HC: ಮೃತ ಬಾಲಕನ ತಂದೆಗೆ ಪರಿಹಾರ ವಿಳಂಬ- ಸರಕಾರಕ್ಕೆ 1 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್
Team Udayavani, Nov 9, 2023, 8:44 PM IST
ಬೆಂಗಳೂರು: ಹತ್ತು ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ತೆರೆದ ಚರಂಡಿಯಲ್ಲಿ ಬಿದ್ದು ಸಾವನ್ನಪ್ಪಿದ ಆರು ವರ್ಷದ ಬಾಲಕನ ತಂದೆಗೆ 5 ಲಕ್ಷ ರೂ. ಪರಿಹಾರ ನೀಡಲು ಕಚೇರಿಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಸರಕಾರಕ್ಕೆ ಹೈಕೋರ್ಟ್ 1 ಲಕ್ಷ ರೂ. ದಂಡ ವಿಧಿಸಿದೆ.
ಅಲ್ಲದೆ, ಆರು ವಾರಗಳಲ್ಲಿ ಬಾಲಕನ ತಂದೆ ಕರಣ್ ಸಿಂಗ್ ರಾಜ ಪುರೋಹಿತ್ ಅವರಿಗೆ ಪರಿಹಾರ ಧನ ತಲುಪದಿದ್ದರೆ ಶೇ.12ರಷ್ಟು ಬಡ್ಡಿ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ. ಒಂದು ವೇಳೆ ರಾಜಪುರೋಹಿತ್‌ಗೆ ಪರಿಹಾರ ಧನ ತಲುಪಿಸುವುದು ವಿಳಂಬ ಮಾಡಿದರೆ ದಂಡದ ಮೊತ್ತ 1 ಲಕ್ಷ ರೂ.ಗಳಿರುವುದು ಪ್ರತಿ ತಿಂಗಳಿಗೆ 50 ಸಾವಿರ ರೂಪಾಯಿಗಳಷ್ಟು ಹೆಚ್ಚಿಸಲಾಗುವುದು ಎಂದು ಕೋರ್ಟ್ ಎಚ್ಚರಿಕೆ ನೀಡಿದೆ. ಅಲ್ಲದೆ, ಅನಗತ್ಯ ವಿಳಂಬ ಮಾಡಿರುವ ತಪ್ಪಿತಸ್ಥ ಅಧಿಕಾರಿಯಿಂದ ಬಡ್ಡಿ ಮತ್ತು ದಂಡದ ಮೊತ್ತ ವಸೂಲಿಗೆ ರಾಜ್ಯ ಸರಕಾರ ಮುಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಈ ವಿಚಾರವಾಗಿ ಮೃತ ಬಾಲಕನ ತಂದೆ ಕರಣ್ ಸಿಂಗ್ ಎಸ್. ರಾಜಪುರೋಹಿತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
2013ರಿಂದ ಅರ್ಜಿದಾರರು ಮೂರನೇ ಬಾರಿಗೆ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಾಗಾಗಿ ವಿಪತ್ತು ನಿರ್ವಹಣ ಕಾಯ್ದೆಯಡಿ ಅವರಿಗೆ ನಿಗದಿಯಂತೆ 5 ಲಕ್ಷ ಪರಿಹಾರವನ್ನು 2013ರ ಅಕ್ಟೋಬರ್ 15ರಿಂದ ಅನ್ವಯವಾಗುವಂತೆ ವಾರ್ಷಿಕ ಶೇ.6ರಷ್ಟು ಬಡ್ಡಿ ಸಹಿತ ಆರು ವಾರಗಳಲ್ಲಿ ಪರಿಹಾರ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಮಗ ಅಥವಾ ಮಗಳ ಹಠಾತ್ ಸಾವು ಪೋಷಕರಿಗೆ ಭೀಕರವಾದ ಹೊಡೆತವಾಗಿದೆ ಎಂಬುದನ್ನು ಮರೆಯಲಾಗುವುದಿಲ್ಲ. ಮಗುವನ್ನು ಕಳೆದುಕೊಂಡು ಅರ್ಜಿದಾರರು ಜೀವನದ ಅತ್ಯಂತ ನೋವಿನ ಕ್ಷಣಗಳಲ್ಲಿರುವಾಗ ಅವರಿಗೆ ಮತ್ತೆ ನೋವು ನೀಡುವುದು, ಅವರನ್ನು ಕಚೇರಿಯಿಂದ ಕಚೇಗೆ ಅಲೆದಾಡಿಸುವುದು ಸರಿಯೇ ಎಂದು ಬೇಸರ ವ್ಯಕ್ತಪಡಿಸಿದ ನ್ಯಾಯಪೀಠ, ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರಕಾರ ಎಚ್ಚರಿಕೆ ವಹಿಸಬೇಕು. ನಾಗರಿಕರ ಹಿತರಕ್ಷಣೆ ಸರಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ
