ಬೆಳ್ತಂಗಡಿ: ಮಿನಿವಿಧಾನಸೌಧ ಮುಂಭಾಗವೇ ಡೆಂಗ್ಯೂ ಕೇಂದ್ರ!
Team Udayavani, May 24, 2020, 11:31 AM IST
ಬೆಳ್ತಂಗಡಿ ಮೂರು ಮಾರ್ಗ ಸಮೀಪ ಕೊಳಚೆ ನೀರು ಸಂಗ್ರಹವಾಗಿರುವುದು
ಬೆಳ್ತಂಗಡಿ: ಮಳೆಗಾಲ ಸಮೀಪಿಸುತ್ತಿರುವಂತೆಯೇ ನ.ಪಂ. ಹೃದಯ ಭಾಗದಲ್ಲೇ ಇರುವ ಮಿನಿವಿಧಾನ ಸೌಧ ಮುಂಭಾಗ ತೆರೆದ ಚರಂಡಿಯೊಂದು ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ಕಾಯಿಲೆಗಳ ಕೇಂದ್ರವಾಗುವ ಭೀತಿ ಕಾಣಿಸಿದೆ. ಶಾಸಕರು, ಜಿಲ್ಲಾಧಿಕಾರಿ, ಅಧಿಕಾರಿ ವರ್ಗಗಗಳಿಗೆ ಪ್ರವಾಸಿ ಬಂಗಲೆ, ಪೊಲೀಸ್ ಠಾಣೆ, ಮಿನಿವಿಧಾನ, ಕೋರ್ಟ್‌ಗೆ ತೆರಳಲು ಇದೇ ರಸ್ತೆಯಾಗಿ ಸಾಗಬೇಕಿದ್ದು, ಪ.ಪಂ. ವರ್ಷಂಪ್ರತಿ ದುರಸ್ತಿಗೆ ಹಣ ಮೀಸ ಲಿಟ್ಟಿರೂ ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಕಾಮಗಾರಿಗೆ 2.37 ಲಕ್ಷ ರೂ.
2018 – 19ನೇ ಸಾಲಿನ ಬಜೆಟ್‌ನಲ್ಲಿ 2.37 ಲಕ್ಷ ರೂ. ಮೀಸಲಿರಿಸಿ ಬೆಳ್ತಂಗಡಿ ಪ.ಪಂ. ವ್ಯಾಪ್ತಿಯ ಜೂನಿಯರ್ ಕಾಲೇಜು-ಸುಧೆಮುಗೇರು ರಸ್ತೆ, ಹುಣ್ಸೆಕಟ್ಟೆ ರಸ್ತೆ ಹಾಗೂ ಮೂರು ಮಾರ್ಗದ ಬಳಿ ಮೋರಿ ರಚನೆ ಕಾಮಗಾರಿ ನಡೆದಿತ್ತು. ಆದರೆ ಸುಧೆಮುಗೇರು ಕ್ರಾಸ್ ಹುಡ್ಕೊ ತಿರುವು ಬಳಿ ರಚಿಸಿದ ಮೋರಿ ಕಾಮಗಾರಿಯಿಂದ ಸಮೀಪದ ಮನೆಯಂಗಳಕ್ಕೆ ಚರಂಡಿ ನೀರು ನುಗ್ಗುತ್ತಿದೆ. ಮೂರು ಮಾರ್ಗ ಸಮೀಪದ ಕಾಮಗಾರಿ ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ಇದರಲ್ಲೇ ಮಳೆ ನೀರೂ ಹರಿದು ಹೋಗುತ್ತದೆ. ಸಿಸಿ ಡ್ರೈನೇಜ್ ನೀರನ್ನು ರಾಜಕಾಲುವೆಗೆ ಬಿಡುವ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಇದಕ್ಕೆ ಪರಿಹಾರ ನೀಡುವ ಮುನ್ನವೇ ಮೂರು ಮಾರ್ಗದ ಬಳಿ 3.50 ಲಕ್ಷ ರೂ. ವೆಚ್ಚದಲ್ಲಿ ಡಾಮರೀಕರಣ ಮಾಡಲಾಗಿದ್ದು ಸಮಸ್ಯೆ ಬಿಗಡಾಯಿಸುವ ಲಕ್ಷಣವಿದೆ.
