ದಾವಣಗೆರೆ ಜಿಲ್ಲೆಯಲ್ಲಿ 28 ಮಂದಿ ಗುಣಮುಖ, 118 ಹೊಸ ಪ್ರಕರಣ ಪತ್ತೆ
Team Udayavani, Jun 27, 2021, 7:35 PM IST
ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಕೊರೊನಾದಿಂದ 28 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 14 , ಹರಿಹರ, ಹೊರ ಜಿಲ್ಲೆಯ ತಲಾ ಇಬ್ಬರು, ಜಗಳೂರಿನಲ್ಲಿ ಒಬ್ಬರು, ಚನ್ನಗಿರಿಯಲ್ಲಿ 6, ಹೊನ್ನಾಳಿಯಲ್ಲಿ ಮೂವರು ಒಳಗೊಂಡಂತೆ 29 ಸೋಂಕಿತರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ 118 ಜನರಲ್ಲಿ ಸೋಂಕು ಪತ್ತೆಯಾಗಿದೆ. ದಾವಣಗೆರೆ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ 48 ಪ್ರಕರಣ ಪತ್ತೆಯಾಗಿವೆ. ಹರಿಹರದಲ್ಲಿ 5, ಜಗಳೂರಿನಲ್ಲಿ 8 , ಚನ್ನಗಿರಿಯಲ್ಲಿ 24, ಹೊನ್ನಾಳಿಯಲ್ಲಿ 32 ಹಾಗೂ ಹೊರ ಜಿಲ್ಲೆಯ ಒಬ್ಬರು ಒಳಗೊಂಡಂತೆ 118 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 26027, ಹರಿಹರದಲ್ಲಿ 6763 , ಜಗಳೂರಿನಲ್ಲಿ 2663, ಚನ್ನಗಿರಿಯಲ್ಲಿ 6172, ಹೊನ್ನಾಳಿಯಲ್ಲಿ 6228, ಹೊರ ಜಿಲ್ಲೆಯ 1469 ಜನರು ಸೇರಿದಂತೆ ಈವರೆಗೆ ಒಟ್ಟು 49,322 ಜನರು ಸೋಂಕಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ : ಕೋವಿಡ್; ರಾಜ್ಯದಲ್ಲಿಂದು 7699 ಸೋಂಕಿತರು ಗುಣಮುಖ, 3604 ಹೊಸ ಪ್ರಕರಣ ಪತ್ತೆ
ಕೊರೊನಾದಿಂದ ಈವರೆಗೆ ದಾವಣಗೆರೆ ತಾಲೂಕಿನಲ್ಲಿ 25069, ಹರಿಹರದಲ್ಲಿ 6611, ಜಗಳೂರಿನಲ್ಲಿ 2693, ಚನ್ನಗಿರಿಯಲ್ಲಿ 5976, ಹೊನ್ನಾಳಿಯಲ್ಲಿ 5733, ಹೊರ ಜಿಲ್ಲೆಯ 1372 ಜನರು ಸೇರಿದಂತೆ 47,454 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 1335 ಸಕ್ರಿಯ ಪ್ರಕರಣಗಳಿವೆ.
ಜಿಲ್ಲೆಯಲ್ಲಿ ಕೊರೊನಾದಿಂದ ಇಬ್ಬರು ಮೃತಪಟ್ಟಿದ್ದಾರೆ. ಚನ್ನಗಿರಿ ತಾಲೂಕಿನ ಗೊಪ್ಪೇನಹಳ್ಳಿ ಗ್ರಾಮದ 79 ವರ್ಷದ ವೃದ್ಧ, ದಾವಣಗೆರೆಯ ಜಾಲಿನಗರದ 59 ವರ್ಷದ ವ್ಯಕ್ತಿ ಮೃತಪಟ್ಟವರು. ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ 533 ಜನರು ಬಲಿಯಾಗಿದ್ದಾರೆ.
ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 88 ಸೋಂಕಿತರು ಸಾಮಾನ್ಯ, 354 ಸೋಂಕಿತರು ಆಕ್ಸಿಜನ್, 17 ಸೋಂಕಿತರು ಎನ್‌ಐವಿ, 49 ಸೋಂಕಿತರು ವೆಂಟಿಲೇಟರ್ 21 ಸೋಂಕಿತರು ವೆಂಟಿಲೇಟರ್ ರಹಿತ,232 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 176 ಸೋಂಕಿತರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.
ಜಿಲ್ಲೆಯಲ್ಲಿ ಭಾನುವಾರ ಬ್ಯ್ಲಾಕ್ ಫಂಗಸ್ ಪ್ರಕರಣ ವರದಿಯಾಗಿಲ್ಲ. ಈವರೆಗೆ ಜಿಲ್ಲೆಯಲ್ಲಿ 104 ಜನರಲ್ಲಿ ಬ್ಯ್ಲಾಕ್ ಫಂಗಸ್ ಕಂಡು ಬಂದಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ 33, ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 19, ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ 54 ಜನರು ಗುಣಮುಖರಾಗಿದ್ದಾರೆ.
ಜಿಲ್ಲಾ ಆಸ್ಪತ್ರೆಯಲ್ಲಿ 34, ಎಸ್.ಎಸ್. ಹೈಟೆಕ್‌ನಲ್ಲಿ 15, ಬಾಪೂಜಿ ಆಸ್ಪತ್ರೆಯಲ್ಲಿ ಒಬ್ಬರು ಒಳಗೊಂಡಂತೆ 50 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.