PM ಮೋದಿಗೆ ಬಿಎಸ್ಪಿ ಸಂಸದ ಡ್ಯಾನಿಷ್ ಪತ್ರ
Team Udayavani, Sep 29, 2023, 8:25 PM IST
ನವದೆಹಲಿ: ಬಿಎಸ್ಪಿ ಸಂಸದ ಡ್ಯಾನಿಷ್ ಅಲಿ ಅವರ ವಿರುದ್ಧ ಬಿಜೆಪಿ ಸಂಸದ ರಮೇಶ್ ಬಿಧೂರಿ ಲೋಕಸಭೆಯಲ್ಲಿ ಅವಾಚ್ಯ ಪದ ಬಳಸಿರುವ ವಿಚಾರ ವಿವಾದಕ್ಕೀಡಾಗಿರುವ ನಡುವೆಯೇ, ಪ್ರಕರಣ ಸಂಬಂಧ ಡ್ಯಾನಿಷ್ ಅಲಿ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಬಿಧೂರಿಗೆ ತಕ್ಕ ಶಿಕ್ಷೆ ನೀಡುವುದನ್ನು ಖಾತರಿ ಪಡಿಸಿಕೊಳ್ಳುವಂತೆ ಕೇಳಿದ್ದಾರೆ. ಈ ಪತ್ರವನ್ನು ಡ್ಯಾನಿಷ್ ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಬಿಧೂರಿ ಬಳಸಿರುವ ಪದಗಳು ಕೇವಲ ನನ್ನ ಮೇಲಿನ ವೈಯಕ್ತಿಕ ದಾಳಿಯಷ್ಟೇ ಅಲ್ಲ, ಪ್ರಜಾಪ್ರಭುತ್ವದ ಮೂಲಭೂತ ಹಕ್ಕುಗಳ ಮೇಲಿನ ದಾಳಿ. ಬಿಧೂರಿ ಪ್ರಕರಣದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡುವುದಲ್ಲದೇ, ಬಿಧೂರಿ ಅವರಿಗೆ ತಕ್ಕ ಶಿಕ್ಷೆ ನೀಡುವುದನ್ನು ತಾವು ಖಾತರಿ ಪಡಿಸಿಕೊಳ್ಳಬೇಕು ಹಾಗೂ ಬಿಧೂರಿ ಪ್ರಕರಣದ ಬಳಿಕ ತಮಗೆ ಬೆದರಿಕೆ ಹೆಚ್ಚಿದ್ದು, ಭದ್ರತೆಯನ್ನು ಹೆಚ್ಚಿಸಬೇಕೆಂದೂ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.