ದ.ಕ., ಉಡುಪಿ ಎರಡೂ ಕಡೆ ಆಹಾರ ಪ್ರ”ಭಾರ’
Team Udayavani, Jul 12, 2020, 10:31 AM IST
ಉಡುಪಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಸಿಬಂದಿ ಕೊರತೆ ಕೆಲಸ ಕಾರ್ಯಗಳಿಗೆ ತೊಡರು ಗಾಲು ಹಾಕಿದ್ದು, ಸಾರ್ವಜನಿಕರಿಗೆ ಸೇವೆ ಒದಗಿಸುವುದು ಸವಾಲಾಗಿದೆ. ಇದಕ್ಕೆಲ್ಲ ಕಿರೀಟ ಇರಿಸಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಎರಡೂ ಜಿಲ್ಲೆಗಳಲ್ಲಿ ಇಲಾಖೆಯ ನೇತೃತ್ವ ವಹಿಸಬೇಕಿದ್ದ ಉಪ ನಿರ್ದೇ ಶಕ ಹುದ್ದೆಗಳೇ ಪ್ರಭಾರವಾಗಿವೆ.
ಒಟ್ಟಾರೆ ರಾಜ್ಯ ಮಟ್ಟದಲ್ಲೂ ಇಲಾಖೆಯಲ್ಲಿ ಇದೇ ಸ್ಥಿತಿಯಿದ್ದು, 1,569 ಹುದ್ದೆಗಳ ಪೈಕಿ 730 ಖಾಲಿ ಯಿವೆ. 15 ಕಡೆ ಉಪನಿರ್ದೇಶಕ ಹುದ್ದೆಗಳೇ ಖಾಲಿಯಿವೆ. ಅನರ್ಹ ಬಿಪಿಎಲ್ ಪಡಿತರ ಚೀಟಿ ಪತ್ತೆ ಸಹಿತ ಎಲ್ಲ ಕೆಲಸಗಳನ್ನು ಸೀಮಿತ ಸಿಬಂದಿ ನಡೆಸ ಬೇಕಿದ್ದು,ಒತ್ತಡಕ್ಕೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಉಪ ನಿರ್ದೇಶಕ ಹುದ್ದೆಯಲ್ಲಿ ಪ್ರಭಾರ ನೆಲೆಯ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಕೆಲವು ಹುದ್ದೆಗಳಿಗೆ ಈ ಹಿಂದೆ ಹೊರಗುತ್ತಿಗೆಯಲ್ಲಿ ಸಿಬಂದಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ವರ್ಷದ ಹಿಂದೆ ಅದೂ ರದ್ದಾಗಿದೆ.
ಬಡವಾಯಿತು ಬಡವನ ಇಲಾಖೆ
ಸಮಾಜದ ಕಟ್ಟಕಡೆಯ ವ್ಯಕ್ತಿ ಜತೆ ನೇರ ಸಂಪರ್ಕ ಹೊಂದಿ ಬಡವನ ಹಸಿವು ನೀಗಿಸುವ ಇಲಾಖೆಯಿದು. ಇತರ ಇಲಾಖೆಗಳಿಗೆ ಆದಾಯ ಹರಿದು ಬಂದಂತೆ ಈ ಇಲಾಖೆಗೆ ಬರುವುದಿಲ್ಲ. ಪಡೆಯುವುದಕ್ಕಿಂತ ಹೆಚ್ಚು ಹಂಚುವುದೇ ಇದರ ಕಾರ್ಯಶೈಲಿ. ಇಲಾಖೆ ಆರ್ಥಿಕವಾಗಿ ಅಷ್ಟು ಸದೃಢವಾಗಿಲ್ಲ, ಸಿಬಂದಿ ಕೊರತೆಯೂ ಇದ್ದು, ಬಡವರ ಇಲಾಖೆ ಸ್ವತಃ ಬಡವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.