ಕಾಂಗ್ರೆಸ್‌ನಿಂದ ದಲಿತರ ಉದ್ಧಾರ ಅಸಾಧ್ಯ; ಬಿಜೆಪಿ
ದಲಿತರನ್ನು ರಾಜಕೀಯ ಗಾಳವಾಗಿಸಿಕೊಳ್ಳುತ್ತ ವಂಚಿಸುತ್ತಲೇ ಬರುತ್ತಿದೆ.
Team Udayavani, Sep 24, 2021, 6:37 PM IST
ವಿಜಯಪುರ: ಸ್ವಾತಂತ್ರ್ಯಾ ನಂತರ 75 ವರ್ಷಗಳಿಂದ ಸ್ವಾರ್ಥ ರಾಜಕಾರಣ ಮಾಡುತ್ತಲೇ ಇರುವ ಕಾಂಗ್ರೆಸ್ ಪಕ್ಷ, ದಲಿತರಿಗೆ ಅಭ್ಯುದಯಕ್ಕೆ ಕಾರ್ಯಕ್ರಮ ಅನುಷ್ಠಾನಕ್ಕೆ ತರದೇ ವಂಚಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಹೇಳಿದರು.
ನಗರದಲ್ಲಿ ಬಿಜೆಪಿ ಎಸ್.ಸಿ. ಮೋರ್ಚಾದ ನಗರ ಮಂಡಲದಿಂದ ಗ್ಯಾಂಗಬಾವುಡಿ ಯಂತ್ರೋದ್ಧಾರ ಹನುಮಾನ ಮಂದಿರದಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ದಲಿತೋದ್ಧಾರ ಅಸಾಧ್ಯ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಮಾತನಾಡಿ, ಕೇಂದ್ರ-ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರತಿ ಮನೆ-ಮನೆಗೆ ಮುಟ್ಟವಂತೆ ನಮ್ಮ ಎಸ್.ಸಿ ಮೋರ್ಚಾ ಕಾರ್ಯಕರ್ತರು ಮುಂದಾಗಬೇಕು ಎಂದು ಸಲಹೆ ನೀಡಿದರು. ಬೆಳಗಾವಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ ಪ್ರತಿಜ್ಞೆ ಬೋಧಿ ಸಿ ಮಾತನಾಡಿ, ಭಾರತದ 75ನೇ ಸ್ವಾತಂತ್ರ್ಯಾ ಅಮೃತ ಮಹೋತ್ಸವದ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ 20 ವರ್ಷಗಳ ಅ ಧಿಕಾರವಧಿ ಪೂರ್ಣಗೊಳಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಸೇವಾ ಮತ್ತು ಸಮರ್ಪಣೆ ಅಭಿಯಾನದದ ಪ್ರತಿಜ್ಞೆ ಮಾಡಿ, ದೇಶದ ಅಖಂಡತೆ, ಪರಿಸರ ಸಂಕರಣೆ ಹಾಗೂ ಸಕಲ ಜೀವ ರಾಶಿಗಳ ಮಧ್ಯೆ ಸಹಜವಾಗಿ ಬದುಕುತ್ತೇನೆ. ಏಕ ಬಳಿಕೆಯ ಪ್ಲಾಸ್ಟಿಕ್ ತ್ಯಜಿಸಿ, ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುರಭ್ಯಾಸಗಳಿಂದ ಮುಕ್ತವಾಗಿ ಜೀವಿಸುತ್ತೇನೆ. ಹಿರಿಯರನ್ನು ಗೌರವಿಸಿ ಮತ್ತು ಕಿರಿಯನ್ನು ಪ್ರೀತಿಸುವ ಮೂಲಕ ಸಮಾಜದಲ್ಲಿ ಹೊಣೆಗಾರಿಕೆ ಪ್ರಜೆಯಾಗಿ ಬದುಕುವ ಪ್ರತಿಜ್ಞೆ ಮಾಡಬೇಕಿದೆ ಎಂದರು.
