಿದ ಕರ್ನಾಟಕ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Borewell Tragedy: 4ನೇ ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯಾಚರಣೆ… ಬಾಲಕಿಯ ಸ್ಥಿತಿ ಹೇಗಿದೆ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್‌

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್‌ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?

3

Bengaluru: ಕ್ಯಾಬ್‌ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್‌ ಎಂಜಿನಿಯರ್‌ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Actress: ರೊಮ್ಯಾನ್ಸ್‌ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್‌ ಗಳು ಪತ್ತೆ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

INDvAUS: ಬ್ಯಾನ್‌ ತಪ್ಪಿಸಿಕೊಂಡ ವಿರಾಟ್‌ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

Belagavi: ಪಿಒಕೆ ಬಗ್ಗೆ ಕಾಂಗ್ರೆಸ್‌ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.