ಇನ್ನು ಸರಹದ್ದು ಕಾಯಲಿದೆ ದೇಸಿ ಡ್ರೋನ್!
ಮೊದಲ ಸ್ವದೇಶಿ ನಿರ್ಮಿತ ಡ್ರೋನ್ ಮುಂದಿನ ವಾರ ಅನಾವರಣ
Team Udayavani, Feb 11, 2023, 7:40 AM IST
ನವದೆಹಲಿ: ಗಡಿ ಭದ್ರತೆಯಲ್ಲಿ ಡ್ರೋನ್‌ಗಳ ನಿಯೋಜನೆ ಕಾರ್ಯ ಭರದಿಂದ ಸಾಗುತ್ತಿರುವ ನಡುವೆಯೇ, ಕಣ್ಗಾವಲು ಹಾಗೂ ವಿಚಕ್ಷಣಾ ಕಾರ್ಯಾಚರಣೆಗಳಿಗಾಗಿ ದೇಶಿಯವಾಗಿ ಅಭಿವೃದ್ಧಿ ಪಡಿಸಿರುವ ಮೊಟ್ಟ ಮೊದಲ ಡ್ರೋನ್ ಮುಂದಿನ ವಾರ ಲೋಕಾರ್ಪಣೆಗೊಳ್ಳಲು ಸಜ್ಜಾಗಿದೆ.
ಅಂತಾರಾಷ್ಟ್ರೀಯ ಗಡಿಗಳ ಮೇಲಿನ ಕಣ್ಗಾವಲು ಹೆಚ್ಚಿಸಲು ಹಾಗೂ ಭದ್ರತೆ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ತಂತ್ರಜ್ಞಾನದ ಯಶಸ್ವಿ ಬಳಕೆಗೆ ಭಾರತ ಮುಂದಾಗಿದೆ. ಇದರ ಭಾಗವಾಗಿಯೇ, ಸುಧಾರಿತ “ತಪಸ್-ಬಿಎಚ್’ ಡ್ರೋನ್ ಅನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ.
ಬೆಂಗಳೂರಿನಲ್ಲಿ ಪ್ರದರ್ಶನ:
ಈ ಡ್ರೋನ್ ಈಗಾಗಲೇ 180 ಬಾರಿ ಹಾರಾಟ ನಡೆಸಿದ್ದು, ಬೆಂಗಳೂರಿನಲ್ಲಿ ಸದ್ಯದಲ್ಲೇ ನಡೆಯಲಿರುವ ಏರೋ -ಇಂಡಿಯಾ ಶೋದಲ್ಲಿ ವಿವಿಧ ವಿಮಾನಗಳ ವೈಮಾನಿಕ ಮತ್ತು ಸ್ಥಿರ ಮಾಹಿತಿಯನ್ನು ನೇರ ಪ್ರಸಾರದ ಮೂಲಕ ನೀಡಲಿದೆ. 28 ಸಾವಿರ ಅಡಿ ಎತ್ತರದವರೆಗೆ ಸುಮಾರು 18 ಗಂಟೆಗಳ ಕಾಲ ದೀರ್ಘ ಹಾರಾಟ ಸೇರಿದಂತೆ ತನ್ನೆಲ್ಲ ಸಾಮರ್ಥ್ಯವನ್ನೂ ಅದು ಪ್ರದರ್ಶಿಸಲಿದೆ.
ತಪಸ್-ಬಿಎಚ್ ಡ್ರೋನ್ ಅನ್ನು ಈ ಹಿಂದೆ “ರುಸ್ತುಂ-2′ ಎಂದು ಕರೆಯಲಾಗುತ್ತಿತ್ತು. ರಾತ್ರಿ ಹೊತ್ತು ಕಾರ್ಯಾಚರಣೆ ಮಾಡುವ ಸಾಮರ್ಥ್ಯವೂ ಇದಕ್ಕಿದ್ದು, ಮೊದಲಿಗೆ ಸಶಸ್ತ್ರ ಪಡೆಗಳು ಈ ಡ್ರೋನ್‌ಗಳನ್ನು ಪ್ರಾಯೋಗಿಕವಾಗಿ ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಿವೆ. ನಂತರದಲ್ಲಿ, ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಭಾರತ್ ಎಲೆಕ್ಟ್ರಾನಿಕ್ಸ್ ಸೇರಿದಂತೆ ವಿವಿಧ ಕಂಪನಿಗಳು ದೊಡ್ಡ ಪ್ರಮಾಣದಲ್ಲಿ ಈ ಡ್ರೋನ್‌ಗಳನ್ನು ತಯಾರಿಸಲಿವೆ ಎಂದು ಮೂಲಗಳು ತಿಳಿಸಿವೆ.