ನಗರ ಅಧ್ಯಕ್ಷ ವಿಠuಲ ನಡುವಿನಕೇರಿ ಮಾತನಾಡಿ, ಡಾ| ಬಿ.ಆರ್. ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಮತ ಬ್ಯಾಂಕ್‌ಗಾಗಿ ಬಳಸಿಕೊಂಡು ದಲಿತರನ್ನು ರಾಜಕೀಯ ಗಾಳವಾಗಿಸಿಕೊಳ್ಳುತ್ತ ವಂಚಿಸುತ್ತಲೇ ಬರುತ್ತಿದೆ. ಪ್ರಸ್ತುತ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದಿಂದ ಅನ್ಯಾಯಕ್ಕೀಡಾದ ದಲಿತರನ್ನು ಬಲಿಷ್ಠಗೊಳಿಸುವ ಕೆಲಸ ನಡೆಯುತ್ತಿದೆ. ಹೀಗಾಗಿ ಶೋಷಿತ ಸಮುದಾಯಗಳ ಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯ ಮಾಡುವ ಹೊಣೆಗಾರಿಕೆ ನಮ್ಮ ಮೇಲಿದೆ. ದಲಿತರನ್ನು ವಿದ್ಯಾವಂತರನ್ನಾಗಿ ಮಾಡಿ, ದೇಶದಲ್ಲೇ ಮಾದರಿ ಜೀವನ ನಡೆಸುವಂತೆ ಮಾಡಬೇಕಿದೆ ಎಂದರು.
ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ದಲಿತರ ವಿರೋ ಧಿಯಾಗಿದೆ. ದಲಿತರನ್ನು ದುರ್ಬಳಕೆ ಮಾಡಿಕೊಂಡ ಕಾಂಗ್ರೆಸ್‌ಗೆ ದಲಿತರೆಲ್ಲ ತಕ್ಕ ಪಾಠ ಕಲಿಸಬೇಕಿದೆ. ಇದಕ್ಕಾಗಿ ಬಿಜೆಪಿ ಸರ್ಕಾರ ರೂಪಿಸಿರುವ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಮಲ್ಲಮ್ಮ ಜೋಗೂರ, ಗೀತಾ ಕುಗ್ಗುನೂರ, ಭರತ ಕೋಳಿ, ಪಾಪುಸಿಂಗ್ ರಜಪೂತ, ರಾಜೇಶ ತವಸೆ, ಸಂಪತ್ತ ಕೋಹಳ್ಳಿ, ರಾಜೇಂದ್ರ ವಾಲಿ, ವಿನಾಯಕ ದಹಿಂಡೆ, ಅಭಿಷೇಕ ಸಾವಂತ, ಶ್ರೀನಿವಾಸ ಕಂದಗಲ, ಮುತ್ತಣ್ಣ ಸಾಸನೂರ, ಉದಯ ಕನ್ನೋಳ್ಳಿ, ಸದಾಶಿವ ಚಲವಾದಿ, ಪ್ರಹ್ಲಾದ ಕಾಂಬಳೆ, ಸಚಿನ್ ಸವನಳ್ಳಿ, ಬಾಬು ಜಾಧವ, ಸತೀಶ ರಾಠೊಡ, ದುಗೇಶ ತಿಕೋಟಿಕರ, ಶ್ರೀಕಾಂತ ಗಚ್ಚಿನಮನಿ, ಸಾಗರ ಶೇರಖಾನಿ, ಬಾಬು ಮನಗೂಳಿ, ರಮೇಶ ದೇವಕರ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ ದಲಿತರಿಗೆ ಮೂಲಭೂತ ಸೌಲಭ್ಯ ಮಾತ್ರವಲ್ಲ ಎಲ್ಲ ಕ್ಷೇತ್ರಗಳಲ್ಲೂ ದಲಿತರು ಮುಂದಿದ್ದಾರೆ. ಆದರೆ ದೀರ್ಘಕಾಲ ದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ದಲಿತರನ್ನು ರಾಜಕೀಯವಾಗಿ ಬಳಸಿಕೊಂಡಿತೇ ಹೊರತು ಅವರ ಅಭಿವೃದ್ಧಿ ಮಾಡಲಿಲ್ಲ.
ಅಪ್ಪು ಪಟ್ಟಣಶೆಟ್ಟಿ, ಮಾಜಿ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.