2020ರ ರಜಾ ದಿನಗಳ ಘೋಷಣೆ
Team Udayavani, Nov 23, 2019, 3:07 AM IST
ಬೆಂಗಳೂರು: ರಾಜ್ಯ ಸರ್ಕಾರ 2020ನೇ ಸಾಲಿನ ಸರ್ಕಾರಿ ರಜಾ ದಿನಗಳನ್ನು ಘೋಷಣೆ ಮಾಡಿದ್ದು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಎರಡನೇ ಹಾಗೂ ನಾಲ್ಕನೇ ಶನಿವಾರ ಹಾಗೂ ಭಾನುವಾರಗಳನ್ನು ಹೊರತುಪಡಿಸಿ 18 ಸಾರ್ವತ್ರಿಕ ರಜಾ ದಿನಗಳು ಹಾಗೂ 21 ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಲಾಗಿದೆ. ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರ ಬರುವುದರಿಂದ ಪ್ರತ್ಯೇಕ ಸರ್ಕಾರಿ ರಜೆ ದಿನ ಪರಿಗಣನೆ ಮಾಡಲಾಗಿಲ್ಲ.
ಅಲ್ಲದೇ ಮುಸ್ಲಿಂ ಬಾಂಧವರಿಗೆ ಸರ್ಕಾರ ಘೋಷಣೆ ಮಾಡಿರುವ ದಿನ ಸಾರ್ವತ್ರಿಕ ರಜೆ ಬೀಳದೇ ಹೋದರೆ, ಆಗಿನ ಸಂದರ್ಭಕ್ಕೆ ಹೋಲಿಕೆ ಮಾಡಿ ರಜಾ ಬದಲಾವಣೆ ಮಾಡಿ ಘೋಷಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 3ರಂದು ನಡೆಯುವ ಕೈಲ್ ಮುಹೂರ್ತ, ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ, ಡಿಸೆಂಬರ್ 1ರಂದು ನಡೆಯುವ ಹುತ್ತರಿ ಹಬ್ಬ ಆಚರಣೆಗೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಣೆ ಮಾಡಲಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತ್ಯೇಕವಾಗಿ ರಜಾ ದಿನಗಳನ್ನು ಘೋಷಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಾರ್ವತ್ರಿಕ ರಜಾ ದಿನಗಳ ಜತೆಗೆ ರಾಜ್ಯ ಸರ್ಕಾರಿ ನೌಕರರು ಎರಡು ದಿನಗಳಿಗೆ ಮೀರದಂತೆ 2020ನೇ ಸಾಲಿನಲ್ಲಿ ಪೂರ್ವಾನುಮತಿ ಪಡೆದು ಪರಿಮಿತಿ ಪಡೆದು ಉಪಯೋಗಿಸಿಕೊಳ್ಳಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಲು ಅಧಿಕಾರವುಳ್ಳ ಅಧಿಕಾರಿಗಳು ಮಾತ್ರ ಅನುಮತಿ ನೀಡಬೇಕೆಂದು ಸೂಚಿಸಲಾಗಿದೆ.
ಏಪ್ರಿಲ್ 1 ರಂದು ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ವ್ಯವಹಾರದ ಮುಕ್ತಾಯದ ದಿನವಾಗಿರುವುದರಿಂದ ಅಂದು ವಾಣಿಜ್ಯ ಮತ್ತು ಸಹಕಾರಿ ಬ್ಯಾಂಕುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಪರಿಮಿತ ರಜಾದಿನಗಳಲ್ಲಿ ಏಪ್ರಿಲ್ 11ರಂದು ಬರುವ ಪವಿತ್ರ ಶನಿವಾರ ಎರಡನೇ ಶನಿವಾರ ಬಂದಿದ್ದು, ಮಾರ್ಚ್ 29ರಂದು ನಡೆಯುವ ದೇವರ ದಾಸಿಮಯ್ಯ ಜಯಂತಿ ಭಾನುವಾರ ಬಂದಿದ್ದು, ಸೆಪ್ಟೆಂಬರ್ 17 ರಂದು ನಡೆಯುವ ವಿಶ್ವಕರ್ಮ ಜಯಂತಿಯು ಮಹಾಲಯ ಅಮವಾಸ್ಯೆಯ ದಿನವೇ ಬಂದಿರುವುದರಿಂದ ಪ್ರತ್ಯೇಕ ರಜೆ ನೀಡಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ರಜೆ ದಿನಗಳ ಹೊರತಾಗಿ ಕೆಲವು ಸಾರ್ವತ್ರಿಕ ರಜಾ ದಿನಗಳು ಭಾನುವಾರ ಬಂದಿರುವುದರಿಂದ ಪ್ರತ್ಯೇಕ ಸರ್ಕಾರಿ ರಜೆಗಳಾಗಿ ಪರಿಗಣಿಸಲಾಗಿಲ್ಲ.
