Desi Swara; ಇಟಲಿ ಕ್ರಿಸ್ಮಸ್‌ ಸಂಭ್ರಮ: ಕ್ರಿಸ್‌ಮಸ್‌ಗೆ ಕಂಗೊಳಿಸುವ ವ್ಯಾಟಿಕನ್‌


Team Udayavani, Dec 23, 2023, 12:18 PM IST

Desi Swara; ಇಟಲಿ ಕ್ರಿಸ್ಮಸ್‌ ಸಂಭ್ರಮ: ಕ್ರಿಸ್‌ಮಸ್‌ಗೆ ಕಂಗೊಳಿಸುವ ವ್ಯಾಟಿಕನ್‌

ಕ್ರಿಸ್ಮಸ್‌, ಏಸುಕ್ರಿಸ್ತನ ಜನ್ಮದಿನವನ್ನು ಡಿಸೆಂಬರ್‌ 25ರಂದು ಆಚರಿಸುವುದು ತಿಳಿದ ಸಂಗತಿ. ಈ ಹಬ್ಬಕ್ಕೆ ಒಂದೊಂದು ದೇಶದವರು ಅವರದೇ ಭಾಷೆಯ ಹೆಸರಿನಲ್ಲಿ ಕರೆಯುತ್ತಾರೆ. ಆಂಗ್ಲಭಾಷೆಯಲ್ಲಿ ಕ್ರಿಸ್ಮಸ್‌, ನೆದರ್ಲ್ಯಾಂಡ್ಸ್‌ನಲ್ಲಿ “ಕೇಸ್ಟರ್‌’, ಜರ್ಮನ್‌ ಭಾಷೆಯಲ್ಲಿ “ವೆಯ್ನ್ಯಾಕ್ಟ್ ಫೆಸ್ಟ್‌ ‘, ಗ್ರೀಕ್‌ ಭಾಷೆಯಲ್ಲಿ “ಕ್ರಿಸ್ತುಎನ ‘, ಜಪಾನಿನಲ್ಲಿ ಕೊರಿಸ್ಮಸ್‌, ಫ್ರೆಂಚ್‌ನಲ್ಲಿ ನೋಯೆಲ್‌ ಆದರೆ ಇಟಾಲಿಯನ್‌ನಲ್ಲಿ “ನತಾಲೆ’ ಅಂತ ಕರೆಯುತ್ತಾರೆ.

ಕ್ರೈಸ್ತಮತದ ತವರೂರಾದ ರೋಮ್‌ ನಗರ ಇಟಲಿಯ ರಾಜಧಾನಿ, ಇಲ್ಲಿಯ ಚಿಕ್ಕದೇಶ ವ್ಯಾಟಿಕನ್‌. ಇದಕ್ಕೆ ಸೈಂಟ್‌ ಪೀಟರ್‌ ಅಂತಾನೂ ಕರೆಯುತ್ತಾರೆ. ಇಲ್ಲಿ ಪೋಪ್‌ ವಾಸಿಸುತ್ತಾರೆ. ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಈ ಹಬ್ಬ ಆಚರಿಸಲ್ಪಡುತ್ತದೆ. ಇನ್ನು ಹಬ್ಬ ಒಂದು ತಿಂಗಳಿರುವಾಗಲೇ ಹಬ್ಬದ ವಾತಾವರಣ ಕಂಡುಬರುತ್ತದೆ. ಆದರೆ ಮತಾಧಿಕಾರಗಳ ಪ್ರಕಾರ ಡಿಸೆಂಬರ್‌ ಎಂಟನೇ ತೇದಿ ಇಂದ ಆರಂಭಿಸಬೇಕು. ಏಕೆಂದರೆ ಆದಿನ ಕ್ರಿಸ್ತನ ತಾಯಿ ಮರಿಯಾ ದೈವಿಕವಾಗಿ ಗರ್ಭದಾರಣೆ ಮಾಡಿದರಂತೆ. ರೋಮ್‌ ನಗರದ ಸಂತಗೊಸ್ಟೀನೋ ಚರ್ಚ್‌ನ ಎದುರು ವೃತ್ತದಲ್ಲಿ ಗರ್ಭಿಣಿ ಮರಿಯಾಳ ದೊಡ್ಡ ಶಿಲ್ಪ ಇದೆ. ಈ ದಿನ ಪೋಪ್‌ ಈ ಪ್ರತಿಮೆಯನ್ನು ಆರಾಧಿಸುತ್ತಾರೆ.

