ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತದಾರರ ಪ್ರಾಬಲ್ಯ ಪುರುಷರದ್ದೇ ಪಾರುಪತ್ಯ
Team Udayavani, Mar 8, 2023, 6:44 PM IST
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಹಿಂದಿನಿಂದಲೂ ಮಹಿಳೆಯರದ್ದೇ ಪ್ರಾಬಲ್ಯ. ಈ
ಬಾರಿಯೂ ಜನವರಿವರೆಗೆ ಬದಲಿಲ್ಲ. 8,87,060 ಮಹಿಳಾ ಮತದಾರರಿದ್ದರೆ ಪುರುಷರು 8,50,552. ಇಷ್ಟಾದರೂ ಜಿಲ್ಲೆಯ ಚುನಾವಣೆಯ ಇತಿಹಾಸ ಗಮನಿಸಿದರೆ ಕೇವಲ 5 ಅವಧಿಯಲ್ಲಿ ಮಹಿಳೆಯರಿಗೆ ಮಾತ್ರ ಶಾಸಕಿಯರಾಗುವ ಅವಕಾಶ ಸಿಕ್ಕಿದೆ.
ಹಾಗೆಂದು ಆದವರು ನಾಲ್ಕು ಮಂದಿ. ಇದರಲ್ಲಿ ಪುತ್ತೂರು ಮೂರು ಬಾರಿ ಶಾಸಕಿ ಯರಾಗಲು ಅವಕಾಶವಿತ್ತರೆ, ಮಂಗಳೂರು ಹಾಗೂ ಬಂಟ್ವಾಳದಲ್ಲಿ ಒಮ್ಮೆ ಅವಕಾಶ ಸಿಕ್ಕಿದೆ. ಜಿಲ್ಲೆಯಲ್ಲೆ ಮೊದಲ ಬಾರಿ ಶಾಸಕಿಯಾದವರು 1967 ರಲ್ಲಿ ಬಂಟ್ವಾಳದಿಂದ ಲೀಲಾವತಿ ರೈ. ಅವರು ಕಾಂಗ್ರೆಸ್ ಪ್ರತಿನಿ ಧಿಸಿದ್ದರು. 1972ರಲ್ಲಿ ಮಂಗಳೂರಿನಿಂದ (ಈಗ ಮಂಗಳೂರು ದಕ್ಷಿಣ) ಕಾಂಗ್ರೆ ಸ್ ನ ಎಡ್ಡಿ ಸಲ್ಡಾನ್ಹಾ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆದ್ದು ವಿಧಾನಸಭೆ ಪ್ರವೇಶಿಸಿದರು.
ಪುತ್ತೂರಿನಲ್ಲಿ 2004, 2013ರಲ್ಲಿ ಶಕುಂತಳಾ ಶೆಟ್ಟಿ (ಮೊದಲು ಬಿಜೆಪಿ,ಬಳಿಕ ಕಾಂಗ್ರೆಸ್‌ನಿಂದ) ಆಯ್ಕೆಯಾದರೆ
2008ರಲ್ಲಿ ಮಲ್ಲಿಕಾ ಪ್ರಸಾದ್ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಈ ಬಾರಿಯಾದರೂ ದಕ್ಷಿಣ ಕನ್ನಡದಲ್ಲಿ ಕನಿಷ್ಠ ಮೂವರು ಮಹಿಳೆಯರಿಗಾದರೂ ಸ್ಪರ್ಧಿಸಲು ಅವಕಾಶ ಸಿಗುತ್ತದೆಯೇ? ಮತದಾರರು ಬೆಂಬಲಿಸಿ ಗೆಲ್ಲಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.