ಸಾಲಸೌಲಭ್ಯದ ತೊಡಕು ನಿವಾರಣೆಗೆ ಘಟಕ
ಜಿಲ್ಲಾ ಬ್ಯಾಂಕಿಂಗ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಇಒ ಡಾ| ನವೀನ್ ಭಟ್ ಸೂಚನೆ
Team Udayavani, Mar 31, 2022, 5:41 AM IST
ಉಡುಪಿ: ಸರಕಾರದ ಯೋಜನೆಗಳ ಫಲಾನುಭವಿಗಳಿಗೆ ಬ್ಯಾಂಕ್‌ನಿಂದ ಸಾಲಸೌಲಭ್ಯ ಪಡೆಯು ವಲ್ಲಿ ಆಗುತ್ತಿರುವ ತೊಡಕನ್ನು ನಿವಾರಿ ಸಲು ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಮುಂದಾ ಳತ್ವದಲ್ಲಿ ಪ್ರತ್ಯೇಕ ಘಟಕ (ಸೆಲ್) ರಚಿಸುವಂತೆ ಜಿ.ಪಂ. ಸಿಇಒ ಡಾ| ವೈ. ನವೀನ್ ಭಟ್ ಸೂಚನೆ ನೀಡಿದರು.
ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಪ್ರಗತಿ ಪರಿಶೀಲನೆ ಸಮಿತಿಯ ತ್ತೈಮಾ ಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು, ಮಾತನಾಡಿದರು.
ಪರಿಶಿಷ್ಟ ಜಾತಿ/ಪಂಗಡದವರಲ್ಲಿ ಬಹುತೇಕರು ಸರಕಾರದ ಯೋಜನೆಗೆ ಬ್ಯಾಂಕ್ ಸಾಲ ಪಡೆಯಲು ಸಾಧ್ಯ ವಾಗುತ್ತಿಲ್ಲ ಎಂಬ ದೂರಿದೆ. ಯಾರೂ ಕೂಡ ಸರಕಾರದ ಸೌಲಭ್ಯದಿಂದ ವಂಚಿತರಾಗಬಾರದು ಎಂದು ನಿರ್ದೇಶನ ನೀಡಿದರು.
ನರೇಗಾ ಯೋಜನೆಯಲ್ಲಿ 73 ಸಾವಿರ ಜಾಬ್ ಕಾರ್ಡ್‌ಗಳಿದ್ದು, ಅದರಲ್ಲಿ ಕೇವಲ 30 ಸಾವಿರ ಮಂದಿಗೆ ಮಾತ್ರ ಅವರ ಬ್ಯಾಂಕ್ ಖಾತೆಗೆ ಕಾಮಗಾರಿ ಹಣ ಜಮೆ ಆಗುತ್ತಿದೆ. ಉಳಿದ 43 ಸಾವಿರ ಮಂದಿಗೆ ನೇರ ವಾಗಿ ಜಮ ಆಗುತ್ತಿಲ್ಲ. ಹೀಗಾಗಿ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಬ್ಯಾಂಕ್ ಅಕೌಂಟ್ -ಆಧಾರ್ ಸೀಡಿಂಗ್ ಪ್ರಕ್ರಿಯೆ ನಡೆಸ ಬೇಕು. ಎಲ್ಲ ಫಲಾನುಭವಿಗಳ ಖಾತೆಗೂ ನೇರವಾಗಿ ಹಣ ವರ್ಗಾವಣೆ ಆಗಬೇಕು ಎಂದರು.
ಸೈಬರ್ ಕಳ್ಳತನದ
ಅರಿವು ಮೂಡಿಸಿ
ಇತ್ತೀಚೆಗೆ ಗ್ರಾಮೀಣ ಭಾಗದಲ್ಲೂ ಸೈಬರ್ ಕಳ್ಳತನಕ್ಕೆ ಒಳಗಾಗುವರು ಹೆಚ್ಚು ತ್ತಿ ದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಬ್ಯಾಂಕ್‌ಗಳು ಜನರಿಗೆ ಕಾರ್ಯಾ ಗಾರಗಳನ್ನು ಆಯೋಜಿಸಬೇಕು. ಆನ್‌ಲೈನ್ ಕರೆ ಅಥವಾ ಒಟಿಪಿ ಮೂಲಕ ಆಗುವ ಸೈಬರ್ ವಂಚನೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕನ್ನಡದ ಅರಿವು
ಸ್ಥಳೀಯರಿಗೆ ಅಗತ್ಯ ಮಾಹಿತಿ ನೀಡಲು ಪ್ರತೀ ಬ್ಯಾಂಕ್‌ನಲ್ಲಿ ಕನಿಷ್ಠ ಒಬ್ಬರಾದರೂ ಕನ್ನಡ ಬಲ್ಲ ಅಧಿಕಾರಿ ಇರಬೇಕು. ಈ ಬಗ್ಗೆ ಆರ್‌ಬಿಐ ನಿರ್ದೇಶನ ವೂ ಇದೆ. ಈ ಸಂಬಂಧ ರಾಜ್ಯ ಸಮಿತಿಗೂ ಪ್ರಸ್ತಾವನೆ ಸಲ್ಲಿಸಲಿದ್ದೇವೆ ಎಂದು ಹೇಳಿದರು.
