ಕೇರಳದಿಂದ ಕಾಶ್ಮೀರಕ್ಕೆ ಸೈಕಲೇರಿ ಹೊರಟರು


Team Udayavani, Sep 4, 2021, 6:32 AM IST

ಕೇರಳದಿಂದ ಕಾಶ್ಮೀರಕ್ಕೆ ಸೈಕಲೇರಿ ಹೊರಟರು

ಕುಂದಾಪುರ: ಮೂವರು ಯುವಕರು, ಒಬ್ಬರು ಯುವತಿ. ಎಲ್ಲರೂ 20ರಿಂದ 25ರ ವಯೋಮಾನದವರು. ದಿನಕ್ಕೆ 100 ಕಿ.ಮೀ.ನ ಹಾಗೆ ಒಂದೂವರೆ ತಿಂಗಳಲ್ಲಿ ಕೇರಳದಿಂದ ಕಾಶ್ಮೀರ ತಲುಪುವ ಗುರಿಯಿಂದ ಹೊರಟಿದ್ದಾರೆ.

ಪ್ರಯಾಣ
ಪ್ರಯಾಣ ಆರಂಭಿಸಿ 7ನೇ ದಿನ ಶುಕ್ರವಾರ ಕುಂದಾಪುರ ತಲುಪಿದ ಈ ತಂಡ ಸುದಿನ ಜತೆ ಮಾತನಾಡಿತು. ತಂಡದಲ್ಲಿ ಈ ವರ್ಷವಷ್ಟೇ ಪದವಿ ಮುಗಿಸಿದ ಶ್ರೀಜತ್‌ ಹಾಗೂ ಸಜ್ಞಾ, ಈಗಾಗಲೇ ವಿದ್ಯಾಭ್ಯಾಸ ಮುಗಿಸಿ ಉದ್ಯೋಗದಲ್ಲಿರುವ ವಿಜಿತ್‌ ಹಾಗೂ ರಂಜಿತ್‌ ಇದ್ದರು. ವಿಜಿತ್‌ ಪೈಂಟಿಂಗ್‌ ವೃತ್ತಿ, ರಂಜಿತ್‌ ಮೆಕ್ಯಾನಿಕ್‌ ಕೆಲಸದವರು. ಎಲ್ಲರೂ ಕೇರಳದ ಮಲಪ್ಪುರಂನವರು. ಸರಿಸುಮಾರು 3 ಸಾವಿರ ಕಿ.ಮೀ.ಗಳ ಸೈಕಲ್‌ಯಾನ. ದಿನಕ್ಕೆ 100 ಕಿ.ಮೀ.ನಷ್ಟು ಹೋಗಬೇಕೆಂಬ ಲೆಕ್ಕಾಚಾರ. ಒಂದೂವರೆ ತಿಂಗಳಲ್ಲಿ ಗುರಿ ತಲುಪುವ ವಿಶ್ವಾಸ.

ವಸತಿ
ಎಲ್ಲಿ ತಲುಪಿದರೋ ಅಲ್ಲೇ ಬಿಡಾರ. ಪರಿಚಿತರ ಮನೆ, ಸ್ನೇಹಿತರ ಮೂಲಕ ದೊರೆತ ವಿಳಾಸದ ಮನೆ ಅಥವಾ ಯಾರಾದರೂ ಸಹೃದಯಿಗಳ ಮನೆಯಲ್ಲಿ ವಾಸ್ತವ್ಯ. ದಾರಿ ಬದಿ ಸಿಕ್ಕ ಹೊಟೇಲ್‌ನ ಆಹಾರ. ಆಯಾಸವಾದಾಗ ತುಸು ವಿಶ್ರಾಂತಿ. ಸೈಕಲಲ್ಲಿ ಲೆಕ್ಕಾಚಾರದ ಬಟ್ಟೆ, ಬ್ಯಾಗ್‌, ಕುಡಿಯಲು ನೀರು ಅಷ್ಟೇ ಇವರ ಲಗೇಜು.

