ಬೆಳಗಾವಿ: ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಯಕರ ಗುಪ್ತ ಸಭೆ!
Team Udayavani, Nov 13, 2020, 2:16 PM IST
ಅಥಣಿ: ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನ.14 ರಂದು ನಡೆಯಲಿದ್ದು, ಗದ್ದುಗೆಗಾಗಿ ನಿರ್ದೇಶಕರ ಮಧ್ಯೆ ಕಸರತ್ತು ತೀವ್ರಗೊಂಡಿವೆ. ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಉಮೇಶ ಕತ್ತಿ, ಮತ್ತು ರಮೇಶ್ ಕತ್ತಿ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯ ಅಣ್ಣಸಾಬ ಜೊಲ್ಲೆ ಸೇರಿದಂತೆ ಇನ್ನಿತರರು ಗುರುವಾರ ಗೌಪ್ಯ ಸಭೆ ನಡೆಸಿದ್ದಾರೆ.
ಈ ಸಭೆ ಜಿಲ್ಲಾ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ. ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಈ ಸಲವೂ ರಮೇಶ್ ಕತ್ತಿ ಕಣ್ಣಿಟ್ಟಿದ್ದಾರೆ. ಈ ಕಾರಣಕ್ಕೆ ಸಹೋದರ ಉಮೇಶ ಕತ್ತಿ ಮೇಲೆ ಒತ್ತಡ ಹೇರುತ್ತಿರುವ ರಮೇಶ್ ಕತ್ತಿ ಹುದ್ದೆಯಲ್ಲಿ
ಮುಂದುವರೆಯಲು ಕಸರತ್ತು ಆರಂಭಿಸಿದ್ದಾರೆ.
ಅಲ್ಲದೇ ಗುರುವಾರ ನಡೆದ ಸಭೆಯಲ್ಲಿ ಡಿಸಿಸಿ ಬ್ಯಾಂಕಿನ ಹಲವು ನಿರ್ದೇಶಕರು ಭಾಗಿಯಾಗಿದ್ದರು. ಇತ್ತ ಡಿಸಿಎಂ ಲಕ್ಶ್ಮಣ ಸವದಿ ತಮ್ಮ ಆಪ್ತ ಮಹಾಂತೇಶ ದೊಡ್ಡನಗೌಡರ ಅವರನ್ನು ಅಧ್ಯಕ್ಷ ಹುದ್ದೆಗೆ ಕೂಡಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈ
ಕಾರಣಕ್ಕೆ ಎಲ್ಲ ನಾಯಕರು ಸಭೆ ನಡೆಸಿದ್ದರೂ, ಗದ್ದುಗೆಗೆ ತಂತ್ರ-ಪ್ರತಿತಂತ್ರ ಮುಂದುವರೆಸಿದ್ದಾರೆ. 16 ನಿರ್ದೇಶಕ ಸ್ಥಾನ ಹೊಂದಿರುವ ಡಿಸಿಸಿ ಬ್ಯಾಂಕಿಗೆ 13 ಸ್ಥಾನ ಅವಿರೋಧ ಆಯ್ಕೆ ಮಾಡಲಾಗಿತ್ತು. ಉಳಿದ ಮೂರು ಸ್ಥಾನಗಳಿಗೆ ನವೆಂಬರ್ 6ರಂದು ಚುನಾವಣೆ ನಡೆದಿತ್ತು. ಅದರಲ್ಲಿ ಕಮಲ ನಾಯಕರ ಬಣದ ಇಬ್ಬರು ಗೆಲುವು ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.