ಕೋವಿಡ್ ದಿಂದ ಮರಣ ಪ್ರಮಾಣ: ರಾಜ್ಯದ ಸರಾಸರಿ ದೇಶದ ಸರಾಸರಿಗಿಂತ ಅಧಿಕ

Team Udayavani, May 15, 2020, 6:58 AM IST

ಕೋವಿಡ್ ದಿಂದ ಮರಣ ಪ್ರಮಾಣ: ರಾಜ್ಯದ ಸರಾಸರಿ ದೇಶದ ಸರಾಸರಿಗಿಂತ ಅಧಿಕ

ಮುಂಬಯಿ: ಕೋವಿಡ್ ವೈರಾಣು ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೋವಿಡ್ ದಿಂದ ಸಾವನ್ನಪ್ಪಿದವರ ಸಂಖ್ಯೆಯು ಮಹಾರಾಷ್ಟ್ರದಲ್ಲಿ ಹೆಚ್ಚಿವೆ. ಅಂಕಿ ಅಂಶಗಳ ಪ್ರಕಾರ ದೇಶದ ಒಟ್ಟು ಮರಣ ಪ್ರಮಾಣಕ್ಕಿಂತ ಮಹಾರಾಷ್ಟ್ರದಲ್ಲಿ ಹೆಚ್ಚಾಗಿದೆ. ದೇಶದಲ್ಲಿ ಕೋವಿಡ್ ದಿಂದ ಸಾವನ್ನಪ್ಪಿದವರ ಸಂಖ್ಯೆ ಶೇ 3.24ರಷ್ಟಿದ್ದರೆ, ಮಹಾರಾಷ್ಟ್ರದಲ್ಲಿ ಶೇ. 3.71ರಷ್ಟಿದೆ.

ದೇಶದಲ್ಲಿ ಕೋವಿಡ್ ದಿಂದ ಒಟ್ಟು 2,549  ಜನರು ಸಾವನ್ನಪ್ಪಿದ್ದಾರೆ, ಅದರಲ್ಲಿ 975 ಮಂದಿ ಮಹಾರಾಷ್ಟ್ರದಲ್ಲಿ ಸಾವನ್ನಪ್ಪಿದ್ದಾರೆ. ಈವರೆಗೆ ವಿಶ್ವದಲ್ಲಿ 2 ಲಕ್ಷ 93 ಸಾವಿರ 827 ಮಂದಿ
ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು 78,003 ಮಂದಿಗೆ ವೈರಸ್‌ ಸೋಂಕು ತಗುಲಿದ್ದು, ರಾಜ್ಯದಲ್ಲಿ 25,922 ಜನರು ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ದೇಶದ ಇತರರಾಜ್ಯಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಮರಣ ಪ್ರಮಾಣವು ಶೇ.9.21ರಷ್ಟಿದ್ದರೆ, ಗುಜರಾತ್‌ನಲ್ಲಿ ಶೇ. 6.01ರಷ್ಟಿದೆ. ಮಧ್ಯಪ್ರದೇಶದಲ್ಲಿ ಶೇ. 5.84, ಕರ್ನಾಟಕದಲ್ಲಿ ಶೇ.3.60 ಮತ್ತು ಹಿಮಾಚಲ ಪ್ರದೇಶದಲ್ಲಿ ಶೇ 3.39 ರಷ್ಟಿದೆ. ಮಕ್ಕಳು ಕೋವಿಡ್ ವೈರಸ್‌ ಸೋಂಕಿಗೆ ಒಳಗಾಗುವುದಿಲ್ಲ ಎಂಬ ಹೇಳಿಕೆ ಸುಳ್ಳಾಗಿದೆ. ನವಜಾತ ಶಿಶುವಿನಿಂದ ಹಿಡಿದು 10 ವರ್ಷದ ವಯೋಮಿತಿಯ 770 ಮಕ್ಕಳು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. 11 ರಿಂದ 20 ವಯೋಮಿತಿಯ 1 , 579 ಮಂದಿಗೆ, 21 ರಿಂದ 30 ವರ್ಷದೊಳಗಿನ ಒಟ್ಟು 4,817 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈ ವಯೋಮಿತಿಗಿಂತ ಹೆಚ್ಚಿನವರಿಗೆ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿದೆ .

ಕೋವಿಡ್ ಸೋಂಕಿನಿಂದ ಅಲ್ಲದೆ, ಬೇರೆ ಪ್ರಕಾರದ ರೋಗ ಹೊಂದಿರುವ ರೋಗಿಗಳ ಮರಣ ಪ್ರಮಾಣವು ಶೇ.73ರಷ್ಟಿದ್ದರೆ, ಇದರಲ್ಲಿ ಶೇ. 38 ಮತ್ತು ಪುರುಷರು ಮತ್ತು ಶೇ. 62 ರಷ್ಟು ಮಹಿಳೆಯರು ಸೇರಿದ್ದಾರೆ. ಮೇ 1 ರಿಂದ 11 ರವರೆಗೆ ಮರಣದ ಪ್ರಮಾಣವನ್ನು ಗಮನಿಸಿದರೆ ಪ್ರತಿದಿನ ಸರಾಸರಿ 21 ಜನರು ಸಾವನ್ನಪ್ಪಿದ್ದಾರೆ ಎಂದು ತೋರಿಸುತ್ತದೆ. ಮೇ 1ರಿಂದ 11 ರ
ವರೆಗೆ ಮುಂಬಯಿಯಲ್ಲಿ ಕ್ರಮವಾಗಿ 5, 27, 21, 18, 26, 25, 25, 27, 19, 20 ಮಂದಿ ಸಾವನ್ನಪ್ಪಿರುವುದು ವರದಿಯಾಗಿವೆ.

ಹೆಚ್ಚುತ್ತಿರುವ ಸೋಂಕನ್ನು ಪರಿಗಣಿಸಿ ಎನ್‌ಎಂಸಿ ಹೆಚ್ಚುವರಿ ಆಯುಕ್ತ ಸುರೇಶ್‌ ಕಾಕಾನಿ ಅವರು ವೈದ್ಯಕೀಯ ಸಿದ್ಧತೆಗಳನ್ನು ಮಾಡಿದ್ದಾರೆ. ಬಾಂದ್ರಾದಲ್ಲಿ 1,000 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಅವರಲ್ಲಿ 500 ಮಂದಿಗೆ ಆಮ್ಲಜನಕ ಒದಗಿಸಲಾಗುವುದು. ಇತರ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹ ಒತ್ತು ನೀಡಲಾಗಿದೆ. ಮನೆಯಲ್ಲಿ ಪ್ರತ್ಯೇಕವಾಗಿರುವ ರೋಗಿಗಳು ಮನಪಾದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.

ಧಾರಾವಿ: ಸೋಂಕಿತರ ಸಂಖ್ಯೆ 1,028 ಕ್ಕೆ ಏರಿಕೆ
ಏಷ್ಯಾದ ಅತಿದೊಡ್ಡ ಕೊಳೆಗೇರಿ ಎಂದು ಪರಿಗಣಿಸಲ್ಪಟ್ಟ ಧಾರಾವಿಯಲ್ಲಿ ಕೋವಿಡ್ ವೈರಸ್‌ ಪ್ರಕರಣಗಳ ಸಂಖ್ಯೆ ಬುಧವಾರ 1,028ಕ್ಕೆ ಏರಿಕೆಯಾಗಿದ್ದು, 66 ಹೊಸ ರೋಗಿಗಳು ಪತ್ತೆಯಾಗಿದ್ದಾರೆ ಎಂದು ಬಿಎಂಸಿ ಅಧಿಕಾರಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿನ ಸಾಂಕ್ರಾಮಿಕ ರೋಗದ ಸಾವಿನ ಸಂಖ್ಯೆ 31ರಿಂದ ಮಂಗಳವಾರ 40ಕ್ಕೆ  ಏರಿದೆ. ಆದರೆ ಅನಂತರ ಯಾವುದೇ ಹೊಸ ಕೋವಿಡ್‌ -19 ಸಂಬಂಧಿತ ಸಾವು ವರದಿಯಾಗಿಲ್ಲ ಎಂದು ಅವರು ಹೇಳಿದರು.ಇದರಲ್ಲಿ ಒಂಬತ್ತು ಸಾವುಗಳು ವಿವಿಧ ದಿನಾಂಕಗಳಲ್ಲಿ ನಡೆದಿದ್ದು ಈ ಬಗ್ಗೆ ಮಂಗಳವಾರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಮುಂಬಯಿಯಲ್ಲಿ ಕೋವಿಡ್ ವೈರಸ್‌ ಸೋಂಕಿನ ಮೊದಲ ಪ್ರಕರಣ ವರದಿಯಾದ 20 ದಿನಗಳ ನಂತರ ಎ.1ರಂದು ಧಾರಾವಿ ತನ್ನ ಮೊದಲ ಕೋವಿಡ್ ವೈರಸ್‌ ರೋಗಿಯನ್ನು ದಾಖಲಿಸಿದೆ.

ಟಾಪ್ ನ್ಯೂಸ್

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-eeeeega

Iga Swiatek doping ban ; ತಿಂಗಳ ನಿಷೇಧಕ್ಕೆ ಒಪ್ಪಿಗೆ

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.