Dandeli:ಮನೆಯಿಂದ ಹೊರ ಹಾಕಲ್ಪಟ್ಟ ವೃದ್ಧ; ಆಶ್ರಯ ನೀಡಲು ಮುಂದಾದ ಚಿನ್ನಯ್ಯ ಆಶೀರ್ವಾದಂ ಗಜ್ಜ
Team Udayavani, Oct 27, 2024, 7:42 PM IST
ದಾಂಡೇಲಿ: ಮನೆಯಿಂದ ಹೊರ ಹಾಕಲ್ಪಟ್ಟು, ಕಳೆದ ಕೆಲವು ದಿನಗಳಿಂದ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ತಂಗಿದ್ದ ವೃದ್ಧರೋರ್ವರಿಗೆ ಸ್ಥಳೀಯ ಮಾರುತಿ ನಗರದ ನಿವಾಸಿ ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರು ಆಶ್ರಯ ನೀಡಲು ಮುಂದಾಗುವುದರ ಮೂಲಕ ಮಾನವೀಯತೆಯನ್ನು ಮೆರೆದ ಘಟನೆ ಭಾನುವಾರ(ಅ.27) ನಡೆದಿದೆ.
ಗಾಂಧಿನಗರದ ನಿವಾಸಿ 79 ವರ್ಷ ವಯಸ್ಸಿನ ಚೆನ್ನಪ್ಪ ಕಳಕಪ್ಪ ದಡ್ಡಿನ ಇವರನ್ನು ಮನೆಯಿಂದ ಹೊರ ಹಾಕಿದ್ದರು. ಕಾಲು ನೋವಿನಿಂದ ತೀವ್ರವಾಗಿ ಬಳಲುತ್ತಿದ್ದ ಇವರು ನಗರದ ಬಸ್ ನಿಲ್ದಾಣದಲ್ಲಿ ತಂಗಿದ್ದರು. ಇವರ ಆರೋಗ್ಯ ಪರಿಸ್ಥಿತಿ ಹಾಗೂ ಯಾತನೆಯನ್ನು ನೋಡಿದ ಮಾರುತಿ ನಗರದ ನಿವಾಸಿ ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರು ಇತ್ತೀಚೆಗೆ ಎಜಿಕೆಲ್ ಗಜ್ಜಾ ಫೌಂಡೇಶನ್ ವತಿಯಿಂದ ಮಾರುತಿ ನಗರದಲ್ಲಿ ಪ್ರಾರಂಭಿಸಿದ ವೃದ್ಧಾಶ್ರಮಕ್ಕೆ ಕರೆದೊಯ್ಯಲು ಮುಂದಾಗಿದ್ದಾರೆ. ಚೆನ್ನಪ್ಪ ಕಳಕಪ್ಪ ದಡ್ಡಿನ ಅವರನ್ನು ಅವರ ಜೀವನ ಪರ್ಯಂತ ಜೋಪಾನವಾಗಿ ಸಾಕುವ ಜವಾಬ್ದಾರಿಯನ್ನು ಚಿನ್ನಯ್ಯ ಆಶೀರ್ವಾದಂ ಗಜ್ಜ ಅವರು ವಹಿಸಿಕೊಳ್ಳುವುದಾಗಿಯೂ ನಗರದ ಪೊಲೀಸ್ ಠಾಣೆಗೆ ಲಿಖಿತ ಪತ್ರದ ಮೂಲಕ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siddapura: ಗುಜರಿ ಅಂಗಡಿಗೆ ವಿವಿಧ ಇಲಾಖೆ ಪುಸ್ತಕಗಳ ಮಾರಾಟ
Sirsi: ಅಧಿಕಾರ ಯಾರಿಗೂ ಶಾಶ್ವತವಲ್ಲ, ಸಭಾಪತಿ ಪಕ್ಷಾತೀತವಾಗಿ ಇರಬೇಕು: ಬಸವರಾಜ್ ಹೊರಟ್ಟಿ
Yellapura: ಗೂಡಂಗಡಿಗೆ ನುಗ್ಗಿದ ಇಳಿಜಾರಿನಲ್ಲಿ ನಿಲ್ಲಿಸಿದ್ದ ಲಾರಿ
ಗರ್ಭ ಧರಿಸಿದ್ದ ಹಸು ಕಡಿದ ಪ್ರಕರಣ: ಗೋವು ಹಂತಕರ ಸುಳಿವು ಕೊಟ್ಟರೆ 50 ಸಾವಿರ ಬಹುಮಾನ
Yellapur: ಎರಡು ಲಾರಿಗಳ ಮಧ್ಯೆ ಸಿಲುಕಿದ ಕಾರು; ಪ್ರಯಾಣಿಕರು ಪಾರು