Dakshina Kannada District : ಧಾರಾಕಾರ ಮಳೆ; ಕೆಲವೆಡೆ ಹಾನಿ
Team Udayavani, Jul 17, 2024, 12:32 AM IST
ಮಂಗಳೂರು: ದಕ್ಷಿನ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಮಂಗಳವಾರ ಜಿಲ್ಲೆಯಾದ್ಯಂತ ದಿನವಿಡೀ ಗಾಳಿ-ಮಳೆಯಾಗಿದ್ದು, ಕೆಲವು ಕಡೆ ಹಾನಿ ಸಂಭವಿಸಿದೆ.
ನಿರಂತರ ಮಳೆಯಿಂದಾಗಿ ಸಂಪಾಜೆಬಳಿ ಮನೆ ಸಮೀಪ ಬೃಹತ್ ಹೊಂಡ ನಿರ್ಮಾಣವಾಗಿತ್ತು. ಬಳಿಕ ಪಂಚಾಯ ತ್‌ನಿಂದ ಮುಚ್ಚಲಾಗಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲೇ ಇದ್ದು, ನೀರಿನ ಪ್ರಮಾಣ ಸ್ವಲ್ಪ ಇಳಿಕೆಯಾಗಿತ್ತು.
ಬಂಟ್ವಾಳದಲ್ಲಿ ನೇತ್ರಾವತಿ ನೀರಿನ ಮಟ್ಟ ಬೆಳಗ್ಗೆ 6.6 ಮೀ.ಗೆ ಏರಿಕೆಯಾಗಿದ್ದು, ಸಂಜೆಯ ವೇಳೆಗೆ
ಅದು 6.4 ಮೀ.ಗೆ ಇಳಿಕೆ ಕಂಡಿದೆ. ಸುರತ್ಕಲ್‌ನಲ್ಲಿ ಬಟ್ಟಪ್ಪಾಡಿ ಬಳಿ ಕಡಲ್ಕೊರೆತ ಉಂಟಾಗಿದ್ದು, ಕಡಲು ಪ್ರಕ್ಷುಬ್ಧ ಗೊಂಡಿದೆ. ಮಂಗಳೂರಿನಲ್ಲಿ ದಿನವಿಡೀ ಮಳೆಯಾಗಿದ್ದು, ಕೆಲವು ಕಡೆ ಕಾವೂರು, ಮರೋಳಿ, ಅಳಪೆಯಲ್ಲಿ ಮನೆಗಳ ಮೇಲೆ ಮರ ಬಿದ್ದು ಹಾನಿ ಸಂಭವಿದೆ.
ಇಂದು ರೆಡ್ ಅಲರ್ಟ್
ಹವಾಮಾನ ಇಲಾಖೆ ಬುಧವಾರವೂ ಕರಾವಳಿಗೆ ರೆಡ್‌ಅಲರ್ಟ್ ಘೋಷಣೆ ಮಾಡಿದೆ. ಅಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ. ಗುರುವಾರದಿಂದ ಮೂರು ದಿನ ಆರೆಂಜ್ ಆಲರ್ಟ್ ಇದೆ. 30-40 ಕಿ.ಮೀ ವೇಗದಲ್ಲಿ ನಿರಂತರವಾಗಿ ಗಾಳಿ ಬೀಸುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸುಬ್ರಹ್ಮಣ್ಯ: ಮುಳುಗಡೆ ಸ್ಥಿತಿಯಲ್ಲಿ ಸ್ನಾನಘಟ್ಟ
ಸುಬ್ರಹ್ಮಣ್ಯ: ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು, ಮಂಗಳವಾರ ನೀರಿನ ಮಟ್ಟ ಅಲ್ಪ ಇಳಿಕೆಯಾಗಿದೆ.
ಸೋಮವಾರ ರಾತ್ರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಸ್ನಾನಘಟ್ಟದ ಶೌಚಾಲಯ, ಲಗೇಜ್ ಕೊಠಡಿ ಭಾಗಶಃ ಮುಳುಗಡೆಯಾಗಿ, ಹೆದ್ದಾರಿಗೆ ನೀರು ನುಗ್ಗಿತ್ತು. ಆದರೆ ಮಂಗಳವಾರ ಬೆಳಗ್ಗೆ ನೀರಿನ ಮಟ್ಟ ಇಳಿಕೆಯಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಮತ್ತೆ ಆರಂಭಗೊಂಡಿತ್ತು. ಸಂಜೆ ವೇಳೆ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಇಳಿಕೆಯಾಗಿದೆ. ಆದರೂ ಸ್ನಾನಘಟ್ಟ ಮುಳುಗಡೆ ಸ್ಥಿತಿಯಲ್ಲೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kinnigoli: ದ್ವಿಚಕ್ರ ವಾಹನಗಳ ಢಿಕ್ಕಿ; ಸವಾರ ಮೃತ್ಯು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
MUST WATCH
ಹೊಸ ಸೇರ್ಪಡೆ
Question paper leak ಶಂಕೆ: ಪಿಡಿಒ ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ
Kanakadasa Jayanthi ಇಂದು; ಕನಕದಾಸರ ತಣ್ತೀಗಳು ಹಿಂದೆಂದಿಗಿಂತ ಇಂದಿಗೆ ಹೆಚ್ಚು ಪ್ರಸ್ತುತ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.