ಭೂಸ್ವಾಧೀನವೂ ಇಲ್ಲ, ಪರಿಹಾರವೂ ಇಲ್ಲದೆ ಸಂಕಷ್ಟಕ್ಕೀಡಾದ ಸಾಂತೂರಿನ ದಲಿತ ಕುಟುಂಬ
Team Udayavani, May 5, 2020, 5:50 AM IST
ಪಡುಬಿದ್ರಿ: ಯುಪಿಸಿಎಲ್ ವಿದ್ಯುತ್ ಸ್ಥಾವರದ ಎರಡನೇ ಹಂತದ ವಿಸ್ತರಣೆಗಾಗಿ ಭೂಸ್ವಾಧೀನಗೊಳ್ಳುವ ನಿರೀಕ್ಷೆ ಯಲ್ಲಿದ್ದ ಸಾಂತೂರು ಗ್ರಾಮದ ದಲಿತ ಕುಟುಂಬವೊಂದು ಆತಂಕದಲ್ಲೇ ದಿನ ದೂಡುತ್ತಿದೆ.
ಸಾಂತೂರು ಗುರುವ ಮುಖಾರಿ ಅವರ ಪುತ್ರರಾದ ಸದಾನಂದ, ಉದಯ ಮುಖಾರಿ ಹಾಗೂ ಅವರ ಕುಟುಂಬ ಸಂಕಷ್ಟದಲ್ಲಿದ್ದು, ಕುಸಿದ ಮನೆ ದುರಸ್ತಿಯೂ ಮಾಡಲಾಗದೆ, ಹೊಸದು ಕಟ್ಟಲೂ ಆಗದೆ ಇದ್ದಾರೆ.
ಆಗಿದ್ದೇನು?
ದಿ| ಗುರುವ ಮುಖಾರಿ ಅವರು ಎಲ್ಲೂರು ಗ್ರಾಮದ ಕುಕ್ಕಿಕಟ್ಟೆ ಎಂಬಲ್ಲಿ ಜಮೀನು ಹೊಂದಿದ್ದರು. ಯುಪಿಸಿಎಲ್ ಯೋಜನೆಗಾಗಿ 2015ರಲ್ಲಿ ಭೂಸ್ವಾಧೀನ ನಡೆದಿತ್ತು. ಇವರ ಸುತ್ತಲಿನ ಜಮೀನು ಭೂಸ್ವಾಧೀನಗೊಂಡಿದೆ. ಆದರೆ ಗುರುವ ಮುಖಾರಿ ಜಮೀನು ಹಾಗೆಯೇ ಇದೆ. ಭೂಸ್ವಾಧೀನ ಬಗ್ಗೆ ಅಂತಿಮ ನೋಟಿಸ್ ಕೆಐಎಡಿಬಿಯಿಂದಲೂ ಆಗಿಲ್ಲ. ಹಾಗಾಗಿ ಯುಪಿಸಿಎಲ್ ಕಡೆಯಿಂದ ಪರಿಹಾರ ನೀಡಲಾಗಿಲ್ಲ. ಮನೆಯೂ ಬಿದ್ದುದರಿಂದ ಕುಟುಂಬ ಅತಂತ್ರ ಸ್ಥಿತಿಗೆ ತಲುಪಿದೆ.
ಸದಾನಂದ ಅವರು ರಿಕ್ಷಾ ಚಾಲಕರು. ಲಾಕ್‌ಡೌನ್‌ನಿಂದಾಗಿ ದುಡಿಯುವುದೂ ಸಾಧ್ಯವಿಲ್ಲದಾಗಿದೆ. “ಒಂದು ವೇಳೆ ಕಂಪೆನಿಯವರಿಗೆ ಭೂಮಿ ಬೇಡವಾದರೆ ವಾಪಸು ನೀಡಲಿ. ಪರಿಹಾರಕ್ಕಾಗಿ ಅಲೆದು ಇದ್ದ ಹಣವೂ ಖರ್ಚಾಗಿದೆ. ನಮಗೆ ಜಿಲ್ಲಾಧಿಕಾರಿ ಅಥವಾ ಸಮಾಜ ಕಲ್ಯಾಣ ಇಲಾಖೆ ಸಹಾಯವನ್ನು ಮಾಡಬೇಕಿದೆ’ ಎಂದು ಸದಾನಂದ ಅವರು ಅಳಲು ತೋಡಿಕೊಂಡಿದ್ದಾರೆ.
ಮಳೆಗಾಲದ ಭಯ
ಈ ಮೊದಲು ಪರಿಹಾರ ಹಣ ಸಿಕ್ಕರೆ ಹೊಸ ಮನೆ ಕಟ್ಟಿಕೊಳ್ಳುವುದು ಅಥವಾ ಈಗಿದ್ದ ಮನೆ ದುರಸ್ತಿಗೆ ತೀರ್ಮಾನಿಸಲಾಗಿತ್ತು. ಇತ್ತೀಚಿನ ಮಳೆಗೆ ಮನೆ ಛಾವಣಿ ಕುಸಿದಿದ್ದು, ಪರಿಸ್ಥಿತಿ ಮತ್ತಷ್ಟು ಕಷ್ಟಕರವಾಗಿದೆ. ರಿಪೇರಿಯಾಗದಿದ್ದರೆ ಮಳೆಗಾಲ ಕಷ್ಟಕರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್ ಭೀತಿ!
IPL-2025: ಓಂಕಾರ್ ಸಾಳ್ವಿ ಆರ್‌ಸಿಬಿ ಬೌಲಿಂಗ್ ಕೋಚ್
MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Ration Card: ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.