Deepawali Festival ಕರಾವಳಿಯಾದ್ಯಂತ ದೀಪಾವಳಿ ಸಡಗರ
Team Udayavani, Nov 12, 2023, 11:32 PM IST
ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ವಿವಿಧ ಕಚೇರಿ-ಮನೆಗಳಲ್ಲಿ ಲಕ್ಷ್ಮೀ ಪೂಜೆ ರವಿವಾರ ನೆರವೇರಿತು. ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ ಸಂಪನ್ನಗೊಂಡಿತು.
ಸಾವಿರಾರು ಮಂದಿ ಭಕ್ತರು ಶ್ರೀ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಹೂವಿನ ಅಲಂಕಾರದೊಂದಿಗೆ ಮನೆ, ಕಚೇರಿಗಳನ್ನು ಸಿಂಗರಿಸಿ ಜನರು ಸಂಭ್ರಮಿಸಿದರು. ಮನೆ ಮುಂಭಾಗ ರಂಗೋಲಿ ಹಾಕಿ ದೀಪ ಹಚ್ಚಿ ದೀಪಾವಳಿಯನ್ನು ಆಚರಿಸಲಾಯಿತು. ಕೆಲವು ಕಡೆಗಳಲ್ಲಿ ವಾಹನ, ಅಂಗಡಿಗಳಿಗೂ ಪೂಜೆ ನೆರವೇರಿದರೆ ಇನ್ನು ಕೆಲವೆಡೆ ಸೋಮವಾರ ಪೂಜೆ ನಡೆಯಲಿದೆ.
ಉಡುಪಿ ಶ್ರೀಕೃಷ್ಣಮಠದಲ್ಲಿ ಪರ್ಯಾಯ ಕೃಷ್ಣಾಪುರ ಮಠಾಧೀಶರು ಇತರ ಸ್ವಾಮೀಜಿಯವರಿಗೆ ತೈಲಂಭ್ಯಂಗಕ್ಕೆ ಎಣ್ಣೆಶಾಸ್ತ್ರ ನೆರವೇರಿಸಿ ರಾತ್ರಿ ಬಲೀಂದ್ರ ಪೂಜೆಯಲ್ಲಿ ಪಾಲ್ಗೊಂಡರು.
ಮನೆಗಳಲ್ಲಿ ಬೆಳಗಿದ ದೀಪ-ಗೂಡುದೀಪ!
ದೀಪಾವಳಿಯ ಪ್ರಥಮ ದಿನವಾದ ಬಲಿಪಾಡ್ಯದ ಅಂಗವಾಗಿ ರವಿವಾರ ಮನೆಗಳಲ್ಲಿ ಬೆಳಗ್ಗಿನ ಹೊತ್ತು ಅಭ್ಯಂಜನ ಸ್ನಾನದೊಂದಿಗೆ, ದೀಪಾವಳಿಯ ಸಡಗರಕ್ಕೆ ಚಾಲನೆ ದೊರಕಿದೆ. ಮೂರು ದಿನ ದೀಪಾವಳಿಯ ಸಂಭ್ರಮವಿರಲಿದೆ. ಮನೆಯ ಒಳ- ಹೊರಗೆ ಹಣತೆ ದೀಪಗಳ ಜತೆ ಗೂಡುದೀಪಗಳು ಬೆಳಗಿದವು. ವಿವಿಧ ಬಣ್ಣ-ವಿನ್ಯಾಸಗಳ ಗೂಡುದೀಪಗಳು, ಆಕರ್ಷಕ ವಿದ್ಯುತ್ ದೀಪಗಳು ಶೋಭಿಸುತ್ತಿವೆ. ಮನೆಯ ಆವರಣದಲ್ಲಿ ಹಣತೆಗಳಲ್ಲಿ ದೀಪ ಬೆಳಗಿಸಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ.
ಶ್ರೀಕೃಷ್ಣಮಠದಲ್ಲಿ ಬಲೀಂದ್ರಪೂಜೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ರವಿವಾರ ದೀಪಾವಳಿ ಅಂಗವಾಗಿ ಕನಕಗೋಪುರ ಮುಂಭಾಗದಲ್ಲಿ ಪರ್ಯಾಯ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು, ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯರು ಬಲೀಂದ್ರ ಪೂಜೆ, ಧನಲಕ್ಷಿ ¾à ಪೂಜೆ, ವ್ಯೋಮ ದೀಪ ನೆರವೇರಿಸಿದರು. ನ. 13ರಂದು ಗೋಪೂಜೆ ನಡೆಯಲಿದೆ. ನ. 14ರಿಂದ ತುಳಸೀಪೂಜೆ ಆರಂಭವಾಗಲಿದೆ. ನ. 24 ಉತ್ಥಾನದ್ವಾದಶಿಯಿಂದ 4 ದಿನಗಳ ಪರ್ಯಂತ ಲಕ್ಷದೀಪೋತ್ಸವ ಜರಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.