Daily Horoscope: ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ ನಿಷ್ಠೆ ತೋರಿದರೂ ಅಡಚಣೆ ತೊರೀತು
Team Udayavani, Apr 27, 2023, 8:45 AM IST
ಮೇಷ: ಮಕ್ಕಳ ಬಗ್ಗೆ ವಿಶೇಷ ಗಮನ. ಉದ್ಯೋಗ ವ್ಯವಹಾರಗಳಲ್ಲಿ ಗೌರವ, ಪ್ರಗತಿ. ತಾಳ್ಮೆಯಿಂದ ನಡೆದುಕೊಳ್ಳಿ. ಮೇಲಧಿಕಾರಿಗಳ ಪ್ರೀತಿ ಪ್ರಾಪ್ತಿ. ಸತ್ಕರ್ಮದಲ್ಲಿ ಆಸಕ್ತಿ. ಆತುರದ ನಿರ್ಣಯ ಮಾಡದಿರಿ.
ವೃಷಭ: ನಿರೀಕ್ಷಿಸಿದಂತೆ ಅಧಿಕ ಧನ ಲಾಭ. ಉತ್ತಮ ವಾಕ್‌ಪಟುತ್ವ. ಜನಮನ್ನಣೆ. ಕುಟುಂಬ ಸುಖ ವೃದ್ಧಿ. ಸರಕಾರೀ ವ್ಯವಹಾರಗಳಲ್ಲಿ ಪ್ರಗತಿ. ಕೆಲಸ ಕಾರ್ಯಗಳಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ. ಜ್ಞಾನ ವಿದ್ಯೆಯ ಪ್ರದರ್ಶನ. ಗೌರವ ಪ್ರಾಪ್ತಿ. `
ಮಿಥುನ: ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಪರಿಶ್ರಮ ನಿಷ್ಠೆ ತೋರಿದರೂ ಅಡಚಣೆ ತೊರೀತು. ಪರರ ಕೆಲಸ ನಿರ್ವಹಿಸುವಲ್ಲಿ ಜಾಗ್ರತೆ ವಹಿಸಿ. ವಿದ್ಯೆ , ಜ್ಞಾನ ಸಂಪಾದನೆ ಕಡೆಗೆ ಗಮನಹರಿಸಿದರೆ ಯಶಸ್ಸು ಲಭಿಸಲಿದೆ. ಮಕ್ಕಳಿಂದ ಸಂತೋಷ.
ಕಟಕ: ದೂರ ಪ್ರಯಾಣ ಸಂಭವ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಹೊಸ ವ್ಯವಹಾರಗಳ ಆರಂಭ. ಸಭೆ ಸಮಾರಂಭಗಳಲ್ಲಿ ಭಾಗಿಯಾಗಿ ಮನೋರಂಜನೆ. ಆರೋಗ್ಯ ಗಮನಿಸಿ. ನಷ್ಟ ದ್ರವ್ಯ ಸಿಗುವ ಯೋಗ.
ಸಿಂಹ: ಉದ್ಯೋಗ ವ್ಯವಹಾರಗಳಲ್ಲಿ ಧನ ವೃದ್ಧಿ. ಪಿತ್ರಾರ್ಜಿತ ಆಸ್ತಿ ವಿಚಾರಗಳ ಜವಾಬ್ದಾರಿ ಹೆಚ್ಚಳ. ಮಾತಿನಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ದೂರದ ಊರಿನ ಕೆಲಸ ಕಾರ್ಯಗಳಲ್ಲಿ ಪ್ರಗತಿ.
ಕನ್ಯಾ: ಪಾಲುದಾರಿಕಾ ವ್ಯವಹಾರಗಳಲ್ಲಿ ಹೆಚ್ಚಿದ ಜವಾಬ್ದಾರಿ. ದೂರ ಪ್ರಯಾಣ. ಮನೋರಂಜನೆ. ಗೃಹದಲ್ಲಿ ಸಂತಸದ ವಾತಾವರಣ. ಮಕ್ಕಳಿಂದ ಶುಭ ವಾರ್ತೆ. ಅಧಿಕ ಧನ ವ್ಯಯ ಸಂಭವ. ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.
