ಡೆಲ್ಲಿಗೆ ಪ್ಲೇ-ಆಫ್ ಶ್ರೇಯಸ್; ಮುಂಬೈಗೆ 4 ವಿಕೆಟ್ ಸೋಲು; ಮುಂದಿನ ಹಾದಿ ಕಠಿಣ
Team Udayavani, Oct 2, 2021, 8:55 PM IST
ಶಾರ್ಜಾ: ಶ್ರೇಯಸ್ ಅಯ್ಯರ್ ಮತ್ತು ಆರ್.ಅಶ್ವಿನ್ ಅವರ ಅಜೇಯ ಜತೆಯಾಟದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್ 2021ನೇ ಐಪಿಎಲ್ ಪಂದ್ಯಾವಳಿಯ ಪ್ಲೇ ಆಫ್ ಸುತ್ತು ಪ್ರವೇಶಿಸಿದೆ. 12 ಪಂದ್ಯಗಳಲ್ಲಿ 7ನೇ ಸೋಲನುಭವಿಸಿದ ಹಾಲಿ ಚಾಂಪಿಯನ್ ಮುಂಬೈ ತಂಡದ ಮುಂದಿನ ಹಾದಿ ಕಠಿಣಗೊಂಡಿದೆ.
ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 8 ವಿಕೆಟಿಗೆ 129 ರನ್ ಗಳಿಸಿದರೆ, ಡೆಲ್ಲಿ 19.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿತು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ 130 ಹಾಗೂ ಇದಕ್ಕೂ ಕಡಿಮೆ ಮೊತ್ತದ ಚೇಸಿಂಗ್ ವೇಳೆ ಡೆಲ್ಲಿ ಗೆಲುವಿನ ದಾಖಲೆಯನ್ನು ಕಾಯ್ದುಕೊಂಡಂತಾಯಿತು.
ಚೇಸಿಂಗ್ ಹಾದಿಯಲ್ಲಿ 93ಕ್ಕೆ 6 ವಿಕೆಟ್ ಬಿದ್ದಾಗ ಡೆಲ್ಲಿಗೆ ಆತಂಕ ಎದುರಾಗಿತ್ತು. ಆದರೆ ಅಯ್ಯರ್-ಅಶ್ವಿನ್ 36 ಎಸೆತಗಳಿಂದ 39 ರನ್ ಒಟ್ಟುಗೂಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಯ್ಯರ್ 33 ಎಸೆತಗಳಿಂದ 33 ರನ್ (2 ಬೌಂಡರಿ), ಅಶ್ವಿನ್ 21 ಎಸೆತಗಳಿಂದ 20 ರನ್ ಮಾಡಿ ಅಜೇಯರಾಗಿ ಉಳಿದರು. ಕೃನಾಲ್ ಪಾಂಡ್ಯ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ತಂಡದ ಗೆಲುವನ್ನು ಸಾರಿದರು.
ಶಾ, ಧವನ್, ಸ್ಮಿತ್ ಅವರ ವಿಕೆಟ್ 30 ರನ್ನಿಗೆ ಬಿದ್ದಾಗ ಮುಂಬೈ ತಿರುಗಿ ಬೀಳುವ ಎಲ್ಲ ಸೂಚನೆ ನೀಡಿತ್ತು. ಆಗ ನಾಯಕ ಪಂತ್ (26) ಡೆಲ್ಲಿ ನೆರವಿಗೆ ನಿಂತರು.
