ಅಣೆಕಟ್ಟಿಗೆ ಹಾನಿ; 350 ಎಕ್ರೆಗೆ ಉಪ್ಪು ನೀರು
ಕೆಮ್ಮಣ್ಣು ಪಡುತೋನ್ಸೆ ಗ್ರಾಮದ ಕಂಡಾಳ, ಕಂಬಳಬರಿ ಪರಿಸರ
Team Udayavani, Jun 3, 2020, 5:14 AM IST
ಮಲ್ಪೆ: ಕೆಮ್ಮಣ್ಣು ತೋನ್ಸೆ ಗ್ರಾ. ಪಂ. ವ್ಯಾಪ್ತಿಯ ಕಂಡಾಳ, ಕಂಬಳಕಂಡ, ಕಂಬಳಬರಿ, ಪಡುಮನೆ ಬೈಲು, ಗುಳಿಬೆಟ್ಟು ದೇವಸ್ಥಾನಬೈಲು ಪರಿಸರದ ಸುಮಾರು 350 ಎಕ್ರೆ ಗದ್ದೆಗೆ ಉಪ್ಪು ನೀರು ನುಗ್ಗಿದೆ.
ಈ ಭಾಗದ ಹಲವು ಬಾವಿಗಳ ನೀರಿಗೂ ಉಪ್ಪಿನ ಅಂಶ ಸೇರಿದ್ದು, ಉಪ್ಪು ನೀರು ತಡೆಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಸಮಸ್ಯೆ ಎದುರಾಗಿದೆ. ಗ್ರಾ.ಪಂ.ಗೆ ಹಲವು ಬಾರಿ ದೂರು ನೀಡಿದರೂ ಪರಿ ಹಾರ ಸಿಕ್ಕಿಲ್ಲ ಎನ್ನುತ್ತಾರೆ ಸ್ಥಳೀಯರು.
ಕಿಂಡಿಯಲ್ಲಿ ನುಗ್ಗುತ್ತಿದೆ ನೀರು
ಸುವರ್ಣಾ ನದಿಗೆ ಹೊಂದಿಕೊಂಡು ಕೆಪ್ಪತೋಡು ಇದ್ದು, ನೀರಿನ ಪ್ರವಾಹ ಅಧಿಕವಾಗಿದ್ದಾಗ ಗದ್ದೆಗೆ ಹರಿಯುತ್ತಿದೆ. ಪರಿಣಾಮ ಪರಿಸರದ ಗದ್ದೆ ಉಪ್ಪು ನೀರಿನ ಅಂಶವನ್ನು ಹೀರಿದೆ. ಈ ಭಾಗದ ಕಿಂಡಿ ಅಣೆಕಟ್ಟಿಗೆ ಅಳವಡಿಸಲಾದ ಹಲಗೆಗಳು ಮುರಿದು ಬೀಳುವ ಹಂತದಲ್ಲಿವೆ. ಹಲಗೆಗಳನ್ನು ಸರಿಯಾಗಿ ಅಳವಡಿಸದ ಪರಿಣಾಮ ಉಪ್ಪು ನೀರು ಒಳಗೆ ಹರಿದು ಬರುತ್ತಿದೆ. ನೂರಾರು ಎಕರೆ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿದ್ದರಿಂದ ಬೇಸಾಯ ಮಾಡಲು ಸಾಧ್ಯವಿಲ್ಲದಂತಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬಾವಿ ನೀರೂ ಉಪ್ಪು
ಈ ಪ್ರದೇಶದ ಸುಮಾರು 300ರಷ್ಟು ಮನೆಗಳ ಬಾವಿ ನೀರು ಉಪ್ಪಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಕಾಡಿದೆ. ಗ್ರಾ. ಪಂ. ನೀರನ್ನು ಆಶ್ರಯಿಸದೆ ಬಾವಿಯ ನೀರನ್ನೇ ಉಪಯೋಗಿಸುತ್ತಿದ್ದ ಸಾರ್ವಜನಿಕರು ಕುಡಿಯುವ ನೀರಿಗಾಗಿ ದೂರದ ಬಾವಿಯನ್ನು ಆಶ್ರಯಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರಾದ ನಾಗರಾಜ್ ಶೆಟ್ಟಿ ಕಂಡಾಳ, ಮೋಹನ್ ಸುವರ್ಣ, ರಿತೇಶ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತಾವನೆ ಸಲ್ಲಿಕೆ
ಅಣೆಕಟ್ಟು ಸಂಪೂರ್ಣ ಹಾನಿ ಯಾಗಿದ್ದರಿಂದ ಹೊಸದಾಗಿ ನಿರ್ಮಾಣ ಮಾಡಬೇಕಾಗಿದೆ. ಗ್ರಾ.ಪಂ.ಗೆ ಬರುವ ಅನು ದಾನದಲ್ಲಿ ಈ ಕಾಮಗಾರಿ ನಡೆಸಲು ಸಾಧ್ಯವಿಲ್ಲ. ಹಾಗಾಗಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ದೇªವೆ. ಶಾಸಕ ಕೆ.ರಘುಪತಿ ಭಟ್ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಲ್ಲೂ ಮನವಿ ಮಾಡಿದ್ದೇವೆ. ಶೀಘ್ರ ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
-ಫೌಸಿಯಾ ಸಾದಿಕ್,
ಅಧ್ಯಕ್ಷರು, ಕೆಮ್ಮಣ್ಣು ತೋನ್ಸೆ ಗ್ರಾ.ಪಂ.
ಪ್ರತಿಭಟನೆಯೇ ದಾರಿ
ಸುಮಾರು 5-6 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ವರ್ಷದಲ್ಲಿ ಒಟ್ಟು ಮೂರು ಭತ್ತದ ಬೆಳೆಗಳನ್ನು ಮತ್ತು ತರಕಾರಿ ಬೆಳೆಸಲಾಗುತ್ತಿತ್ತು. ಆದರೆ ಇತೀ¤ಚಿನ ಕೆಲವು ವರ್ಷಗಳಲ್ಲಿ ಉಪ್ಪು ನೀರು ನುಗ್ಗುವುದರಿಂದ ಕೃಷಿಗೆ ಆಯೋಗ್ಯವಾಗಿದೆ. ಇದರಿಂದ ಭತ್ತದ ಗದ್ದೆ ಬೇಸಾಯ ಮಾಡುವ ರೈತರ ಪ್ರಮಾಣವೂ ಕಡಿಮೆಯಾಗಿದೆ. ಸಂಬಂಧಪಟ್ಟ ಆಡಳಿತಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ. ಉಪ್ಪು ನೀರಿನ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆಯೇ ಮುಂದಿನ ಹೆಜ್ಜೆ.
-ದಾಮೋದರ ಸುವರ್ಣ, ಕಂಬಳಬರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Maulana Masood: 26/11 ದಾಳಿಯ ಮಾಸ್ಟರ್ ಮೈಂಡ್: ಭಯೋ*ತ್ಪಾದಕ ಮಸೂದ್ ಗೆ ಹೃದಯಾಘಾತ
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ
M Chinnaswamy Stadium; ಶಾಂತಾ ಹೆಸರಿಡಲು ಸಮಸ್ಯೆಯೇನಿದೆ? ಕೆಎಸ್‌ಸಿಎ ತಾರತಮ್ಯವೇಕೆ?
Mumbai: 13000 ಸಂಬಳ ಪಡೆಯುವ ಗುತ್ತಿಗೆ ನೌಕರನಿಂದ ಗೆಳತಿಗೆ BMWಕಾರು, 4BHK ಫ್ಲಾಟ್ ಗಿಫ್ಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.