ಶೇ. 100 ಗುರಿ ಸಾಧ ನೆಗೆ ಸೂಚನೆ
ಕೆನರಾ ಬ್ಯಾಂಕ್ ಉಡುಪಿಯ ಪ್ರಾದೇಶಿಕ ಕಚೇರಿ-1ರ ವ್ಯವಸ್ಥಾಪಕಿ ಲೀನಾ ಪಿಂಟೋ ಮಾತನಾಡಿ, ಮೂರನೇ ತ್ತೈಮಾಸಿಕದಲ್ಲಿ 8,845 ಕೋ.ರೂ.ಗಳಲ್ಲಿ 8,779 ಕೋ.ರೂ. ಸಾಲ ನೀಡಿದ್ದು, ಶೇ. 99.25ರಷ್ಟು ಸಾಧನೆ ಮಾಡಿದ್ದೇವೆ. ಇದರಲ್ಲಿ 2,498 ಕೋ.ರೂ. ಕೃಷಿ, 2,181 ಕೋ.ರೂ. ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, 85 ಕೋ.ರೂ. ಶಿಕ್ಷಣ ಹಾಗೂ 434 ಕೋ.ರೂ. ಗೃಹ ಸಾಲ ನೀಡಿದ್ದೇವೆ. ಕೃಷಿಯಲ್ಲಿ ಶೇ. 64ರಷ್ಟು ಸಾಧನೆ ಮಾಡಿದ್ದು, ನಿರ್ದಿಷ್ಟ ಕಾಲಮಿತಿಯಲ್ಲಿ ಶೇ. 100ರಷ್ಟು ಸಾಧನೆ ಮಾಡುವಂತೆ ಸೂಚನೆ ನೀಡಿದರು.
31,045 ಕೋ.ರೂ. ಠೇವಣಿ ಸಂಗ್ರಹಿಸಿ ಶೇ. 10.70 ಬೆಳವಣಿಗೆ ಸಾಧಿಸಿದ್ದು, 14,660 ಕೋ.ರೂ. ಸಾಲ ವಿತರಿಸಿ ಶೇ. 12.61ರಷ್ಟು ಬೆಳವಣಿಗೆ ದಾಖಲಿಸಲಾ ಗಿ ದೆ. ಜಿಲ್ಲೆಯ ಸಾಲ ಮತ್ತು ಠೇವಣಿ ಅನುಪಾತ ಶೇ. 47.22ರಷ್ಟಾಗಿದೆ ಎಂದರು.
ಆರ್‌ಬಿಐ ಎಫ್ಐಡಿಡಿ ವಿಭಾಗದ ಎಜಿಎಂ ಮತ್ತು ಉಡುಪಿ ನೋಡಲ್ ಅಧಿಕಾರಿ ತನು ನಂಜಪ್ಪ ಮಾತನಾಡಿ, ಕೇಂದ್ರ ಸರಕಾರದ ಯೋಜನೆಗಳನ್ನು ಜನಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಬೇಕು ಮತ್ತು ಅದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಹೇಳಿದರು.
ನಬಾರ್ಡ್ ಎಜಿಎಂ (ಡಿಡಿ) ಸಂಗೀತಾ ಕರ್ತಾ, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿ-2ರ ವ್ಯವಸ್ಥಾಪಕ ಕಾಳಿ ಕೆ., ಯೂನಿಯನ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ವ್ಯವಸ್ಥಾಪಕ ಡಾ| ವಾಸಪ್ಪ ಎಚ್.ಟಿ., ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಬ್ಯಾಂಕ್‌ನ ಅಧಿಕಾರಿಗಳು ಉಪಸ್ಥಿತರಿದ್ದರು. ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಪಿ.ಎಂ. ಪಿಂಜಾರ ಸ್ವಾಗತಿಸಿದರು.
12,659 ಕೋ.ರೂ. ಸಾಲ ಯೋಜನೆ
2022-23ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕೃಷಿ, ಸಣ್ಣ, ಅತೀಸಣ್ಣ, ಮಧ್ಯಮ ಕೈಗಾರಿಕೆ, ರಫ್ತು, ಶಿಕ್ಷಣ, ಗೃಹ, ಸಾಮಾಜಿಕ ಮೂಲಸೌಕರ್ಯ, ನವೀಕರಿಸಬಹುದಾದ ಶಕ್ತಿಯ ಮೂಲಗಳ ಉತ್ತೇಜನ ಸೇರಿದಂತೆ ವಿವಿಧ ಆದ್ಯತೆ ಮತ್ತು ಆದ್ಯತೇತರ ವಲಯಕ್ಕೆ 12,659.26 ಕೋ. ರೂ. ಸಾಲ ನೀಡಲು ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಸುಮಾರು 4,32,661 ಫಲಾನುಭವಿಗಳಿಗೆ ಇದರಿಂದ ಅನುಕೂಲವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.