ಬಗೆಹರಿಯದ ಸಮಸ್ಯೆ
ಚರಂಡಿ ಅವ್ಯವಸ್ಥೆ ಬಗ್ಗೆ ಉದಯವಾಣಿ ವರದಿ ಮಾಡಿದ್ದು, ಆಡಳಿತ ಹೂಳು ತೆಗೆದರೂ ಸಮಸ್ಯೆ ಮತ್ತೆ ಸೃಷ್ಟಿಯಾಗಿದೆ. ಕಳೆದ ವರ್ಷ ನ.ಪಂ. ವ್ಯಾಪ್ತಿಯ 11 ವಾರ್ಡ್‌ಗಳ ಚರಂಡಿ ಹೂಳೆತ್ತುವ ಕಾಮಗಾರಿಗೆ 4.90 ಲಕ್ಷ ರೂ. ಹಾಗೂ ರಾ.ಹೆ. ಚರಂಡಿ ದುರಸ್ತಿಗೆ 2.40 ಲಕ್ಷ ರೂ. ಮೀಸಲಿಡಲಾಗಿತ್ತು. ಆದರೆ ಹೆದ್ದಾರಿ ಸಮೀಪದ ಚರಂಡಿ ಹೂಳಿನಿಂದಾಗಿ ಮಾಯವಾಗಿದೆ. ಆದರೆ ಈ ಕಾಮಗಾರಿ ನಡೆಯದೇ ಬಿಲ್ ಪಾಸ್ ಆಗುತ್ತಿವೆಯೇ ಎಂದು ಸಾರ್ವಜನಿಕರು, ನ.ಪಂ. ಹಿರಿಯ ಸದಸ್ಯರು ಅಸಮಾಧಾನ ಹೊರಹಾಕಿದ್ದಾರೆ.
ಜೂನ್ ಮೊದಲ ವಾರದಿಂದ ಕೆಲಸ
ಕಳೆದ ವರ್ಷ ಮೀಸಲಿಟ್ಟ ಅನು ದಾನದಲ್ಲಿ ಚರಂಡಿ ದುರಸ್ತಿ ಪಡಿಸ ಲಾಗಿದೆ. ಈ ವರ್ಷ ವಾರ್ಡ್ ಗೆ 10 ಸಾವಿರದಂತೆ 11 ವಾರ್ಡ್‌ಗೆ 2.50 ಲಕ್ಷ ರೂ. ಮೀಸಲಿರಿಸಿ ಜೂನ್ ಮೊದಲ ವಾರದಿಂದ ಚರಂಡಿ ಸ್ವಚ್ಛತೆ ನಡೆಸಲಾಗುತ್ತದೆ.
-ಮಹಾವೀರ ಆರಿಗ, ಪ.ಪಂ. ಇಂಜಿನಿಯರ್.
ಮೇ 26: ಸಭೆ
ಮಿನಿ ವಿಧಾನ ಸೌಧ ಮುಂಭಾಗ ಚರಂಡಿ ಸಮಸ್ಯೆ ಕುರಿತು ನನ್ನ ಗಮನಕ್ಕೆ ಬಂದಿದೆ. ಅಗತ್ಯ ಕ್ರಮಕ್ಕೆ ನಿರ್ಧರಿಸಲಾಗಿದೆ. ಮೇ 26ರಂದು ಪೂರ್ವಭಾವಿ ಸಭೆ ಕರೆಯಲಾಗಿದೆ.
-ಗಣಪತಿ ಶಾಸ್ತ್ರಿ, ತಹಶೀಲ್ದಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.