Health: ರಾಜ್ಯದಲ್ಲಿ ಡೆಂಗ್ಯೂ ಜ್ವರ ಜೋರು- ವಿವಿಧ ಭಾಗಗಳಲ್ಲಿ 15 ಸಾವಿರ ದಾಟಿದ ಪ್ರಕರಣ
ಕಳೆದ ತಿಂಗಳು ಇಳಿಕೆಯಾಗಿದ್ದರೂ ಈಗ ಏರಿಕೆ
Team Udayavani, Dec 11, 2023, 12:31 AM IST
ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿದೆ. ಇದು ವರೆಗೆ ಪಾಸಿಟಿವ್ ಸಂಖ್ಯೆ 15 ಸಾವಿರದ ಗಡಿ ದಾಟಿದ್ದು, 9 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.
ಈ ಬಾರಿಯೂ ಜುಲೈ, ಸೆಪ್ಟಂಬರ್‌ನಲ್ಲಿ ಡೆಂಗ್ಯೂ ಹೆಚ್ಚಾಗಿ ವರದಿಯಾಗಿದೆ. ಅಕ್ಟೋಬರ್, ನವೆಂಬರ್‌ನಲ್ಲಿ ತುಸು ಇಳಿಕೆಯಾಗಿದ್ದರೂ ಆ ಬಳಿಕ ಮತ್ತೆ ಏರಿಕೆ ಕಂಡಿರುವುದು ಆತಂಕ ಮೂಡಿಸಿದೆ.
ರಾಜ್ಯದಲ್ಲಿ ಒಟ್ಟು 15,089 ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ. ಇದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಹಾಗೂ ಕೊಡಗು, ಹಾಸನ, ತುಮಕೂರು ವ್ಯಾಪ್ತಿಯಲ್ಲಿ ತಲಾ ಒಬ್ಬರು, ಉಡುಪಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 2021ರಲ್ಲಿ 6,300 ಪ್ರಕರಣ ದಾಖಲಾಗಿದ್ದು, ಐವರು ಮೃತಪಟ್ಟಿದ್ದರು. 2022ರಲ್ಲಿ 8,500 ಪ್ರಕರಣ ಪಾಸಿಟಿವ್ ಇದ್ದು, 9 ಮಂದಿ ಸಾವಿಗೀಡಾಗಿದ್ದರು.
ಡೆಂಗ್ಯೂ ಹೆಚ್ಚಳಕ್ಕೆ ಕಾರಣವೇನು?
ಬಿಟ್ಟು ಬಿಟ್ಟು ಮಳೆ, ಹೊಸ ಕಟ್ಟಡ ನಿರ್ಮಾಣ, ರಸ್ತೆಗಳಲ್ಲಿ ಹೊಂಡ ಗುಂಡಿ ಮುಖ್ಯ ಕಾರಣ ಎನ್ನಲಾಗುತ್ತಿದೆ. ಕಟ್ಟಡ ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲುತ್ತಿದೆ. ಎಲ್ಲೆಂದರಲ್ಲಿ ಕಾಂಕ್ರೀಟ್ ರಸ್ತೆಗಳು ನಿರ್ಮಾಣವಾಗುತ್ತಿದ್ದು, ಇದರಿಂದಾಗಿ ನೀರು ಇಂಗಲು ಅವಕಾಶವೇ ಇಲ್ಲವಾಗಿದೆ. ರಸ್ತೆ ಗುಂಡಿಯಲ್ಲಿ ನಿಂತ ನೀರಿನಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ ಎನ್ನುವ ಅಭಿಪ್ರಾಯ ಆರೋಗ್ಯ ತಜ್ಞರದು.
ಸಿವಿಕ್ ಬೈಲಾಕ್ಕಿಲ್ಲ ಮನ್ನಣೆ
ರಾಜ್ಯದ ಪ್ರತಿಯೊಂದು ಸ್ಥಳೀಯಾಡಳಿತದಲ್ಲಿ ಸಾಂಕ್ರಾಮಿಕ ರೋಗಗಳ ತಡೆಗೆ ಸಿವಿಕ್ ಬೈಲಾ ಅಳವಡಿಸಿದರೆ ಡೆಂಗ್ಯೂ ಹಾಗೂ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಬಹುದು. ಕಡ್ಡಾಯವಾಗಿ ಈ ಬೈಲಾ ಆಳವಡಿಕೆಯಾದರೆ ಮನೆ, ವಾಣಿಜ್ಯ ಕಟ್ಟಡ ಆವರಣ, ಕಟ್ಟಡಗಳ ನಿರ್ಮಾಣ ಸ್ಥಳಗಳಲ್ಲಿ ಸೊಳ್ಳೆ ಉತ್ಪತ್ತಿಗೆ ಕಾರಣವಾಗುವ ಅಂಶಗಳು ಕಂಡುಬಂದರೆ ಮಾಲಕರಿಗೆ ಎಚ್ಚರಿಕೆಯ ಜತೆಗೆ ಸ್ಥಳದಲ್ಲಿಯೇ ಭಾರೀ ದಂಡ ವಿಧಿಸಬಹುದಾಗಿದೆ. ಇದರಿಂದ ಡೆಂಗ್ಯೂ ನಿಯಂತ್ರಿಸಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು
ಭಾರೀ ಏರಿಕೆಯಾಗುತ್ತಿವೆ. ಕೇವಲ ಆರೋಗ್ಯ ಇಲಾಖೆಯಿಂದ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಾರ್ವಜನಿಕರೂ ಸಹಕಾರ ನೀಡಬೇಕು.
– ಡಾ| ಸುದರ್ಶನ ಬಲ್ಲಾಳ್, ಮಣಿಪಾಲ ಆಸ್ಪತ್ರೆ ಅಧ್ಯಕ್ಷ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Mandya; ಸಕ್ಕರೆ ನಾಡಿನಲ್ಲಿ ಇಂದಿನಿಂದ 87ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ
Dinesh Gundu Rao; ಬಾಣಂತಿಯರ ಸಾ*ವು ಪ್ರಕರಣ ನ್ಯಾಯಾಂಗ ತನಿಖೆಗೆ
ರಾತ್ರಿಯಿಡೀ ಸಿ.ಟಿ. ರವಿಯನ್ನು ಸುತ್ತಾಡಿಸಿದ ಪೊಲೀಸರು: ಮಧ್ಯರಾತ್ರಿ ರಸ್ತೆಯಲ್ಲೇ ಪ್ರತಿಭಟನೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pharma Company ಮೂಲಕ 4500 ಕೋಟಿ ಅಕ್ರಮ: ಇ.ಡಿ.
Mumbai ದೋಣಿ ದುರಂತ: ಮತ್ತೂಂದು ಮೃತದೇಹ ಪತ್ತೆ
ಮಂಗಳೂರು ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಸ್ಟೇಟಸ್ ಮಾನ್ಯತೆ ನೀಡಿ: ಕ್ಯಾ.ಚೌಟ ಮನವಿ
Missile Development: ಕ್ಷಿಪಣಿ ನಿರ್ಮಾಣ ಆರೋಪ: ಪಾಕ್‌ಗೆ ಅಮೆರಿಕ ನಿರ್ಬಂಧ
Coconut Oil Controversy: 20 ವರ್ಷಗಳ ಕೊಬ್ಬರಿ ಎಣ್ಣೆ ವಿವಾದಕ್ಕೆ ಸುಪ್ರೀಂ ಬ್ರೇಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.