Deepfake: ಇಂದು ಅಶ್ವಿನಿ ವೈಷ್ಣವ್ ಸಭೆ
Team Udayavani, Nov 23, 2023, 5:42 AM IST
ನವದೆಹಲಿ: ಇತ್ತೀಚೆಗೆ ಎಲ್ಲ ಕಡೆ ಡೀಪ್ಫೇಕ್ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಂಡಿರುವ ಘಟನೆಗಳು ದೊಡ್ಡಪ್ರಮಾಣದಲ್ಲಿ ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್, ಸಾಮಾಜಿಕ ತಾಣಗಳ ಪ್ರತಿನಿಧಿಗಳೊಂದಿಗೆ ಸಭೆಯನ್ನಿಟ್ಟುಕೊಂಡಿದ್ದಾರೆ. ನ.23ರಂದು ವೈಷ್ಣವ್, ಡೀಪ್ಫೇಕ್ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಐಟಿ ಕಾಯ್ದೆ ಡೀಪ್ಫೇಕ್ಗೆ ಏನು ಶಿಕ್ಷೆ ಎನ್ನುವುದನ್ನು 2001ರ ಐಟಿ ಕಾಯ್ದೆ ಉಲ್ಲೇಖೀಸಿ ವಿವರಣೆ ನೀಡಿದೆ.
ಆದರೆ ಅದನ್ನು ತಡೆಯುವುದು ಹೇಗೆ ಎನ್ನುವುದರ ಬಗ್ಗೆ ನಿಯಮಾವಳಿಗಳನ್ನು ರೂಪಿಸಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಡೀಪ್ಫೇಕ್ ಬಹಳ ಅಪಾಯಕಾರಿ ಎಂದು ಕಿಡಿಕಾರಿದ್ದಾರೆ. ತಾನು ಗರ್ಭಾ ನೃತ್ಯ ಮಾಡುತ್ತಿರುವಂತೆ ಒಂದು ಡೀಪ್ಫೇಕ್ ವಿಡಿಯೊವನ್ನು ಮಾಡಲಾಗಿದೆ. ಆದರೆ ಅಂತಹ ಯಾವುದೇ ನರ್ತನದಲ್ಲೂ ತಾನು ಪಾಲ್ಗೊಂಡಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮೊದಲು ದನಿಯೆತ್ತಿದ್ದು ನಟಿ ರಶ್ಮಿಕಾ ಮಂದಣ್ಣ. ಇಂಗ್ಲೆಂಡ್ನ ಜನಪ್ರಿಯ ಮಹಿಳೆಯೊಬ್ಬರು ಲಿಫ್ಟ್ನೊಳಕ್ಕೆ ಪ್ರವೇಶಿಸುತ್ತಿರುವ ವಿಡಿಯೊವನ್ನು ರಶ್ಮಿಕಾ ಮುಖಕ್ಕೆ ಜೋಡಿಸಲಾಗಿತ್ತು. ಅದು ಸ್ವತಃ ರಶ್ಮಿಕಾ ಅವರೇ ಹಾಗೆ ಮಾಡಿದ್ದಾರೆಂಬಂತೆ ಕಾಣುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ಗೆ 7 ದಿನಗಳ ಮಧ್ಯಂತರ ಜಾಮೀನು
Loksabha:ಕಾಂಗ್ರೆಸ್ ಅಂಬೇಡ್ಕರ್ ಗೆ ಹಲವು ಬಾರಿ ಅವಮಾನ ಮಾಡಿದೆ: ಪ್ರಧಾನಿ ಮೋದಿ ತಿರುಗೇಟು
SC;ಪ್ರಕರಣಗಳ ವರ್ಗಾವಣೆ:ಪ್ರತಿಕ್ರಿಯಿಸಲು ಯಾಸಿನ್ ಮಲಿಕ್ ಸೇರಿ ಐವರಿಗೆ 2 ವಾರ ಕಾಲಾವಕಾಶ
ರಿವರ್ಸ್ ತೆಗೆಯುವಾಗ ಸಮುದ್ರಕ್ಕೆ ಬಿದ್ದ ಕಾರು… ನೌಕಾಪಡೆ ಅಧಿಕಾರಿ ಪಾರು, ಚಾಲಕ ನಾಪತ್ತೆ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.