ಇದನ್ನೂ ಓದಿ:ಲಿಂಗಾಯತ ಪ್ರತ್ಯೇಕ ಧರ್ಮ ಕುರಿತ ಹೋರಾಟವನ್ನು ಸದ್ಯಕ್ಕೆ ಮಾಡುವುದಿಲ್ಲ

ಸೀಮಿತ ಖರ್ಚು
ಅಷ್ಟೂ ದಿನಕ್ಕೆ ಪ್ರತಿಯೊಬ್ಬರಿಗೂ 10 ರಿಂದ 15 ಸಾವಿರ ರೂ.ಯಷ್ಟು ಖರ್ಚು ತಗಲುವ ಅಂದಾಜು. ಯಾಕಾಗಿ ಈ ಸಾಹಸ ಎಂದರೆ, ಯುವಜನತೆಗೆ ಪ್ರೇರಣೆಯಾಗಲಿ ಎನ್ನುವ ಕಾರಣಕ್ಕಾಗಿ ಸೈಕಲೇರಿದ್ದಾಗಿ ಹೇಳುತ್ತಾರೆ. ಕಾಶ್ಮೀರಕ್ಕೆ ಹೋಗಬೇಕೆನ್ನುವುದು ಬಹಳ ದಿನಗಳ ಕನಸು. ಸೈಕಲಲ್ಲೇ ಹೋಗಬೇಕು ಎನ್ನುವುದು ಸಾಹಸದ ಮನಸು. ಇದಕ್ಕಾಗಿ ಮನೆ ಮಂದಿ ಒಪ್ಪಿದ್ದೇ ಒಂದು ಸೊಗಸು. ಹಾಗಾಗಿ ಎಲ್ಲರ ಹಾರೈಕೆಯಿಂದಿಗೆ ಸಾಧಿಸುವ ಛಲದಿಂದ ನಾವು ಹೊರಟಿದ್ದೇವೆ. ಈವರೆಗೆ ಪ್ರಯಾಣದಲ್ಲಿ ಯಾವುದೇ ಆತಂಕ ಎದುರಾಗಿಲ್ಲ. ಏದುಸಿರು ಬಿಡುತ್ತಾ ಸೈಕಲ್‌ ತುಳಿಯುತ್ತಿಲ್ಲ. ಆರಾಮವಾಗಿ ಗುರಿ ತಲುಪುವ ವಿಶ್ವಾಸ ಹೊಂದಿದ್ದೇವೆ ಎನ್ನುತ್ತಾರೆ.

ಪ್ರೇರಣೆಯಾಗಲಿ
ನಾನೊಬ್ಬ ಯುವತಿಯಾಗಿ ಇಂತಹ ಸಾಧನೆ ಮಾಡುವುದು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿ. ಮನೋಸ್ಥೈರ್ಯ ತುಂಬಲಿ. ನನ್ನೊಬ್ಬಳ ಜತೆ ಈ ಮೂವರು ಯುವಕರೂ ಇರುವುದು ಸಾಧಕರಿಗೆ ಧೈರ್ಯ ತುಂಬಿ ಬರಲಿ. ನಾವು ನಿಶ್ಚಿತ ಗುರಿ ನಿಗದಿಯಂತೆಯೇ ತಲುಪಲಿದ್ದೇವೆ.
-ಸಜ್ಞಾ, ಕೇರಳ

ಟಾಪ್ ನ್ಯೂಸ್

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

3

Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್‌ ಇಲ್ಲ!

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Kundapura: ಬಟ್ಟೆ ವ್ಯಾಪಾರಿ ನಾಪತ್ತೆ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-y-1-2-c

Yakshagana; 500 ವಿದ್ಯಾರ್ಥಿಗಳಿಂದ ಯಕ್ಷ ರಂಗಪ್ರವೇಶ

1-y-1-2

Yakshagana; ಕಲಾಸ್ಪಂದನದ ವಿಶಿಷ್ಟ ಪ್ರಯೋಗ ಯಕ್ಷವೀಣಾ

1-y-1

Yakshagana; ರಂಜಿಸಿದ ಯಕ್ಷಗಾನಾರ್ಚನೆ, ಭಕ್ತಿ ಸಂಗೀತ, ದಾಶರಥಿ ದರ್ಶನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.