ಸಾರಿಗೆ ಇಲಾಖೆಯ 30 ಸೇವೆ ಆನ್‌ಲೈನ್; ದಕ್ಷಿಣ ಕನ್ನಡ, ಉಡುಪಿಯಲ್ಲಿ ಆರಂಭ
Team Udayavani, Dec 13, 2021, 7:00 AM IST
ಸಾಂದರ್ಭಿಕ ಚಿತ್ರ
ಮಂಗಳೂರು/ ಉಡುಪಿ: ಆನ್‌ಲೈನ್‌ನಲ್ಲೇ ಸಾರಿಗೆ ಇಲಾಖೆಯ 30 ಸೇವೆಗಳನ್ನು ಪಡೆಯಲು ಸರಕಾರ ಅವಕಾಶ ಕಲ್ಪಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್‌ಟಿಒ ಕಚೇರಿಗಳಲ್ಲಿ ಈ ಸೌಲಭ್ಯ ಆರಂಭಗೊಂಡಿದೆ.
www.parivahan.gov.inನಲ್ಲಿ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಸೇವೆ ಪಡೆಯಬಹುದು. ಮಂಗಳೂರು, ಬಂಟ್ವಾಳ ಮತ್ತು ಪುತ್ತೂರು, ಉಡುಪಿ ಆರ್‌ಟಿಒ ಕಚೇರಿಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಯಾವ ಸೇವೆಗಳು
ಕಲಿಕಾ ಚಾಲನ ಅನುಜ್ಞಾಪತ್ರ (ಎಲ್‌ಎಲ್‌ಆರ್) ಮತ್ತು ಹೊಸ ವರ್ಗಗಳ ಸೇರ್ಪಡೆ, ಕಲಿಕಾ ಚಾಲನ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ, ಕಲಿಕಾ ಚಾಲನ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ, ನಕಲು ಕಲಿಕಾ ಚಾಲನ ಅನುಜ್ಞಾ ಪತ್ರ, ನಿರ್ವಾಹಕ ಚಾಲನ ಅನುಜ್ಞಾ ಪತ್ರ ಸಹಿತ “ಸಾರಥಿ’ ವಿಭಾಗದ 11 ಸೇವೆಗಳು ಹಾಗೂ ಮಾರಾಟಗಾರರ ಹಂತದಲ್ಲಿ ಹೊಸ ವಾಹನಗಳ ನೋಂದಣಿ, ವಾಹನ ಮಾಲಕತ್ವ ವರ್ಗಾವಣೆ, ನಕಲು ನೋಂದಣಿ ಪ್ರಮಾಣಪತ್ರ, ಮೋಟಾರು ಕ್ಯಾಬ್ ಪರ್ಮಿಟ್ ನೀಡುವಿಕೆ/ ನವೀಕರಣ, ಸರಕು ಸಾಗಣೆ ವಾಹನ ರಹದಾರಿ ನೀಡುವಿಕೆ/ನವೀಕರಣ, ಆಟೋರಿಕ್ಷಾ ಕ್ಯಾಬ್ ಪರ್ಮಿಟ್ ನವೀಕರಣ ಇತ್ಯಾದಿ 19 ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸಲಾಗುತ್ತಿದೆ.
30 ಸೇವೆಗಳು ಆನ್‌ಲೈನ್‌ನಲ್ಲಿಯೇ ದೊರೆಯುತ್ತಿವೆ. ಆನ್‌ಲೈನ್‌ಗೆ ಸಂಬಂಧಿಸಿ ತಾಂತ್ರಿಕ ಸಮಸ್ಯೆ ಉಂಟಾದರೆ ಮಾತ್ರ ಕಚೇರಿಗೆ ತೆರಳಬೇಕಾಗುತ್ತದೆ. ಉಳಿದಂತೆ ಈ 30 ಸೇವೆಗಳಿಗಾಗಿ ಯಾವುದೇ ಹಂತದಲ್ಲಿ ಕಚೇರಿಗೆ ತೆರಳುವ ಅಗತ್ಯವಿಲ್ಲ. ದ.ಕ. ಜಿಲ್ಲೆಯಲ್ಲಿ ಈಗಾಗಲೇ ಈ ಸೇವೆಗಳನ್ನು ಆರಂಭಿಸಲಾಗಿದ್ದು, ಕೆಲವರಿಗೆ ತಾಂತ್ರಿಕವಾಗಿ ಕೆಲವು ಸಂಶಯ ಉಂಟಾಗಿ ಗೊಂದಲವಾಗಿದೆ. ಮುಂದಿನ ದಿನಗಳಲ್ಲಿ ಇದು ಸರಿಯಾಗಲಿದೆ.
– ಆರ್. ಎಂ. ವರ್ಣೇಕರ್,
ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಂಗಳೂರು
ಹೈ ಕೋರ್ಟ್ ಸೂಚನೆ ಮೇರೆಗೆ ಉಡುಪಿ ಜಿಲ್ಲೆಯಲ್ಲಿಯೂ ಆನ್‌ಲೈನ್ ಸೇವೆ ಆರಂಭವಾಗಿದೆ. ಆದರೆ ಕೆಲವು ತಾಂತ್ರಿಕ ತೊಂದರೆಗಳು ಇರುವುದರಿಂದ ಶತ ಪ್ರತಿಶತ ಆರಂಭಗೊಂಡಿಲ್ಲ.
-ಗಂಗಾಧರ್,ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.