![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 7, 2023, 11:58 AM IST
ಮಂಗಳೂರು:ಸಂಚಾರ ಸುಲಲಿತವಾಗಿ ನಡೆಯಲು ಮಂಗಳೂರಿನ ಹಲವು ಜನನಿಬಿಡ ರಸ್ತೆಗಳಲ್ಲಿ ಜೋಡಿಸಿಟ್ಟಿರುವ ಕೋನ್‌ಗಳು “ನಾಮ್ ಕಾ ವಾಸ್ತೆ’ ಎಂಬಂತಿದ್ದರೆ, ಕೋನ್‌ಗಳು ತುಂಡಾಗಿ ಬಿದ್ದ ಕೆಲವೆಡೆ ಅದಕ್ಕೆ ಅಳವಡಿಸಿದ ನಟ್-ಬೋಲ್ಟ್‌ಗಳು ರಸ್ತೆಯಲ್ಲಿ ಹಾಗೆ ಇವೆ! ರಸ್ತೆಯಲ್ಲಿ ಬಾಕಿಯಾಗಿರುವ ನಟ್/ಬೋಲ್ಟ್ ಇದೀಗ ನಗರದ ಹಲವು ವಾಹನಗಳಿಗೆ ಬಹು ಅಪಾಯಕಾರಿಯಾಗುತ್ತಿದೆ. ರಸ್ತೆಯ ಆಳಕ್ಕೆ ಇದನ್ನು ಡ್ರಿಲ್ ಮಾಡಿ ಹಾಕಿದ ಕಾರಣ ಇದನ್ನು ತೆಗೆಯಲು ಸಂಬಂಧಪಟ್ಟವರು ಮನಸ್ಸು ಮಾಡಿಲ್ಲ; ಆದರೆ ಸಾರ್ವಜನಿಕರು ಮಾತ್ರ ಇದರಿಂದಾಗಿ ಅಪಾಯಎದುರಿಸುತ್ತಿದ್ದಾರೆ
ಏನಿದು ಸಮಸ್ಯೆ?
ಕೆಲವು ರಸ್ತೆಯಲ್ಲಿ ಡಿವೈಡರ್ ಸ್ವರೂಪದಲ್ಲಿ ರಬ್ಬರ್ ಕೋನ್/ಬ್ಯಾರಿಕೇಡ್ ಇಟ್ಟು ಸಂಚಾರ ನಿಯಂತ್ರಣ ಮಾಡಲಾಗುತ್ತದೆ. ಆದರೆ ಬಹುತೇಕ ಭಾಗದ ಕೋನ್‌ಗಳ ಮೇಲೆಯೇ ವಾಹನ ಸಂಚರಿಸಿ ಅವುಗಳೇ ಮಾಯವಾಗಿದೆ. ಹೀಗೆ ಕಿತ್ತು ಹೋದ ಕೋನ್‌ಗಳನ್ನು ರಸ್ತೆಗೆ ಜೋಡಿಸಿಟ್ಟ ನಟ್/ಬೋಲ್ಟ್‌ಗಳು ಮಾತ್ರ ರಸ್ತೆಯಲ್ಲಿ ಬಾಕಿಯಾಗಿವೆ. ಇವುಗಳು ವಾಹನಗಳ ಚಕ್ರಗಳಿಗೆ ಸಮಸ್ಯೆ ಸೃಷ್ಟಿಸುತ್ತಿವೆ.
ಎಲ್ಲೆಲ್ಲಿ ಬಹು ಸಮಸ್ಯೆ?
ಬಂಟ್ಸ್ ಹಾಸ್ಟೆಲ್, ಕರಂಗಲ್ಪಾಡಿ ತಿರುವು, ಹಂಪನಕಟ್ಟೆ, ಪಿವಿಎಸ್, ಕಂಕನಾಡಿ ಸಹಿತ ಕೆಲವು ಕಡೆ ಇಂತಹ ಕಿರಿಕಿರಿಗಳಿವೆ. ಕಂಕನಾಡಿ ಫಳ್ನೀರ್‌ನ ಹೈಲ್ಯಾಂಡ್‌ನಿಂದ ಫಳ್ನೀರ್ ಹೆಲ್ತ್ ಸೆಂಟರ್‌ವರೆಗಿನ ರಸ್ತೆಯಲ್ಲಿ ಅಪಾಯಕಾರಿ ಬೋಲ್ಟ್‌ಗಳಿವೆ. ಇವು ಚಕ್ರಗಳಿಗೆ ಹಾನಿಮಾಡುತ್ತಿವೆ. ಇದನ್ನು ತಪ್ಪಿಸಲು ದ್ವಿಚಕ್ರ ವಾಹನದವರು ಸರ್ಕಸ್ ಮಾಡಬೇಕಾದ ಪರಿಸ್ಥಿತಿ ಇದೆ.
ರಬರ್ ಕೋನ್‌ಗಳದ್ದು ಅದೇ ಕಥೆ
ವಿವಿಧ ಜಂಕ್ಷನ್‌ಗಳು, ಬಸ್‌ಬೇಗಳಲ್ಲಿ ಅಳವಡಿಸಲಾದ ಬಹುತೇಕ ರಬ್ಬರ್ ಕೋನ್‌ಗಳದ್ದು ಕೂಡ ಇದೇ ಪರಿಸ್ಥಿತಿ. ಹಲವು ಕಡೆ ಕೋನ್‌ಗಳು ಮೂಲ ಸ್ವರೂಪವನ್ನೇ ಕಳೆದುಕೊಂಡಿವೆ. ಪಾದಚಾರಿಗಳಿಗೂ ಅಪಾಯ.
ಅಪಾಯಕಾರಿ ನಟ್/ಬೋಲ್ಟ್‌ಗಳಿಂದ ವಾಹನಗಳಿಗೆ ಮಾತ್ರವಲ್ಲ ಪಾದಚಾರಿಗಳಿಗೂ ಸಮಸ್ಯೆ ಇದೆ. ಕೊಂಚ ಎಚ್ಚರ ತಪ್ಪಿ ನಡೆದರೆ, ಅವರು ಎಡವಿ ರಸ್ತೆಗೆ ಬೀಳುವ ಪರಿಸ್ಥಿತಿಯಿದೆ.
ದಿನೇಶ್ ಇರಾ
You seem to have an Ad Blocker on.
To continue reading, please turn it off or whitelist Udayavani.