ಮಳೆಯಿಂದ ಹಾನಿ, ಸಂಚಾರ ಕಷ್ಟಕರ
Team Udayavani, Jul 7, 2020, 5:24 AM IST
ಸವಣೂರು: ಬೆಳಂದೂರು ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಪಾಲ್ತಾಡು -ಚೆನ್ನಾವರ ರಸ್ತೆ ಹಾಗೂ ಬೆಳ್ಳಾರೆ ಜಿ.ಪಂ. ವ್ಯಾಪ್ತಿಯ ಚೆನ್ನಾವರ ಮಸೀದಿ ಬಳಿಯಿಂದ ಕುಂಡಡ್ಕ ವರೆಗಿನ ರಸ್ತೆ ಮಳೆಯಿಂದ ತೀರಾ ಹಾನಿಯಾಗಿದ್ದು, ಜನಸಂಚಾರಕ್ಕೆ ಸಮಸ್ಯೆಯಾಗುತ್ತಿದೆ.
ಈ ರಸ್ತೆಯು ಮಳೆಯಿಂದಾಗಿ ಡಾಮರು ಎದ್ದುಹೋಗಿದೆ. ಈ ರಸ್ತೆಯ ಮೂಲಕ ನಿತ್ಯ ಹಲವು ವಾಹನಗಳು ಸಂಚರಿಸುತ್ತಿದ್ದು, ರಸ್ತೆ ಹಾಳಾಗಿರುವುದ ರಿಂದ ಎಲ್ಲರಿಗೂ ಸಂಕಷ್ಟ ಎದುರಾಗಿದೆ. ದ್ವಿಚಕ್ರ ವಾಹನ ಸವಾರರಂತೂ ಎದ್ದು ಬಿದ್ದು ಹೋಗಬೇಕಾದ ಪರಿಸ್ಥಿತಿ. ಪಾಲ್ತಾಡಿ ಭಾಗದ ಜನರಿಗೆ ಕಡಬ ಸಂಪರ್ಕಿಸಲು ಈ ರಸ್ತೆಯ ಮೂಲಕ ಸಾಗಿ ಸವಣೂರು ಮೂಲಕ ಹೋಗಬೇಕಿದೆ. ಅಲ್ಲದೆ ಪ್ರಮುಖ ಪೇಟೆಯಾಗಿರುವ ಸವಣೂರು, ಬೆಳ್ಳಾರೆ, ಪುತ್ತೂರಿಗೆ ಹೋಗಲು ಇದೇ ರಸ್ತೆಯ ಮೂಲಕವೇ ಹೋಗಬೇಕಿದೆ.
ರಸ್ತೆಯ ಅವ್ಯವಸ್ಥೆಯಿಂದ ಪಾದಚಾರಿ ಗಳಂತೂ ಇಲ್ಲಿ ಜಾರಿ ಬೀಳುವುದು ಸಾಮಾನ್ಯವಾಗಿದೆ. ಸಂಬಂಧ ಪಟ್ಟವರು ಕೂಡಲೇ ಸ್ಪಂದಿಸಬೇಕೆಂದು ಚೆನ್ನಾವರ ಅಭ್ಯುದಯ ಯುವಕ ಮಂಡಲ ಜನಪ್ರತಿ ನಿಧಿಗಳಿಗೆ ಮನವಿ ಮಾಡಿದೆ.
ಪೊದೆ ತೆರವು, ಚರಂಡಿ ನಿರ್ಮಾಣ
ಈ ರಸ್ತೆಯ ಎರಡೂ ಬದಿಗಳಲ್ಲಿಯೂ ಆವರಿಸಿದ್ದ ಪೊದೆಗಳನ್ನು ಚೆನ್ನಾವರದ ಎಸ್ಸೆಸ್ಸೆಫ್ ಸಂಘಟನೆಯ ಸದಸ್ಯರು 3 ದಿನ ಗಳ ಕಾಲ ಶ್ರಮದಾನದ ನಡೆಸಿ ತೆರವು ಮಾಡಿದ್ದಾರೆ. ಚರಂಡಿ ದುರಸ್ತಿಯನ್ನು ಸವಣೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಬಿ.ಕೆ. ಅವರ ನೇತೃತ್ವದಲ್ಲಿ ಗ್ರಾ.ಪಂ. ವತಿ ಯಿಂದ ಮಾಡಲಾಗಿದೆ. ಆದರೆ ಇನ್ನೂ ರಸ್ತೆ ದುರಸ್ತಿ ನಡೆಸಿಲ್ಲ.
ಹೆಚ್ಚಿನ ಅನುದಾನಕ್ಕೆ ಮನವಿ
ತಾರಿಪಡ್ಪು-ಚೆನ್ನಾವರ ರಸ್ತೆ ಅವ್ಯವಸ್ಥೆಯ ಕುರಿತು ಸ್ಥಳೀಯ ಸಂಘ-ಸಂಸ್ಥೆಗಳಿಂದ ಮನವಿ ಬಂದಿದ್ದು, ದುರಸ್ತಿಗೆ ಹೆಚ್ಚಿನ ಅನುದಾನದ ಬೇಕಾಗಿರುವುದರಿಂದ ಮೇಲಧಿಕಾರಿ ಗಳಿಗೆ ಪತ್ರ ಬರೆಯಲಾಗಿದೆ. ಗ್ರಾಮ ಪಂಚಾಯತ್‌ವತಿಯಿಂದ ಚರಂಡಿ ದುರಸ್ತಿ ಮಾಡಲಾಗಿದೆ.
– ನಾರಾಯಣ ಬಿ.
ಪಿಡಿಒ, ಸವಣೂರು ಗ್ರಾ.ಪಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.