2013ರ ಜು.15ರಂದು ಭಾರೀ ಮಳೆ ಕಾರಣ ರಿತೇಶ್ ಸಿಂಗ್ ತೆರೆದ ಚರಂಡಿಯಲ್ಲಿ ಬಿದ್ದು ಕೊಚ್ಚಿ ಹೋಗಿ ಸಾವನ್ನಪ್ಪಿದ್ದ. ಅವರ ತಂದೆ ಕರಣ್ ಸಿಂಗ್ ಎಸ್. ರಾಜಪುರೋಹಿತ್ ಖಾಸಗಿ ಕಂಪೆನಿಯಲ್ಲಿ ಸೇಲ್ಸ್‌ಮನ್ ಆಗಿದ್ದರು. ಅವರು ನಗರಪಾಲಿಕೆ ವಿರುದ್ಧ ದೂರು ನೀಡಿದ್ದರು. ವಿಪತ್ತು ನಿರ್ವಹಣ ಕಾಯಿದೆಯಡಿ 5 ಲಕ್ಷ ರೂ. ಮಾತ್ರ ಪರಿಹಾರ ನೀಡಲಾಗುವುದು ಪಾಲಿಕೆ ಅಧಿಕಾರಿಗಳು ಹೇಳಿದ್ದರು. ಆದರೆ ಅರ್ಜಿದಾರರು ಹೆಚ್ಚಿನ ಪರಿಹಾರ ಕೋರಿ ಮನವಿ ಸಲ್ಲಿಸಿದ್ದರು. ಆ ಮನವಿಯನ್ನು ಅಧಿಕಾರಿಗಳು ಪರಿಗಣಿಸಿರಲಿಲ್ಲ. ಹಾಗಾಗಿ ಅವರು ಎರಡು ಬಾರಿ ಹೈಕೋರ್ಟ್ ಮೊರೆ ಹೋಗಿದ್ದರು. ಆಗ ಹೈಕೋರ್ಟ್ ಹೆಚ್ಚಿನ ಪರಿಹಾರ ನೀಡುವಂತೆ ಹೇಳಿತ್ತು. ಅದರೂ ಅವರ ಮನವಿ ಪರಿಗಣಿಸದೆ ಸರಕಾರ ಮತ್ತು ಪಾಲಿಕೆ ನಿರ್ಲಕ್ಷಿಸಿತ್ತು. ಅದಕ್ಕಾಗಿ ಮೂರನೇ ಬಾರಿಗೆ ಬಾಲಕನ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಕೋವಿಡ್ ಹಗರಣಕ್ಕೆ ತಾರ್ಕಿಕ ಅಂತ್ಯ ಅಗತ್ಯ: ಸಚಿವ ಪ್ರಿಯಾಂಕ್
Covid Scam: ರಾಜಕೀಯ ದುರುದ್ದೇಶದಿಂದ ಬಿಎಸ್‌ವೈ, ಶ್ರೀರಾಮುಲು ವಿರುದ್ಧ ಪ್ರಕರಣ: ಎಚ್‌ಡಿಕೆ
Manipur: ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಹ*ತ್ಯೆ
Covid Scam: ನ್ಯಾ.ಮೈಕೆಲ್ ಡಿ ಕುನ್ಹಾ ಸಮಿತಿ ವರದಿ ಆಧರಿಸಿ ಸರಕಾರದಿಂದ ಕ್ರಮ: ಸಿದ್ದರಾಮಯ್ಯ
Davanagere:ಪ್ರತಿಷ್ಠಿತ ಬಡಾವಣೆಯ ಪಹಣಿಯಲ್ಲಿಯೂ ವಕ್ಫ್ ಹೆಸರು!
MUST WATCH
ಹೊಸ ಸೇರ್ಪಡೆ
Udupi: ಮಹಾಲಕ್ಷ್ಮೀ ಕೋ-ಆಪ್ ಬ್ಯಾಂಕ್ ಆರ್‌ಬಿಐ ನಿಯಮದಂತೆ ನಡೆಯುತ್ತಿದೆ: ಶಾಸಕ ಯಶ್‌ಪಾಲ್
Elephant: ಕಡಬದ ಐನೆಕಿದು, ಸುಳ್ಯದ ಉಬರಡ್ಕ ಮಿತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ
MAHE Convocation: ಕ್ಲಿಕ್ ಮಾಡುವ ಮೊದಲೇ ಯೋಚಿಸಿ: ಡಾ.ಇಂದ್ರಜಿತ್ ಭಟ್ಟಾಚಾರ್ಯ ಸಲಹೆ
Rahul Gandhi ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ: ಅಮಿತ್ ಶಾ
GST; ಬಡವರನ್ನು ಕೊ*ಲ್ಲಲು ಮೋದಿಯ ಅಸ್ತ್ರ: ರಾಗಾ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.