ಡಿಸಿ ಗ್ರಾಮ ವಾಸ್ತವ್ಯ; ಸಿಗುವುದೇ ಪರಿಹಾರ? ಪಹಣಿ ದೋಷಕ್ಕೆ ಸಿಗುವುದೇ ಕಾಯಕಲ್ಪ?
Team Udayavani, Feb 19, 2022, 1:49 PM IST
ವಾಡಿ: ಗ್ರಾಮೀಣ ಜನರ ಕುಂದು ಕೊರತೆಗಳನ್ನು ಸ್ಥಳದಲ್ಲೇ ಬಗೆಹರಿಸುವ ರಾಜ್ಯ ಸರ್ಕಾರದ ಪರಿಕಲ್ಪನೆಯ “ಜಿಲ್ಲಾಧಿಕಾರಿ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮ ಸಾಕಾರಕ್ಕೆ ಜಿಲ್ಲಾಧಿಕಾರಿ ಯಶವಂತ ವಿ.ಗುರುಕರ್ ಮುಂದಾಗಿದ್ದು, ಫೆ.19ರಂದು ಚಿತ್ತಾಪುರ ತಾಲೂಕಿನ ಕೊಂಚೂರು ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ತಮ್ಮ ಜಿಲ್ಲಾ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಿದ್ದಾರೆ.
ಜಿಲ್ಲಾಧಿಕಾರಿಯ ವಾಸ್ತವ್ಯಕ್ಕೆ ಸರ್ಕಾರಿ ಪ್ರಾಥಮಿಕ ಶಾಲೆ ಇದ್ದರೂ ಗ್ರಾಮದ ಪ್ರತಿಷ್ಠಿತ ಪರ್ತಾನಿ ರಾಜಗೋಪಾಲ ಶಾರದಾ ದೇವಿ ಕಾನ್ವೆಂಟ್ ಶಾಲೆ ಗುರುತಿಸಿರುವ ತಾಲೂಕು ಆಡಳಿತ, ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿದೆ. ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು ಮತ್ತು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಹನುಮಾನ ದೇವಸ್ಥಾನದ ಸಭಾಂಗಣ
ಶುಚಿಗೊಳಿಸಲಾಗಿದೆ. ರಸ್ತೆ ಬದಿಯಲ್ಲಿ ಬೆಳೆದ ಮುಳ್ಳುಕಂಟಿಗಳನ್ನು ಕತ್ತರಿಸಿ ಸುಡಲಾಗುತ್ತಿದೆ. ಜೆಸ್ಕಾಂ ಸಿಬ್ಬಂದಿ ಗ್ರಾಮದಲ್ಲಿ ನೇತಾಡುತ್ತಿರುವ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯದಲ್ಲಿ ತೊಡಗಿರುವುದು ಶುಕ್ರವಾರ ಕಂಡು ಬಂದಿತು. ಸಹಾಯಕ ಆಯುಕ್ತರು, ತಹಶೀಲ್ದಾರರು, ವಿವಿಧ ಇಲಾಖೆ ಅಧಿಕಾರಿಗಳು, ಅಭಿಯಂತರರು ಡಿಸಿ ಜತೆಗೆ ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕಳೆದ ಹಲವು ದಶಕಗಳಿಂದ ಹೋರಾಟ ನಡೆಸಿದರೂ ಬಗೆಹರಿಯಲಾಗದ ನೂರಾರು ಜಟಿಲ ಸಮಸ್ಯೆಗಳ ಜತೆಗೆ ಬೇಸರದ ಬದುಕು ಸವೆಸುತ್ತಿರುವ ನಾಲವಾರ ಹೋಬಳಿ ವಲಯದ ಕೊಂಚೂರು, ಬಳವಡಗಿ, ಹಳಕರ್ಟಿ, ಕಡಬೂರ, ಚಾಮನೂರ ಸೇರಿದಂತೆ ಇತರ ಗ್ರಾಮಗಳ ರೈತರು, ಜಿಲ್ಲಾಧಿಕಾರಿಗಳ ಕೊಂಚೂರು ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಾದರೂ ನಮ್ಮ
ಜೀವನ ಸಂಗಾತಿ ಸಂಕಷ್ಟಗಳಿಗೆ ಪರಿಹಾರ ಸಿಗಬಹುದಾ? ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ : ಪಾತಕಿ ದಾವೂದ್ ನಿಂದ ಹೊಸ ಟೀಮ್ ರಚನೆ; ಭಾರತದ ರಾಜಕಾರಣಿಗಳು, ಉದ್ಯಮಿಗಳೇ ಟಾರ್ಗೆಟ್: NIA