ಆವೇಶ್, ಅಕ್ಷರ್ ಆವೇಶ:
ಆವೇಶ್ ಖಾನ್, ಅಕ್ಷರ್ ಪಟೇಲ್ ಮತ್ತು ಅನ್ರಿಚ್ ನೋರ್ಜೆ ಸೇರಿಕೊಂಡು ಮುಂಬೈ ಮೇಲೆರಗಿದರು. ಖಾನ್ ಮತ್ತು ಪಟೇಲ್ ತಲಾ 3 ವಿಕೆಟ್ ಉಡಾಯಿಸಿದರು. ವಿಶ್ವದ ಅತಿ ವೇಗದ ಬೌಲರ್ ನೋರ್ಜೆ ವಿಕೆಟ್ ಮೇಡನ್ ಮೂಲಕ ಮ್ಯಾಜಿಕ್ ಮಾಡಿದರು. ಶಾರ್ಜಾದಲ್ಲಿ ರನ್ ಹರಿದು ಬರುವುದು ನಿಂತಿದೆ ಎಂಬುದು ಮತ್ತೂಮ್ಮೆ ಸಾಬೀತಾಯಿತು.
ಆವೇಶ್ ಖಾನ್ ತಮ್ಮ ಮೊದಲ ಓವರ್‌ನಲ್ಲೇ ರೋಹಿತ್ ಶರ್ಮ (7) ವಿಕೆಟ್ ಉಡಾಯಿಸಿದರು. ಬಳಿಕ ಅಕ್ಷರ್ ಪಟೇಲ್ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿ ಡಿ ಕಾಕ್ (19), ಸೂರ್ಯಕುಮಾರ್ (33) ಮತ್ತು ಸೌರಭ್ ತಿವಾರಿ (15) ಅವರಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪವರ್ ಪ್ಲೇ ಮುಗಿದ ಕೂಡಲೇ ಚೆಂಡನ್ನು ಕೈಗೆತ್ತಿಕೊಂಡ ಪಟೇಲ್, ದ್ವಿತೀಯ ಎಸೆತದಲ್ಲೇ ಡಿ ಕಾಕ್ ವಿಕೆಟ್ ಹಾರಿಸಿದರು.
ಮಧ್ಯಪ್ರದೇಶದ ಆವೇಶ್ ಖಾನ್ ಮೊದಲೆರಡು ಓವರ್‌ಗಳಲ್ಲಿ ಬಿಟ್ಟುಕೊಟ್ಟದ್ದು ಕೇವಲ 7 ರನ್. ಇದರಲ್ಲಿ 8 ಡಾಟ್ ಬಾಲ್‌ಗಳಾಗಿದ್ದವು. ಡೆತ್ ಓವರ್‌ನಲ್ಲೂ ಆವೇಶ್ ದಾಳಿ ಅತ್ಯಂತ ಹರಿತವಾಗಿತ್ತು. ಹಾರ್ದಿಕ್ ಪಾಂಡ್ಯ (17) ಮತ್ತು ಕೋಲ್ಟರ್ ನೈಲ್ (1) ಆಟ ಮುಗಿಸಿದರು.
ಈವರೆಗೆ ಸಿಡಿಯುವಲ್ಲಿ ವಿಫಲರಾದ ಸೂರ್ಯಕುಮಾರ್ ಯಾದವ್ 33 ರನ್ ಬಾರಿಸಿ ಮುಂಬೈ ಸರದಿಯ ಟಾಪ್ ಸ್ಕೋರರ್ ಎನಿಸಿದ್ದು ವಿಶೇಷ. 26 ಎಸೆತ ಎದುರಿಸಿದ ಸೂರ್ಯ 2 ಸಿಕ್ಸರ್, 2 ಫೋರ್ ಹೊಡೆದು ಮಿಂಚಿದರು.
