ಅಗತ್ಯವಿದ್ದರೆ ಮಾತ್ರ ಪ್ರವಾಸ ಮಾಡಿ: ಡೆನ್ಮಾರ್ಕ್ ಸರಕಾರ
Team Udayavani, Jun 29, 2020, 3:35 PM IST
ಡೆನ್ಮಾರ್ಕ್: ಬೇರೆ ಕಡೆಗೆ ಹೋಗಬೇಕೆಂದರೆ ಎಲ್ಲಿಗೆ ಹೋಗಬಹುದು ಎಂದು ಕೇಳುತ್ತಿದ್ದ ಡ್ಯಾನಿಶ್ ಪ್ರಜೆಗಳಿಗೆ ಸರಕಾರ ಉತ್ತರಿಸಿದೆ. ಯುಕೆ, ಐರ್ಲೆಂಡ್, ಮಾಲ್ಟಾ, ಪೋರ್ಚುಗಲ್, ರೊಮೇನಿಯಾ, ಹಾಗೂ ಸ್ವೀಡನ್‌ನ ವೆಸ್ಟರ್‌ಬೊಟ್ಟನ್ ಪ್ರದೇಶವನ್ನು ಹೊರತು ಪಡಿಸಿ ದೇಶದ ಇತರೆ ಎಲ್ಲ ಭಾಗಗಳಿಗೆ ಪ್ರಯಾಣ ಕೈಗೊಳ್ಳಬಹುದು ಎಂದು ಡೆನ್ಮಾರ್ಕ್ ಸರಕಾರ ತಿಳಿಸಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಸಂಬಂಧಪಟ್ಟಂತೆ ಡೆನ್ಮಾರ್ಕ್ ಹೊಸ ಮಾರ್ಗಸೂಚಿಗಳನ್ನು ರೂಪಿಸಿದೆ. ಈ ಹಿನ್ನಲೆಯಲ್ಲಿ ಅತ್ಯಗತ್ಯ ಮತ್ತು ಅನಿವಾರ್ಯ ಕೆಲಸವಿದ್ದರೆ ಮಾತ್ರ ಮುನ್ನಚ್ಚೆರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸರಕಾರ ಸೂಚಿಸಿದ ದೇಶಗಳಿಗೆ ಪ್ರಯಾಣ ಕೈಗೊಳ್ಳಬಹುದು ಎಂದು ಸರಕಾರ ತಿಳಿಸಿದೆ. ಆದರೆ ಆ ದೇಶಗಳಿಂದ ಡೆನ್ಮಾರ್ಕ್‌ಗೆ ಬರುವ ಪ್ರಯಾಣಿಕರ ಮೇಲೆ ನಿರ್ಬಂಧ ಹೇರಿದ್ದು, ಡ್ಯಾನಿಶ್ ನಿವಾಸಿಗಳು ಮಾತ್ರ ನಿರ್ದಿಷ್ಟ ದೇಶಗಳಿಗೆ ತೆರಳಿ ಹಿಂದಿರುಗಿ ಬರಬಹುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಇಯು ಪ್ರಜೆಗಳಿಗೆ ಗ್ರೀನ್ ಸಿಗ್ನಲ್
ಕೆಲ ರಾಷ್ಟ್ರಗಳಿಗೆ ತನ್ನ ನಿವಾಸಿಗಳಿಗೆ ಪ್ರಯಾಣ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿರುವ ಡೆನ್ಮಾರ್ಕ್ ಇಯು ಐರೋಪ್ಯ ಒಕ್ಕೂಟದ ದೇಶಗಳಿಗೆ ಮಾತ್ರ ತನ್ನ ರಾಷ್ಟ್ರದ ಗಡಿ ಬಾಗಿಲನ್ನು ತೆರೆದಿದೆ. ಯಾವುದೇ ಕ್ವಾರಂಟೈನ್ ನಿಬಂಧನೆ ಮತ್ತು ಸಂಚಾರ ನಿಯಮಗಳಿಲ್ಲದೇ ಮುಕ್ತವಾಗಿ ಡೆನ್ಮಾರ್ಕ್ ದೇಶಿಗರು ಅಲ್ಲಿಗೆ ಭೇಟಿ ನೀಡಬಹುದಾಗಿದ್ದು, ಅಲ್ಲಿಯವರೂ ಡೆನ್ಮಾರ್ಕ್‌ಗೆ ಯಾವುದೇ ಭೀತಿ ಇಲ್ಲದೇ ಬರಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.
ನಾವು ಸುರಕ್ಷಿತವಾಗಿದ್ದೇವೆ ಎಂಬ ನಂಬಿಕೆ
ಸರಕಾರ ಘೋಷಿಸಿರುವ ಈ ನಿರ್ಧಾರದ ಕುರಿತು ಡೆನ್ಮಾರ್ಕ್ ವಿದೇಶಾಂಗ ಸಚಿವ ಜೆಪ್ಪೆ ಕೊಫೊಡ್ ತಮ್ಮ ಅಭಿಪ್ರಾಯ ಹೊರ ಹಾಕಿದ್ದು, ಡೆನ್ಮಾರ್ಕ್ ಮತ್ತು ಯುರೋಪ್ ಸುರಕ್ಷಿತ ಘಟ್ಟದಲ್ಲಿದ್ದೇವೆ ಎಂಬ ನಂಬಿಕೆಯೇ ಫಲಿತಾಂಶವೇ ಈ ಸಡಿಲಿಕೆ. ಆದರೆ ಸಂಪೂರ್ಣವಾಗಿ ಸೋಂಕು ನಿವಾರಣೆಯಾಗದ ಕಾರಣ ಮುಂದಿನ ದಿನಗಳಲ್ಲಿಯೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವಂತೆ ಜನರಿಗೆ ತಿಳಿಸಿದ್ದು, ವಿಶ್ವದ ಕೆಲ ದೇಶಗಳಲ್ಲಿ ಹೊಸ ಸೋಂಕು ಪ್ರಕರಣಗಳು ದಾಖಲಾಗುತ್ತಲೇ ಇದೆ. ಹಾಗಾಗಿ ಪ್ರಯಾಣಿಕರು ಹೆಚ್ಚಿನ ಜಾಗರೂಕತೆ ವಹಿಸಬೇಕು. ಸಾಮಾಜಿಕ ಅಂತರ ಕಾಪಾಡಬೇಕು, ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
Bangla:ಬಂಧನಕ್ಕೊಳಗಾದ ಇಸ್ಕಾನ್ ನ ಕೃಷ್ಣದಾಸ್ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.