ಕೊಂಚೂರಿನ ಸಹೋದರ ಗ್ರಾಮ ಬಳವಡಗಿಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಹಳ್ಳ ಉಕ್ಕೇರಿ ಭೀಕರ ಜಲ ಪ್ರವಾಹ ಉಂಟಾಗುತ್ತಿದೆ. ಗ್ರಾಮದ ಸುತ್ತ ಜಲ ದಿಗ್ಬಂಧನ ಏರ್ಪಟ್ಟು, ಊರು ಅಕ್ಷರಶಃ ನಡುಗಡ್ಡೆಯಂತೆ ಗೋಚರಿಸುತ್ತದೆ. ವಾಡಿ-ಕೊಂಚೂರು ಸೇತುವೆ ಮುಳುಗಿ ರಸ್ತೆ ಸಂಪರ್ಕ ಕಡಿತಗೊಳ್ಳುತ್ತದೆ. ಗ್ರಾಮದ ಶೇ.70 ರಷ್ಟು ಜನರು ಮನೆಯ ಮಾಳಿಗೆಯಲ್ಲಿ ರಕ್ಷಣೆ ಪಡೆಯುತ್ತಾರೆ. ಮನೆಯ ದವಸಧಾನ್ಯಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತವೆ. ಮೋಡಗಳು ಗುಡುಗಿದರೆ ಸಾಕು ಬಳವಡಗಿ ಗ್ರಾಮಸ್ಥರು ಬೆಚ್ಚಿಬೀಳುತ್ತಾರೆ. ರಾತ್ರಿಯಲ್ಲ ಜಾಗರಣೆ
ಮಾಡುತ್ತಾರೆ. ಅಕ್ರಮವಾಗಿ ಒತ್ತೂವರಿಗೆ ಸಿಲುಕಿರುವ ಹಳ್ಳ ಜಲಯಪ್ರಣಯ ಸೃಷ್ಟಿಸುತ್ತಿದೆ. ಜಿಲ್ಲಾಧಿ ಕಾರಿಗಳು ಈ ಗಂಭೀರ ಸಮಸ್ಯೆಗೆ ಏನು ಪರಿಹಾರ ಸೂಚಿಸುತ್ತಾರೆ ಎಂಬ ಕುತೂಹಲ ಕೆರಳಿಸಿದೆ. ಹಳಕರ್ಟಿ ಗ್ರಾಮದ ಶೇ.100ರಷ್ಟು ರೈತರ ಜಮೀನುಗಳ ಪಹಣಿ ದೋಷ, ಡಬಲ್ ಪಹಣಿ, ಆಕಾರಬಂದ್ ದೋಷದಿಂದ ಕೂಡಿದ್ದು, ರೈತರು ಕಳೆದ 50 ವರ್ಷಗಳಿಂದ ಈ ಜಟಿಲವಾದ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಪಹಣಿ ದೋಷಗಳಿಂದ ನಮಗೆ ಮುಕ್ತಿ ಕೊಡಿ. ಜಮೀನು ಖರೀದಿ, ಮಾರಾಟ ಸಾಧ್ಯವಾಗದೇ ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲಾಗದೇ ತೊಂದರೆ ಅನುಭವಿಸುತ್ತಿದ್ದೇವೆ ಎಂದು ರೈತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರೂ ಪ್ರಯೋಜನವಾಗಿಲ್ಲ. ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಗ್ರಾಮಸ್ಥರ ಶತಮಾನದ ಗೋಳಿಗೆ ಪರಿಹಾರ ಒದಗಿಸುವುದೇ ಕಾಯ್ದು ನೋಡಬೇಕು.
ಭೀಮಾನದಿ ದಂಡೆಯ ಚಾಮನೂರು, ಕಡಬೂರ ಗ್ರಾಮಸ್ಥರ ಶುದ್ಧ ಕುಡಿಯುವ ನೀರಿನ ಸಮಸ್ಯೆ, ಕೊಂಚೂರು-ವಾಡಿ ಹದಗೆಟ್ಟ ರಸ್ತೆ, ಕೊಂಚೂರಿನಲ್ಲಿ ನೇತಾಡುತ್ತಿರುವ ಅಪಾಯಕಾರಿ ವಿದ್ಯುತ್ ತಂತಿಗಳ ಸಮಸ್ಯೆ, ಹಳ್ಳ ಹಿಡಿದ ಸಿಂಗಾಪುರ ಶೌಚಾಲಯಗಳ ಯೋಜನೆ, ಬಸ್ ಸೌಲಭ್ಯವನ್ನೇ ಕಾಣದ ಗ್ರಾಮಗಳ ಸಾರಿಗೆ ಸಮಸ್ಯೆ, ಸರ್ಕಾರಿ ಶಾಲೆಗಳ ಶಿಥಿಲ ಕಟ್ಟಡಗಳು, ಸ್ಥಗಿತವಾದ ವೃದ್ಧರ-ವಿಧವೆಯರ ಪಿಂಚಣಿ, ಹೀಗೆ ಹಲವು ಸಮಸ್ಯೆಗಳು ಈ ಭಾಗದ ಗ್ರಾಮೀಣ ಜನರನ್ನು ಕಾಡುತ್ತಿವೆ.
– ಮಡಿವಾಳಪ್ಪ ಹೇರೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.