ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾಗೆ ಜ್ವರ; ಆಸ್ಪತ್ರೆಗೆ ದಾಖಲು
Team Udayavani, May 8, 2022, 10:49 PM IST
ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಭಾರೀ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು ನೆಗೆಟಿವ್ ಬಂದಿದೆ.
ಶಾ ಅವರು ಡೆಲ್ಲಿ ತಂಡದ ಈ ಹಿಂದಿನ ಪಂದ್ಯದಲ್ಲೂ ಆಡಿಲ್ಲ . ಶಾ ಅವರು ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ.
ಐಸೊಲೇಶನ್ನಲ್ಲಿ ಆಟಗಾರರು
ಈ ಮೊದಲು ತಂಡದ ನೆಟ್ ಬೌಲರ್ ಒಬ್ಬರಿಗೆ ಪಾಸಿಟಿವ್ ಬಂದ ಕಾರಣ ಡೆಲ್ಲಿ ತಂಡದ ಆಟಗಾರರನ್ನು ಐಸೊಲೇಶನ್ನಲ್ಲಿ ಇಡಲಾಗಿತ್ತು. ಬೆಳಗ್ಗೆ ನಡೆಸಲಾದ ಪರೀಕ್ಷೆಯಲ್ಲಿ ಓರ್ವ ನೆಟ್ ಬೌಲರ್ಗೆ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಟಗಾರರನ್ನು ಹೊಟೇಲ್ ರೂಂನಲ್ಲಿ ಇರುವಂತೆ ಕೇಳಿಕೊಳ್ಳಲಾಯಿತು
ಎಂದು ಐಪಿಎಲ್ ಮೂಲಗಳು ಹೇಳಿವೆ.
ಈ ಐಪಿಎಲ್ ವೇಳೆ ಡೆಲ್ಲಿ ತಂಡವು ಎರಡನೇ ಬಾರಿ ಐಸೊಲೇಶನ್ನಲ್ಲಿ ಇರುವಂತಾಗಿದೆ. ಈ ಮೊದಲು ಫ್ರಾಂಚೈಸಿಯ ಆರು ಸದಸ್ಯರಿಗೆ ಪಾಸಿಟಿವ್ ಬಂದ ವೇಳೆ ತಂಡವನ್ನು ಐಸೊಲೇಶನ್ನಲ್ಲಿ ಇಡಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.