ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಖಾಯಂಗೆ ಆಗ್ರಹ- ಅತಿಥಿ ಉಪನ್ಯಾಸಕರಿಂದ ಪೊರಕೆ ಚಳುವಳಿ
ವಿಜಯಪುರ ಡಿ.ಸಿ. ಕಛೇರಿ ಎದುರು ಕಸಗುಡಿಸಿದ ಉಪನ್ಯಾಸಕರು
Team Udayavani, Dec 15, 2023, 5:48 PM IST
ವಿಜಯಪುರ : ಸೇವೆ ಖಾಯಂಗೆ ಆಗ್ರಹಿಸಿ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಹೋರಾಟ ಆರಂಭಿಸಿರುವ ಸರ್ಕಾರಿ ಪದವಿ ಕಾಲೇಜಿನ ಅತಿಥಿ ಉಪನ್ಯಾಸಕರು ಶುಕ್ರವಾರ ನಗರದಲ್ಲಿ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಕಸ ಗೂಡಿಸುವ ಮೂಲಕ ಪೊರಕೆ ಚಳುವಳಿ ನಡೆಸಿದರು.
ಜಿಲ್ಲಾಧಿಕಾರಿ ಕಛೇರಿ ಎದುರು ಕಳೆದ 23 ದಿನಗಳಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿರುವ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು, ಶುಕ್ರವಾರ ತಾವು ಧರಣಿ ನಡೆಸುತ್ತಿರುವ ಸ್ಥಳದಿಂದ ಜಿಲ್ಲಾಧಿಕಾರಿ ಕಛೇರಿ ಆವರಣದ ವರೆಗೆ ಪೊರಕೆ ಹಿಡಿಸು, ಕಸ ಗೂಡಿಸಿ ವಿನೂತನ ಪ್ರತಿಭಟನೆ ನಡೆಸಿದರು.
ಕೇಂದ್ರ-ರಾಜ್ಯ ಸರ್ಕಾರಗಳು ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳು, ಆರೋಗ್ಯ ಇಲಾಖೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಇಲಾಖೆ ಸೇರಿದಂತೆ ಇತರೆ ಬಹುತೇಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅರೆಕಾಲಿಕ ನೌಕರರ ಸೇವೆಯನ್ನು ಖಾಯಂ ಮಾಡಿದ್ದು, ಸ್ವಾಗತಾರ್ಹ ಎಂದರು.
ಆದರೆ ಸ್ನಾತಕೋತ್ತರ, ಪಿಎಚ್‍ಡಿ, ಎಂಫಿಲ್, ನೆಟ್-ಸೆಟ್ ಅಂತೆಲ್ಲ ಹತ್ತಾರು ವರ್ಷ ಸಂಶೋಧನೆ ನಡೆಸಿ ಉನ್ನತ ಶಿಕ್ಷಣ ಪಡೆದು, ಕಳೆದ 2 ದಶಕಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನಮ್ಮ ಸೇವೆಯನ್ನು ಮಾತ್ರ ಖಾಯಂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನಿಷ್ಟ ಸಂಬಳವೂ ನಿಯಮಿತವಾಗಿ ಬಾರದದಿದ್ದರೂ ಹಾಗೂ ಯಾವುದೇ ಸೌಲಭ್ಯಗಳು ಸಿಗದಿದ್ದರೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದೇವೆ. ಸರ್ಕಾರದ ಮಲತಾಯಿ ಧೋರಣೆ ಪರಿಣಾಮ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದರೂ ಅತಿಥಿ ಉಪನ್ಯಾಸಕರು ಆರ್ಥಿಕ ಸಂಕಷ್ಟದಿಂದಾಗಿ ನಿತ್ಯದ ಜೀವನ ನಿರ್ವಹಣೆಗೆ ಪರದಾಡುವ ದುಸ್ಥಿತಿಯಲ್ಲಿದ್ದೇವೆ. ಇಷ್ಟಾದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸೇವೆ ಖಾಯಂ ಮಾಡುವುದು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೂರು ವಾರಗಳಿಂದ ತರಗತಿ ಬಹಿಷ್ಕರಿಸಿ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದೇವೆ. ನಮ್ಮ ಸಮಸ್ಯೆಗೆ ಈ ಬಾರಿ ಶಾಶ್ವತ ಪರಿಹಾರ ಸಿಗದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸರ್ಕಾರದ ನಿರ್ಲಕ್ಷ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಅತಿಥಿ ಉಪನ್ಯಾಸಕರ ಸಂಘದ ಡಾ.ಆನಂದ ಕುಲಕರ್ಣಿ, ಡಾ.ರಾಜು ಚವ್ಹಾಣ, ಡಾ.ಎಸ್.ಐ.ಯಂಭತ್ತನಾಳ, ಡಾ.ರಮೇಶ ಕಡೆಮನೆ, ಡಾ.ಸುರೇಶ ಬಿರಾದಾರ, ಡಾ.ನೀಲಕಂಠ ಹಳ್ಳಿ, ಡಾ.ಖುದ್ದೂಸ್ ಎ. ಪಾಟೀಲ ಡಾ.ಡಿ.ಬಿ.ಕುಲಕರ್ಣಿ, ಡಾ.ಆರ್.ಬಿ.ನಾಗರಡ್ಡಿ. ಡಾ.ತೇಜಸ್ವಿನಿ ಕೊರೆಗೊಳ, ಡಾ. ಅಶೋಕ ಬಿರಾದಾರ, ಡಾ.ರೇಣುಕಾ ಹೆಬ್ಬಾಳ, ಡಾ.ಆರ್.ಜಿ. ಕಟ್ಟಿ, ಡಾ.ಜಯಮ್ಮ ಶೆರಕಿ, ಡಾ.ಸಚಿನ, ಡಾ.ಎನ್.ಡಿ. ಅರುಂಧೆಕರ, ಡಾ.ವಿಕ್ರಮ ಬಿರಾದಾರ, ಶ್ರೀಶೈಲ ಹೆಬ್ಬಿ, ಎ.ಎಂ.ರಾಠೋಡ ಎಸ್.ಎಚ್.ಓಲೇಕಾರ, ಎಂ.ವಿ.ಮಾಳಜಿ, ಪಿ.ಎಂ.ಮಠ, ಆರ್.ಬಿ.ಮುದ್ದೇಬಿಹಾಳ, ಜಿ.ಆರ್.ರಾಠೋಡ, ಶಿವಾನಂದ ಸಿಂಹಾಸನಮಠ, ಶ್ರೀಧರ, ಇರಸೂರ, ಜಗದೀಶ ಮಡಿಕ್ಯಾಳ, ಪರಸಪ್ಪ ದೇವರ, ಕಾಶೀನಾಥ ಜಾಧವ, ಎಸ್.ಎಂ.ಹಡಪದ, ರೂಪಾ ಹೂಗಾರ, ಪ್ರೊ. ರಮೇಶ ಕಡೆಮನಿ, ಗೀತಾ ಬೆಳ್ಳುಂಡಗಿ, ಜಿ.ಕೆ.ಹತ್ತೆನ್ನವ, ಎಸ್.ಬಿ.ಗಗನಮಾಲಿ, ಬಿ.ಐ.ಪಾಟೀಲ, ಎಸ್.ಎ.ಪಾಟೀಲ ಎಸ್.ಎಚ್.ಪೂಜಾರ, ಶರ್ಮಿಳಾ ಶೆಟ್ಟಿ,ಕ ಕೆ.ಜಿ.ಚಾಬೂಕಸವಾರ, ಸಂತೋಷ ಗೊರನಾಳ, ಅಶೋಕ ಬಿರಾದಾರ, ಕೆ.ಎಸ್.ಹಿರೇಮಠ, ಭಾರತಿ ಇನಾಮದಾರ, ಶ್ರೀಕಾಂತ ಸಾಜೀದ ರಿಸಾಲದಾರ, ಮಹಾಲಕ್ಷ್ಮಿ ಪಾಟೀಲ, ದೀಪಶ್ರೀ ಥೋರತ, ಅರವಿಂದ ಪಾಟೀಲ ಸೇರಿದಂತೆ ಇತರರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.