ಇದನ್ನೂ ಓದಿ:ಕೋವಿಡ್: ರಾಜ್ಯದಲ್ಲಿಂದು 636 ಹೊಸ ಪ್ರಕರಣ : ನಾಲ್ವರು ಸೋಂಕಿತರ ಸಾವು
ಸ್ಕೋರ್ ಪಟ್ಟಿ
ಮುಂಬೈ ಇಂಡಿಯನ್ಸ್
ರೋಹಿತ್ ಶರ್ಮ ಸಿ ರಬಾಡ ಬಿ ಅವೇಶ್ 7
ಡಿ ಕಾಕ್ ಸಿ ಜೋರ್ಜೆ ಬಿ ಅಕ್ಷರ್ 19
ಸೂರ್ಯಕುಮಾರ್ ಸಿ ರಬಾಡ ಬಿ ಅಕ್ಷರ್ 33
ಸೌರಭ್ ತಿವಾರಿ ಸಿ ಪಂತ್ ಬಿ ಅಕ್ಷರ್ 15
ಕೈರನ್ ಪೊಲಾರ್ಡ್ ಬಿ ನೋರ್ಜೆ 6
ಹಾರ್ದಿಕ್ ಪಾಂಡ್ಯ ಬಿ ಅವೇಶ್ 17
ಕೃಣಾಲ್ ಪಾಂಡ್ಯ ಔಟಾಗದೆ 13
ಕೋಲ್ಟರ್ ನೈಲ್ ಬಿ ಅವೇಶ್ 1
ಜಯಂತ್ ಯಾದವ್ ಸಿ ಸ್ಮಿತ್ ಬಿ ಅಶ್ವಿನ್ 11
ಜಸ್‌ಪ್ರೀತ್ ಬುಮ್ರಾ ಔಟಾಗದೆ 1
ಇತರ 6
ಒಟ್ಟು(8 ವಿಕೆಟಿಗೆ) 129
ವಿಕೆಟ್ ಪತನ; 1-8, 2-37, 3-68, 4-80, 5-87, 6-109, 7-111, 8-122.
ಬೌಲಿಂಗ್;
ಅನ್ರಿಚ್ ನೋರ್ಜೆ 4-1-19-1
ಅವೇಶ್ ಖಾನ್ 4-0-15-3
ಆರ್. ಅಶ್ವಿನ್ 4-0-41-0
ಕಾಗಿಸೊ ರಬಾಡ 4-0-33-0
ಅಕ್ಷರ್ ಪಟೇಲ್ 4-0-21-3
ಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಎಲ್‌ಬಿಡಬ್ಲ್ಯುಬಿ ಕೃಣಾಲ್ 6
ಶಿಖರ್ ಧವನ್ ರನೌಟ್ 8
ಸ್ಟಿವನ್ ಸ್ಮಿತ್ ಬಿ ಕೋಲ್ಟರ್‌ನೆçಲ್
ರಿಷಭ್ ಪಂತ್ ಸಿ ಹಾರ್ದಿಕ್ ಬಿ ಜಯಂತ್ 26
ಶ್ರೇಯಸ್ ಅಯ್ಯರ್ ಔಟಾಗದೆ 33
ಅಕ್ಷರ್ ಪಟೇಲ್ ಎಲ್‌ಬಿಡಬ್ಲ್ಯು ಬಿ ಬೌಲ್ಟ್ 9
ಹೆಟ್‌ಮೈರ್ ಸಿ ರೋಹಿತ್ ಬಿ ಬುಮ್ರಾ 15
ಆರ್. ಅಶ್ವಿನ್ ಔಟಾಗದೆ 20
ಇತರ 6
ಒಟ್ಟು(19.1 ಓವರ್‌ಗಳಲ್ಲಿ 6 ವಿಕೆಟಿಗೆ) 132
ವಿಕೆಟ್ ಪತನ:1-14, 2-15, 3-30, 4-57, 5-77, 6-93.
ಬೌಲಿಂಗ್;
ಟ್ರೆಂಡ್ ಬೌಲ್ಟ್ 4-0-24-1
ಜಯಂತ್ ಯಾದವ್ 4-0-31-1
ಕೃಣಾಲ್ ಪಾಂಡ್ಯ 2.1-0-18-1
ಜಸ್‌ಪ್ರೀತ್ ಬುಮ್ರಾ 4-0-29-1
ನಥನ್ ಕೋಲ್ಟರ್ ನೈಲ್ 4-0-19-1
ಕೈರನ್ ಪೊಲಾರ್ಡ್ 1-0-9-0
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.