ವ್ಯಾಟಿಕನ್‌ ಅದ್ಭುತ ಭವನದ ಮುಂದೆ ಪ್ರಸೆಪೆ ಅಂದರೆ ಕ್ರಿಸ್ತನ ಜನನದ ದೃಶ್ಯವನ್ನು ವಿವರಿಸುವ ದೃಶ್ಯ, ಹಾಗೂ ತುಂಬಾ ದೊಡ್ಡ ಕ್ರಿಸ್ಮಸ್‌ ಟ್ರೀ ಇಟ್ಟು ದಿವ್ಯಾಲಂಕಾರ ಮಾಡುತ್ತಾರೆ. 24ನೇ ತೇದಿ ಅಂದು ಕ್ರಿಸ್ಮಸ್‌ ಈವ್‌. ಹಲವಾರು ಉಪವಾಸವಿದ್ದು ರಾತ್ರಿ 12 ಗಂಟೆಗೆ ಮಾಸ್‌ಗೆ ಹೋಗುತ್ತಾರೆ. ವ್ಯಾಟಿಕನ್‌ನಲ್ಲಿ ವಿಶೇಷ ಆರಾಧನೆ ನಡೆದ ಮೇಲೆ ಪೋಪ್‌ ಮಗು ಏಸುವನ್ನು ಗುಹೆಯ ಹುಲ್ಲಿನ ಹಾಸಿಗೆಯಲ್ಲಿ ಮಲಗಿಸುತ್ತಾರೆ. ಚರ್ಚ್‌ನ ಗಂಟೆಗಳು ಮೊಳಗುತ್ತ ಏಸುವಿನ ಜನನ ಸಾರುತ್ತದೆ. ಮನೆಗಳಲ್ಲಿಯೂ ಮಾರನೇ ದಿನ ದೊಡ್ಡ ಹಬ್ಬ ಬಂಧು ಮಿತ್ರರು ಒಂದು ಮನೆಯಲ್ಲಿ ಸೇರಿ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.

ಈ ಸಂಭ್ರಮದಲ್ಲಿ ಪ್ರಕೃತಿಯು ಭಾಗವಹಿಸುತ್ತದೆ ಹಿಮ ಸುರಿಸುತ್ತ, ಆಕಾಶದಿಂದ ಬೀಳುತ್ತಿರುವ ಹಿಮ ಮಲ್ಲಿಗೆ ಹೂವಿನಂತೆ ಅಂದವಾಗಿ ದೇವರಿಗೆ ಪುಷ್ಪಾರ್ಚನೆ ಅನ್ನುವಂತೆ ಭಾಸವಾಗುತ್ತದೆ. ಅಂದು ಆರಂಭವಾದ ಆಚರಣೆ ಕ್ರಿಸ್ಮಸ್‌, ನೂತನ ವರ್ಷ, ಬೆಫಾನ ಹಬ್ಬಗಳೊಂದಿಗೆ ಜನವರಿ 6 ಮುಗಿಯುತ್ತದೆ.

ಹಬ್ಬಗಳ ಉದ್ದೇಶ ಆಧ್ಯಾತ್ಮಿಕ ಹಾಗೂ ಭೌತಿಕ ಜೀವನವನ್ನು ಒಂದಾಗಿಸುವುದು. ಮನಸ್ಸು ದೇವನೆಡೆ ಒಲಿದರೆ ಇಂದ್ರಿಯಗಳು ತಮ್ಮದೇ ಆದ ಚಾಪಲ್ಯಗಳನ್ನು ತೀರಿಸಿಕೊಳ್ಳುತ್ತದೆ. ಜೀವನದ ಕಾರಂಜಿ ಉತ್ಸಾಹ ಉಲ್ಲಾಸದಿಂದ ಹರಿದು ಹೊಸಬೆಳಕು ಮೂಡಿಸುತ್ತದೆ. ಕ್ರಿಸ್ಮಸ್‌ ದೀಪಗಳೇ ಕಣ್ಣುಗಳಿಗೆ ಹಬ್ಬ, ಹಬ್ಬದ ವಾತಾವರಣ ಮನಸ್ಸಿಗೆ ತೃಪ್ತಿ.

ಇಟಲಿ ಸಂಗೀತ ಹಾಗೂ ಕಲೆಗಳಿಗೆ ತವರೂರು. ಎಲ್ಲೆಲ್ಲೂ ಕ್ರಿಸ್ಮಸ್‌ ಹಾಡುಗಳು ಕೇಳುತ್ತವೆ ಕಲಾಕಾರರ ಕಲೆ ಆಕರ್ಷಣೀಯ ಗೊಂಬೆಗಳು, ಮಣ್ಣಿನ ದಿನಬಳಕೆ ವಸ್ತುಗಳು, ಮಾರುಕಟ್ಟೆಗಳು ಜನರ ನಡುವೆ ಸಂತ ಕ್ಲೊಸ್‌ ನಡೆಯುತ್ತಿದ್ದರೆ ನಾವೂ ಚಳಿಯಲ್ಲಿ ಬೆಚ್ಚಗಿನ ಬಟ್ಟೆ ಹಾಕಿಕೊಂಡು ನಡೆಯುತ್ತಿದ್ದರೆ ತುಂಬಾ ಸಂತೋಷ ಆಗುತ್ತದೆ. ಅಂದಹಾಗೆ ಕೆಂಪು ಬಣ್ಣ ಶ್ರೇಷ್ಠ ! ಮಾರುಕಟ್ಟೆ ಯಲ್ಲಿ ಕೆಂಪು ವಸ್ತ್ರಗಳ ಮಾರಾಟ ! ