Cricket: ಶುಭ ವಿದಾಯದ ನಿರೀಕ್ಷೆಯಲ್ಲಿ ಡೇವಿಡ್ ವಾರ್ನರ್
Team Udayavani, Jan 2, 2024, 11:38 PM IST
ಸಿಡ್ನಿ: ಇದು ಆಸ್ಟ್ರೇಲಿಯದ ಪಾಲಿಗೆ “ನ್ಯೂ ಇಯರ್ ಟೆಸ್ಟ್” ಪಂದ್ಯವಾದರೆ, ಆರಂಭಕಾರ ಡೇವಿಡ್ ವಾರ್ನರ್ ಪಾಲಿಗೆ ಕೊನೆಯ ಟೆಸ್ಟ್ ಪಂದ್ಯವಾಗಲಿದೆ. ಪ್ರವಾಸಿ ಪಾಕಿಸ್ಥಾನ ವಿರುದ್ಧ ಬುಧವಾರ ದಿಂದ “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ 3ನೇ ಹಾಗೂ ಕೊನೆಯ ಟೆಸ್ಟ್ ಆಡಲಿಳಿಯುವ ಆಸೀಸ್, ತನ್ನ ನಾಡಿನ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗನಿಗೆ ಗೆಲುವಿನ ಉಡುಗೊರೆಯೊಂದನ್ನು ನೀಡಿ ಸ್ಮರಣೀಯ ವಿದಾಯ ಹೇಳುವ ಯೋಜನೆಯಲ್ಲಿದೆ. ಆಗ ಕಮಿನ್ಸ್ ಪಡೆ ಸರಣಿಯನ್ನೂ ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡಂತಾಗುತ್ತದೆ.
ನೂತನ ವರ್ಷದಂದೇ ಪತ್ರಿಕಾ ಗೋಷ್ಠಿ ಕರೆದು ಏಕದಿನಕ್ಕೆ ವಿದಾಯ ಹೇಳಿದ್ದ ಡೇವಿಡ್ ವಾರ್ನರ್, ಇದೀಗ ತವರಿನಂಗಳದಲ್ಲೇ ವಿದಾಯ ಟೆಸ್ಟ್ ಆಡುವ ಅದೃಷ್ಟ ಸಂಪಾದಿಸಿದ್ದಾರೆ.
ಬಾಕ್ಸಿಂಗ್ ಡೇ ಸಾಹಸ
ಮೆಲ್ಬರ್ನ್ನಲ್ಲಿ ನಡೆದ “ಬಾಕ್ಸಿಂಗ್ ಡೇ’ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 164 ರನ್ ಬಾರಿಸುವ ಮೂಲಕ ವಾರ್ನರ್, ಸಂಧ್ಯಾಕಾಲದಲ್ಲೂ ಬ್ಯಾಟಿಂಗ್ ಮೋಡಿಗೈದುದನ್ನು ಮರೆಯುವಂತಿಲ್ಲ. 111 ಟೆಸ್ಟ್ ಗಳನ್ನಾಡಿರುವ ವಾರ್ನರ್ 44.58ರ ಸರಾಸರಿಯಲ್ಲಿ 8,695 ರನ್ ಬಾರಿಸಿದ್ದಾರೆ. ಇದರಲ್ಲಿ 26 ಶತಕ ಸೇರಿದೆ. ಪಾಕಿಸ್ಥಾನ ವಿರುದ್ಧವೇ 2019ರ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಅಜೇಯ 335 ರನ್ ಬಾರಿಸಿದ್ದು ಜೀವನಶ್ರೇಷ್ಠ ಸಾಧನೆಯಾಗಿದೆ.
ಡೇವಿಡ್ ವಾರ್ನರ್ ಟೆಸ್ಟ್ ಬದುಕು ಆರಂಭಿಸಿದ್ದು 2011ರಲ್ಲಿ. ಅದು ನ್ಯೂಜಿಲ್ಯಾಂಡ್ ವಿರುದ್ಧದ ಬ್ರಿಸ್ಬೇನ್ ಟೆಸ್ಟ್ ಆಗಿತ್ತು. ಮಿಚೆಲ್ ಸ್ಟಾರ್ಕ್, ಜೇಮ್ಸ್ ಪ್ಯಾಟಿನ್ಸನ್ ಅವರಿಗೂ ಇದು ಪದಾರ್ಪಣ ಟೆಸ್ಟ್ ಆಗಿತ್ತು. ಅಂದು ವಾರ್ನರ್‌ಗೆ ಜತೆಯಾಗಿದ್ದ ಆರಂಭಕಾರ ಫಿಲಿಪ್ ಹ್ಯೂಸ್. ಚೊಚ್ಚಲ ಟೆಸ್ಟ್ ನಲ್ಲಿ ವಾರ್ನರ್ ಸಾಧನೆ 3 ಮತ್ತು ಅಜೇಯ 12 ರನ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.