ಶಿರಸಿ ; ಫಲಾನುಭವಿಗಳಿಗೆ ಪರಿಹಾರ ಮೊತ್ತ ಶೀಘ್ರ ಹಸ್ತಾಂತರ : ಜಿಲ್ಲಾಧಿಕಾರಿ
Team Udayavani, Feb 10, 2022, 2:49 PM IST
ಶಿರಸಿ : ತಾಳಗುಪ್ಪ ಖಾನಾಪುರ ರಾಜ್ಯ ಹೆದ್ದಾರಿ ಅಗಲೀಕರಣ ಯೋಜನೆಯಲ್ಲಿ ಫಲಾನುಭವಿಗಳಿಗೆ ಪರಿಹಾರ ಮೊತ್ತ ಶೀಘ್ರ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹೇಳಿದರು.
ಅವರು ಅಂಬೇಡ್ಕರ್ ಭವನದಲ್ಲಿ ಗುರುವಾರ ರಸ್ತೆ ಅಗಲೀಕರಣ ಪರಿಹಾರದರ ನಿಗಧಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಶಿರಸಿ ರಸ್ತೆ ಅಗಲೀಕರಣದಿಂದ ಸಂಚಾರ ಸುಲಭವಾಗಲಿದೆ. ವಾಹನ ಸವಾರರು ಪರಾಡುವುದು ಕಡಿಮೆಯಾಗಲಿದೆ. ಎಲ್ಲ ನಕ್ಷತ್ರಗಳೂ ಶಿರಸಿಯಲ್ಲಿ ಇದ್ದು ಮುಂದೆ ದೊಡ್ಡ ಪ್ರಮಾಣದಲ್ಲಿ ಬೆಳೆಯಲಿದೆ ಎಂದರು.
ಯೋಜನೆಯ ವೆಚ್ಚದ ವ್ಯಾಪ್ತಿಯಲ್ಲೇ ಒಂದಿಷ್ಟು ಹಣ ಇದ್ದು, ಹೆಚ್ಚುವರಿಯಾಗಿ ಹಣ ಬೇಕಾದಲ್ಲಿ ಅದರ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದರು.
ಭೂ ಸ್ವಾಧೀನ ಪ್ರಕ್ರಿಯೆ ದರ ನಿರ್ದಾರ ಸಮಿತಿ ಮಾಡಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷರು. ಜಿಲ್ಲಾಧಿಕಾರಿಗೆ ಪದ ದತ್ತವಾದ ಅಧಿಕಾರ ಇದೆ. ನೇರ ಖರೀದಿಯಲ್ಲಿ ಮಾಡಲಾಗುತ್ತಿದೆ. ಈ ಯೋಜನೆಯಲ್ಲಿ 3 ಝೋನ್ ಮಾಡಲಾಗಿದೆ.
ಕಳೆದ ವರ್ಷದ ಕ್ರಯ ವಿಕ್ರಯಗಳನ್ನು ಹೋಲಿಕೆ ಮಾಡಿ ದರ ನಿಗದಿ ಮಾಡಲಾಗಿದೆ ಎಂದರು. ಝೋನ್ ಒಂದರಲ್ಲಿ 6400 ರೂ. ಚದರ ಕಿಮಿಗೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಮಾಡಲಾಗುತ್ತದೆ. ಝೋನ್ 2 ರಲ್ಲಿ ರಾಘವೇಂದ್ರ ಸರ್ಕಲ್ ನಿಂದ ಟಿಎಸ್ಎಸ್ ಪೆಟ್ರೋಲ್ ಬಂಕ್ ತನಕ ಆಗುತ್ತದೆ. 10525 ರೂ. ಮೂರನೇ ವಲಯದಲ್ಲಿ ಯಲ್ಲಾಪುರ ನಾಕಾ ತನಕ ಇರಲಿದೆ. 8200 ರೂ 92 ಜನರಿಗೆ ಸಿಗಲಿದೆ ಎಂದರು.
ಇದನ್ನೂ ಓದಿ : ಶಿರಸಿ: ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಪೂರ್ವ ಸಭೆ
ಸಹಕಾರಿ ಕ್ಷೇತ್ರದ ಸ್ಥಳ ಕೂಡ ಇದೆ. ಅದಕ್ಕೆ ದರ ವ್ಯತ್ಯಾಸ ಇದ್ದರೆ ತಿಳಿಸಬೇಕು ಎಂದು ಡೆವಲಪಮೆಂಟ್ ಸೊಸೈಟಿ ಕಾರ್ಯದರ್ಶಿ ಗೋಪಾಲ ಹೆಗಡೆ ಕೇಳಿದರು.
ಲೋಕೋಪಯೋಗಿ ಇಲಾಖೆ ಅಧಿಕಾರಿ ಕೃಷ್ಣಾ ರೆಡ್ಡಿ, ಮಹಾಸತಿ ಸರ್ಕಲ್ ನಿಂದ ಚರ್ಚ ತನಕ ಟೆಂಡರ್ ಕರೆಯಲಾಗಿದೆ. 93 ಪ್ರಾಪರ್ಟಿಗಳು ಹೋಗುತ್ತದೆ. ಅಂದಾಜು ಒಂದುವರೆ ಎಕರೆ ಜಾಗ ಹೋಗುತ್ತದೆ ಎಂದರು.
ಅಧಿಕಾರಿ ಉಮೇಶ , ತಹಸೀಲ್ದಾರ ಎಂ ಆರ್.ಕುಲಕರ್ಣಿ ಇದ್ದರು.
ಸರಳತೆ ಮೆರೆದ ಡಿಸಿ!
ಶಿರಸಿ: ಸಭೆಯಲ್ಲಿ ಜನರ ಧ್ವನಿ ಕೇಳದೇ ಹೋದಾಗ ಜನರ ಜೊತೆ ನಿಂತು ಜನರ ನೋವು ನಲಿವು ಆಲಿಸಿದ ಜಿಲ್ಲಾಧಿಕಾರಿ ಮುಲ್ಲೈ, ಸಣ್ಣ ಪುಟ್ಟ ಸಮಸ್ಯೆ ಇದ್ದರೆ ಬಗೆ ಹರಿಸಲಾಗುತ್ತದೆ ಎಂದೂ ಹೇಳಿದರು. ತಾಸುಗಳ ಕಾಲ ನಿಂತು ಮಾಹಿತಿ ಪಡೆದು ಸ್ಥಳದಲ್ಲೇ ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ:ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶನ
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.