ತುಲಾ: ಗೃಹ ವಾಹನಾದಿ ವಿಚಾರಗಳಲ್ಲಿ ಆಸಕ್ತಿ. ಕ್ರಯ ವಿಕ್ರಯ ಸಂಭವ. ನೂತನ ಮಿತ್ರರ ಸಮಾಗಮದಿಂದ ಲಾಭ. ಕೆಲಸ ಕಾರ್ಯಗಳಲ್ಲಿ ಪ್ರಗತಿದಾಯಕ ಬದಲಾವಣೆ. ಆರ್ಥಿಕ ವಿಚಾರದಲ್ಲಿ ಸರಿಯಾದ ಯೋಚನೆ ಯೋಜನೆ ಅಗತ್ಯ.
ವೃಶ್ಚಿಕ: ಅವಿವಾಹಿತರಿಗೆ ವಿವಾಹ ಭಾಗ್ಯ ಒದಗುವುದು. ದೂರ ಪ್ರಯಾಣ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾನ್ವಿತ ಪ್ರಗತಿ ಬದಲಾವಣೆ ಸಂಭವ. ಅಧಿಕ ಧನಾರ್ಜನೆ. ಉತ್ತಮ ವಾಕ್‌ಚತುರತೆಯ ಕಾರ್ಯ ವೈಖರಿ.
ಧನು: ಹಿರಿಯರ ಮಾರ್ಗದರ್ಶನದಂತೆ ನಡೆಯಿರಿ. ತಾಳ್ಮೆ ಸಹನೆಯಿಂದ ವ್ಯವಹರಿಸಿ. ಆರೋಗ್ಯ ಗಮನಿಸಿ. ಸುಮ್ಮನೆ ಬೇರೆಯವರ ವಿಚಾರದಲ್ಲಿ ಭಾಗವಹಿಸದಿರಿ. ಹಣಕಾಸಿನ ವಿಚಾರದಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿದ ತೃಪ್ತಿ.
ಮಕರ: ಅತಿಯಾದ ನಿಷ್ಠೆ ಶ್ರಮ ವಹಿಸಿ ದೇಹಾರೋಗ್ಯ ಗಮನಿಸಿ. ಒಳ್ಳೆ ಹೆಸರು ಸಂಪಾದಿಸುವ ಸಮಯ. ದಾಂಪತ್ಯದಲ್ಲಿ ಚರ್ಚೆ ಸಂಭವ. ಮಕ್ಕಳಿಂದ ಸಂತೋಷ ವೃದ್ಧಿ. ಗೃಹ ವಾಹನ ಆಸ್ತಿ ವಿಚಾರಗಳಲ್ಲಿ ಉತ್ತಮ ಬದಲಾವಣೆ ಸಂಭವ.
ಕುಂಭ: ಆರೋಗ್ಯ ವೃದ್ಧಿ. ಅಧ್ಯಯನದಲ್ಲಿ ತಲ್ಲೀನತೆ. ಸಂದಭೋìಚಿತ ಉಪಾಯ, ಪ್ರತಿಭೆಯಿಂದ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಧನಾಗಮ ಉತ್ತಮ. ಬಂಧುಮಿತ್ರರ ಸಹಕಾರ. ಗುರುಹಿರಿಯರಿಂದ ಪ್ರೋತ್ಸಾಹ ಹಾಗೂ ಉತ್ತಮ ಮಾರ್ಗದರ್ಶನ.
ಮೀನ: ಆರೋಗ್ಯದಲ್ಲಿ ಸುಧಾರಣೆ. ಉದ್ಯೋಗ ವ್ಯವಹಾರಗಳಲ್ಲಿ ಪೈಪೋಟಿ ತೋರೀತು. ಧೈರ್ಯ ಶೌರ್ಯದಿಂದ ಪ್ರಗತಿ. ಆರ್ಥಿಕ ವಿಚಾರದಲ್ಲಿ ಗಣನೀಯ ಪ್ರಗತಿ. ಉತ್ತಮ ವಾಕ್‌ಚತುರತೆ. ಗೃಹದಲ್ಲಿ ಅನಗತ್ಯ ಚರ್ಚೆಗೆ ಆಸ್ಪದ ನೀಡದಿರಿ. ಧಾರ್ಮಿಕ ಕಾರ್ಯಗಳಲ್ಲಿ ನೇತೃತ್ವ. ದೇವತಾ ಸ್ಥಳ ಸಂದರ್ಶನದಿಂದ ಮಾನಸಿಕ ಸಂತುಷ್ಠಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.