ಡಿ. 8ರಿಂದ ಇಂಡಿಯಾ ಓಪನ್ ಬ್ಯಾಡ್ಮಿಂಟನ್
Team Udayavani, May 23, 2020, 5:55 AM IST
ಸಾಂದರ್ಭಿಕ ಚಿತ್ರ.
ಹೊಸದಿಲ್ಲಿ: ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್ (ಬಿಡಬ್ಲ್ಯುಎಫ್) ಶುಕ್ರವಾರ ಪ್ರಕಟಿಸಿದ ಪರಿಷ್ಕೃತ ವೇಳಾಪಟ್ಟಿಯಂತೆ “ಇಂಡಿಯಾ ಓಪನ್ ಬ್ಯಾಡ್ಮಿಂಟನ್’ ಪಂದ್ಯಾವಳಿ ಡಿ. 8ರಿಂದ 13ರ ತನಕ ನಡೆಯಲಿದೆ.
ಮೂಲ ವೇಳಾಪಟ್ಟಿ ಪ್ರಕಾರ 400,000 ಡಾಲರ್ ಬಹುಮಾನದ ಇಂಡಿಯಾ ಓಪನ್ ಪಂದ್ಯಾವಳಿ ಮಾರ್ಚ್ ತಿಂಗಳಲ್ಲಿ ನಡೆಯಬೇಕಿತ್ತು.
ಇದೇ ವೇಳೆ 170,000 ಡಾಲರ್ ಬಹುಮಾದ “ಸಯ್ಯದ್ ಮೋದಿ ಇಂಡಿಯಾ ಇಂಟರ್‌ನ್ಯಾಶನಲ್’ ವಾರ್ಷಿಕ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ನ. 17ರಿಂದ 22ರ ತನಕ ಲಕ್ನೋದಲ್ಲಿ ಆಯೋಜಿಸಲಾಗುವುದು. ಆದರೆ ಇದೇ ವೇಳೆ ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಕೂಡ ನಡೆಯಲಿದೆ.
ನೂತನ ವೇಳಾಪಟ್ಟಿ
ಬಿಡಬ್ಲ್ಯುಎಫ್‌ನ ನೂತನ ವೇಳಾಪಟ್ಟಿಯಂತೆ ಸೆಪ್ಟಂಬರ್ ತಿಂಗಳಲ್ಲಿ ತೈಪೆ ಓಪನ್, ಕೊರಿಯಾ ಓಪನ್, ಚೀನ ಓಪನ್ ಮತ್ತು ಜಪಾನ್ ಓಪನ್ ಟೂರ್ನಿ ನಡೆಯಲಿದೆ.
ಅಕ್ಟೋಬರ್‌ನಲ್ಲಿ ಡೆನ್ಮಾರ್ಕ್ ಓಪನ್, ಫ್ರೆಂಚ್ ಓಪನ್, ನ್ಯೂಜಿಲ್ಯಾಂಡ್ ಓಪನ್, ಮಕಾವು ಓಪನ್ ಪಂದ್ಯಾವಳಿ ಏರ್ಪಡಲಿದೆ.
ನವಂಬರ್‌ನಲ್ಲಿ ಹಾಂಕಾಂಗ್ ಓಪನ್, ಇಂಡೋನೇಶ್ಯ ಓಪನ್, ಸಯ್ಯದ್ ಮೋದಿ ಇಂಟರ್‌ನ್ಯಾಶನಲ್, ಮಲೇಶ್ಯ ಓಪನ್ ಹಾಗೂ ಡಿಸೆಂಬರ್‌ನಲ್ಲಿ ಥಾಯ್ಲೆಂಡ್ ಓಪನ್, ಇಂಡಿಯಾ ಓಪನ್ ಮತ್ತು ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಫೈನಲ್ಸ್ ಸರಣಿಯನ್ನು ಆಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tobacco: ತಂಬಾಕು ಮೇಲಿನ ಚಿತ್ರ ಸಹಿತ ಎಚ್ಚರಿಕೆ ಗಾತ್ರ ಶೀಘ್ರ ಹಿರಿದು!
Coconut: ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ 422 ರೂ. ಹೆಚ್ಚಳ: ಕೇಂದ್ರ ಸಂಪುಟ
laws: ಕಠಿಣ ಕಾಯ್ದೆ ಇರುವುದು ಸ್ತ್ರೀ ರಕ್ಷಣೆಗೆ, ದುರ್ಬಳಕೆ ಸಲ್ಲ: ಸುಪ್ರೀಂ ಕೋರ್ಟ್
Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ
Mangaluru: ಬಾಲಕಿ, ಮಹಿಳೆಯ ವೀಡಿಯೋ ಚಿತ್ರೀಕರಣ: ಆರೋಪಿಗೆ 5 ವರ್ಷಗಳ ಜೈಲು ಶಿಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.