ಸಗಟು ಬೆಲೆ ಸೂಚ್ಯಂಕ ದರ ಇಳಿಕೆ: ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ವರ್ಷ ಶೇ-0.87ರಷ್ಟು ಇಳಿಕೆ
Team Udayavani, Jun 16, 2020, 12:34 PM IST
ನವದೆಹಲಿ: ಮಾಸಿಕ ಸಗಟು ಬೆಲೆ ಸೂಚ್ಯಂಕ (ಡಬ್ಲ್ಯೂಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ದರವು ಕಳೆದ ವರ್ಷ ಮೇ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಮೇ ತಿಂಗಳಲ್ಲಿ ಶೇ-0.87ರಷ್ಟು ಇಳಿದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಹಣದುಬ್ಬರ ಸೂಚ್ಯಂಕ ಶೇ 2.79 ರಷ್ಟಿತ್ತು. ಅದೀಗ ಶೇ -3.21ಕ್ಕೆ (ತಾತ್ಕಾಲಿಕ) ಇಳಿಕೆ ಕಂಡಿದೆ.
ಸೋಮವಾರ ಬಿಡುಗಡೆಯಾದ ಸರಕಾರದ ಮಾಹಿತಿಯ ಪ್ರಕಾರ, ಪ್ರಾಥಮಿಕ ವರದಿಗಳ ಸೂಚ್ಯಂಕವು ಈ ವರ್ಷದ ಮಾರ್ಚ್‌ನಿಂದ ಮೇ ತಿಂಗಳ ಕೊನೆಯವರೆಗೆ 137.4-136.2ಕ್ಕೆ (-0.87)ಇಳಿದಿದೆ.
ಮಾರ್ಚ್ ತಿಂಗಳಿಗೆ ಹೋಲಿಸಿದರೆ, ಕಚ್ಚಾ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಶೇ -23.18 ಮತ್ತು ಆಹಾರೇತರ ದರಗಳು ಶೇ -1.44 ರಷ್ಟು ಇಳಿಮುಖವಾಗಿವೆ. ಆಹಾರ ದರಗಳು ಶೇ 0.73 ರಷ್ಟು ಏರಿದೆ.”ಆಹಾರ ಉತ್ಪನ್ನ’ ಒಳಗೊಂಡಿರುವ ಆಹಾರ ಸೂಚ್ಯಂಕವು ತಾತ್ಕಾಲಿಕವಾಗಿ ಮಾರ್ಚ್‌ನಿಂದ ಮೇವರೆಗೆ 145.7-146.1ಕ್ಕೆ ಏರಿದೆ.
ಡಬ್ಲ್ಯೂಪಿಐ ಆಹಾರ ಸೂಚ್ಯಂಕದ ಆಧಾರದ ಮೇಲೆ ವಾರ್ಷಿಕ ಹಣದುಬ್ಬರ ದರ ಕಡಿಮೆಯಾಗಿದ್ದು, ಇಂಧನ ಮತ್ತು ವಿದ್ಯುತ್ ಸೂಚ್ಯಂಕವು 99.5 ರಿಂದ 83.7ಕ್ಕೆ (-15.88%) ಇಳಿದಿದೆ. ಅಲ್ಲದೆ, ಖನಿಜ ತೈಲಗಳು -30.10% ರಷ್ಟು ಬೆಲೆಗಳು ಇಳಿಮುಖವಾಗಿವೆ. ಕಲ್ಲಿದ್ದಲು ಮತ್ತು ವಿದ್ಯುತ್ ಬೆಲೆಗಳು ಯಾವುದೇ ರೀತಿ ಬದಲಾವಣೆಗೊಂಡಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
KMF: ಸಂಕ್ರಾಂತಿ ಬಳಿಕ ಹಾಲಿನ ದರ ಪರಿಷ್ಕರಣೆ ಸರಕಾರದಿಂದ ನಿರ್ಧಾರ: ಭೀಮಾ ನಾಯ್ಕ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Mangaluru: ವಿಚ್ಛೇದಿತ ಮಹಿಳೆಯನ್ನು ಹಿಂಬಾಲಿಸಿದ ಇಬ್ಬರು ವಶಕ್ಕೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.