ಕೋವಿಡ್ -19 ಜತೆಗೆ ಡೆಂಗ್ಯೂ, ಮಲೇರಿಯಾ ಭೀತಿ!
ಅವಿಭಜಿತ ಪುತ್ತೂರು ತಾಲೂಕಿನಲ್ಲಿ 86 ಶಂಕಿತ ಡೆಂಗ್ಯೂ
Team Udayavani, May 11, 2020, 6:17 AM IST
ಸಾಂದರ್ಭಿಕ ಚಿತ್ರ.
ವಿಶೇಷ ವರದಿ – ಪುತ್ತೂರು: ಕೋವಿಡ್ -19 ಸೋಂಕು ವ್ಯಾಪಕವಾಗಿರುವ ಜತೆಗೆ ಇದೀಗ ಡೆಂಗ್ಯೂ, ಮಲೇರಿಯಾ ಜ್ವರದ ಭಯವೂ ಆರಂಭಗೊಂಡಿದೆ. ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿಯೇ ಪ್ರಥಮವಾಗಿ ಪುತ್ತೂರು ತಾಲೂಕಿನಲ್ಲಿ ಶಂಕಿತ ಡೆಂಗ್ಯೂ, ಮಲೇರಿಯಾ ಆತಂಕ ಉಂಟು ಮಾಡಿದೆ.
ಕಳೆದ ವರ್ಷ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪುತ್ತೂರು ತಾಲೂಕಿಗೆ ಸೇರಿದ್ದ ಕಡಬದಿಂದ ವರದಿಯಾಗಿತ್ತು. ಈ ಬಾರಿಯೂ ಪುತ್ತೂರು ತಾಲೂಕಿನ ಬೆಟ್ಟಂಪಾಡಿ, ಬಲ್ನಾಡು ಗ್ರಾಮಗಳಲ್ಲಿ ಡೆಂಗ್ಯೂ ಲಕ್ಷಣ ಹೊಂದಿರುವ ಜ್ವರ ಕಾಣಿಸಿಕೊಂಡಿದೆ. 2 ಪ್ರಕರಣಗಳು ಡೆಂಗ್ಯೂ ಎಂದು ದಾಖಲಾಗಿದೆ. 2 ಗ್ರಾಮಗಳ 33 ಮಂದಿಗೆ ಶಂಕಿತ ಡೆಂಗ್ಯೂ ಕಾಣಿಸಿಕೊಂಡಿದೆ. ಕಳೆದ ವರ್ಷ ಶಂಕಿತ ಡೆಂಗ್ಯೂನಿಂದ 12 ಮಂದಿ ಮೃತಪಟ್ಟಿದ್ದರು. 4 ಮಂದಿ ಅಧಿಕೃತವಾಗಿ ಡೆಂಗ್ಯೂ ಜ್ವರದಿಂದ ಸಾವಿಗೀಡಾಗಿದ್ದರು. ದ.ಕ. ಜಿಲ್ಲೆಯಲ್ಲೇ 2,797 ಮಲೇರಿಯಾ, ಡೆಂಗ್ಯೂ ಜ್ವರ ಕಂಡುಬಂದು ರಾಜ್ಯದಲ್ಲಿ 2ನೇ ಸ್ಥಾನ ಜಿಲ್ಲೆಯದ್ದಾಗಿತ್ತು.
86 ಶಂಕಿತ ಪ್ರಕರಣ
ಅವಿಭಜಿತ ಪುತ್ತೂರು ತಾಲೂಕಿನಲ್ಲಿ ಒಟ್ಟು 86 ಶಂಕಿತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಪಾಣಾಜೆ ಗ್ರಾಮದಲ್ಲಿ 34, ತಿಂಗಳಾಡಿಯಲ್ಲಿ 17, ಬೆಟ್ಟಂಪಾಡಿ ಗ್ರಾಮ ದಲ್ಲಿ 18, ಬಲ್ನಾಡಿನಲ್ಲಿ 9, ಕೊಯಿಲದಲ್ಲಿ 8 ಸಹಿತ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಕಳೆದ ಜನವರಿಯಿಂದ ಮಾರ್ಚ್ ತನಕ ತಾಲೂಕಿನ ಬೆಟ್ಟಂಪಾಡಿ, ಉಪ್ಪಿನಂಗಡಿ, ಈಶ್ವರಮಂಗಲದಲ್ಲಿ 3 ಅಧಿಕೃತ ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆ
ನೆಲ್ಯಾಡಿ, ಕಡಬ ಸಹಿತ ವಿವಿಧ ಗ್ರಾಮಗಳಲ್ಲಿಯೂ ಕೆಲವೊಂದು ಶಂಕಿತ ಡೆಂಗ್ಯೂ ಲಕ್ಷಣ ಹೊಂದಿರುವ ಜ್ವರ, ಮಲೇರಿಯಾ ಜನತೆಯನ್ನು ಕಾಡುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಕಾರಣಕ್ಕಾಗಿ ಬಹಳಷ್ಟು ಮಂದಿ ದಾಖಲಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಡೆಂಗ್ಯೂ-ಮಲೇರಿಯಾ ಪ್ರಕರಣ ಕಡಿಮೆ. ಆದರೂ ಪಾಣಾಜೆ, ಬೆಟ್ಟಂಪಾಡಿ, ಬಲ್ನಾಡು ಭಾಗದಲ್ಲಿ ಪ್ರಸ್ತುತ ಕಂಡುಬಂದಿರುವ ಶಂಕಿತ ಪ್ರಕರಣಗಳು ಅಪಾಯದ ಮುನ್ಸೂಚನೆ ನೀಡಿವೆ.
ಇತ್ತೀಚೆಗೆ ಈ ಪರಿಸರದಲ್ಲಿ ಮಳೆಯಾಗುತ್ತಿರುವುದು ಸೊಳ್ಳೆ ಉತ್ಪಾದನೆಗೆ ಪೂರಕ ವಾತಾವರಣ ಲಭಿಸಿದಂತಾಗಿದ್ದು, ಇಂತಹ ರೋಗ ಪಸರಿಸಲು ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಶಂಕಿತ ಡೆಂಗ್ಯೂ ಹೆಚ್ಚಳ
ಸುಮಾರು 20 ದಿನಗಳಿಂದ ಪುತ್ತೂರು ತಾಲೂಕಿನ ಕೆಲವು ಭಾಗಗಳಲ್ಲಿ ಶಂಕಿತ ಡೆಂಗ್ಯೂ ಹಾಗೂ ಮಲೇರಿಯಾ ಜ್ವರ ಕಂಡುಬರುತ್ತಿದೆ. ಬೆಟ್ಟಂಪಾಡಿ, ಬಲ್ನಾಡು ಗ್ರಾಮದಲ್ಲಿ ಈ ಜ್ವರ ಹೆಚ್ಚಾಗಿದೆ. ಈ ಕುರಿತು ಜನತೆಗೆ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ.
-ಡಾ| ನವೀನ್‌ಚಂದ್ರ ಕುಲಾಲ್,
ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.