26-1-20 ಗಣರಾಜ್ಯೋತ್ಸವ
26-04-20 ಬಸವ ಜಯಂತಿ, ಅಕ್ಷಯ ತೃತಿಯ
30-08-20 ಮೊಹರಂ ಕೊನೇ ದಿನ
25-10-20 ಆಯುಧ ಪೂಜೆ
1-11-20 ಕನ್ನಡ ರಾಜ್ಯೋತ್ಸವ
14-11-20 ನರಕ ಚತುರ್ದಶಿ (ಎರಡನೇ ಶನಿವಾರ)
22-08-20 ವರಸಿದ್ಧಿ ವಿನಾಯಕ ವೃತ (4ನೇ ಶನಿವಾರ)
2020 ಸಾರ್ವತ್ರಿಕ ರಜಾ ದಿನಗಳು
15-1-20 ಮಕರ ಸಂಕ್ರಾಂತಿ
21-2-20 ಮಹಾಶಿವರಾತ್ರಿ
25-3-20 ಯುಗಾದಿ ಹಬ್ಬ
6-4-20 ಮಹಾವೀರ ಜಯಂತಿ
10-4-20 ಗುಡ್ ಫ್ರೈಡೆ
14-4-20 ಡಾ.ಅಂಬೇಡ್ಕರ್ ಜಯಂತಿ
01-5-20 ಕಾರ್ಮಿಕ ದಿನಾಚರಣೆ
25-5-20 ಕುತುಬ್ ಎ. ರಂಜಾನ್
01-8-20 ಬಕ್ರೀದ್
15-8-20 ಸ್ವಾತಂತ್ರ್ಯ ದಿನಾಚರಣೆ
17-9-20 ಮಹಾಲಯ ಅಮಾವಾಸ್ಯೆ
02-10-20 ಗಾಂಧಿ ಜಯಂತಿ
26-10-20 ವಿಜಯ ದಶಮಿ
30-10-20 ಈದ್ ಮಿಲಾದ್
31-10-20 ಮಹರ್ಷಿ ವಾಲ್ಮೀಕಿ ಜಯಂತಿ
16-11-20 ಬಲಿಪಾಡ್ಯಮಿ ದೀಪಾವಳಿ
03-12-20 ಕನಕದಾಸ ಜಯಂತಿ
25-12-20 ಕ್ರಿಸ್ ಮಸ್
ಪರಿಮಿತ ರಜಾದಿನ
1-1-20 ಹೊಸ ವರ್ಷಾರಂಭ
3-2-20 ಮಾಧ್ವನವಮಿ
9-3-20 ಹೋಳಿ ಹಬ್ಬ
2-4-20 ರಾಮನವಮಿ
9-4-20 ಸಬ್ ಎ ಬರಾತ್
13-4-20 ಸೌರಮಾನ ಯುಗಾದಿ
28-4-20 ಶಂಕರಾಚಾರ್ಯ ಜಯಂತಿ
7-5-20 ಬುದ್ಧ ಪೂರ್ಣಿಮೆ
20-5-20 ಷಬ್ ಎ ಬಕ್ರೀದ್
22-5-20 ಜುಮಾತ್ ಉಲ್ ವಿದಾ
31-7-20 ವರಮಹಾಲಕ್ಷ್ಮೀ ಹಬ್ಬ
11-8-20 ಶ್ರೀಕೃಷ್ಣ ಜನ್ಮಾಷ್ಠಮಿ
21-8-20 ಸ್ವರ್ಣಗೌರಿ ವೃತ
31-8-20 ಓಣಂ ಹಬ್ಬ, ಅನಂತ ಪದ್ಮನಾಭ ವೃತ, ಋಗ್ ಉಪಾಕರ್ಮ
1-9-20 ಯಜುರ್ ಉಪಾಕರ್ಮ
2-9-20 ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ
8-9-20 ಕನ್ಯಾಕುಮಾರಿಯಮ್ಮ ಜಯಂತಿ
17-10-20 ತುಲಾ ಸಂಕ್ರಮಣ
30-11-20 ಗುರುನಾನಕ್ ಜಯಂತಿ
1-12-20 ಹುತ್ತರಿ ಹಬ್ಬ
24-12-20 ಕ್ರಿಸ್‌ಮಸ್ ಈವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Ullala: ಕೊಣಾಜೆ ಬಳಿ ರಿಕ್ಷಾ ಅಪಘಾತ: ವ್ಯಕ್ತಿ ಮೃತ್ಯು
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.