ಸ್ವದೇಶಿ ಎಂಜಿನ್:
ಇತ್ತೀಚಿನ ವರ್ಷಗಳವರೆಗೂ ಸುಧಾರಿತ ಡ್ರೋನ್‌ಗಳ ಅಭಿವೃದ್ಧಿಯಲ್ಲಿ ಭಾರತವು ಹಿಂದುಳಿದಿತ್ತು. ಹೆರಾನ್, ಸರ್ಚರ್-2ನಂತಹ ಡ್ರೋನ್‌ಗಳನ್ನು ಭಾರೀ ಸಂಖ್ಯೆಯಲ್ಲಿ ಇಸ್ರೇಲ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪ್ರಸ್ತುತ ವಿದೇಶಿ ಎಂಜಿನ್‌ನಿಂದ ಹಾರಾಟ ನಡೆಸುತ್ತಿರುವ ತಪಸ್-ಬಿಎಚ್ ಡ್ರೋನ್‌ಗೆ 40-45 ಕೋಟಿ ರೂ. ವೆಚ್ಚವಾಗುತ್ತಿದೆ. ಹೀಗಾಗಿ, ದೇಶದಲ್ಲೇ ಅದಕ್ಕೆ ಬೇಕಾದ ಎಂಜಿನ್ ತಯಾರಿಸಲಾಗುತ್ತಿದ್ದು, ಅದರ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಇದು ಸಾಕಾರಗೊಂಡರೆ, ಕಡಿಮೆ ವೆಚ್ಚದಲ್ಲಿ ದೇಶಕ್ಕೆ ಸುಧಾರಿತ ಡ್ರೋನ್‌ಗಳು ಲಭ್ಯವಾಗಲಿದೆ.
ತಪಸ್- ಬಿಎಚ್ ವೈಶಿಷ್ಟ್ಯ
– 28,000 ಅಡಿ ಎತ್ತರದಲ್ಲಿ 18 ಗಂಟೆಗಳ ಅವಧಿಯ ದೀರ್ಘಕಾಲದ ಹಾರಾಟ
– ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ ಕಾರ್ಯಾಚರಣೆಗೆ ಸಹಕಾರಿ
– 20.6 ಮೀ. ವಿಂಗ್ ಸ್ಪಾನ್‌ನೊಂದಿಗೆ ಗಂಟೆಗೆ 225 ಕಿ.ಮೀ. ಕ್ರಮಿಸಬಲ್ಲದು
ಶಸ್ತ್ರ ಸಜ್ಜಿತ ಡ್ರೋನ್ ಶೀಘ್ರ ಪರೀಕ್ಷೆ
ರಕ್ಷಣಾ ಕಾರ್ಯಾಚರಣೆಗೆಂದು ದೇಶೀಯವಾಗಿಯೇ ಮತ್ತೂಂದು ಡ್ರೋನ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಶಸ್ತ್ರ ಸಜ್ಜಿತ ಡ್ರೋನ್ “ಆರ್ಚರ್-ಎನ್‌ಜಿ’ ಇದೇ ವರ್ಷದ ಜೂನ್ -ಜುಲೈನಲ್ಲಿ ಪರೀಕ್ಷಾರ್ಥ ಹಾರಾಟಕ್ಕೆ ಒಳಪಡಲಿದೆ. ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್‌ಗಳು, ಕ್ಷಿಪಣಿಗಳು ಸೇರಿದಂತೆ 300 ಕೆಜಿವರೆಗಿನ ವಿವಿಧ ಶಸ್ತ್ರಾಸ್ತ್ರಗಳನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಈ ಡ್ರೋನ್‌ಗೆ ಇರಲಿದೆ ಎಂದು ಡಿಆರ್‌ಡಿಒ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.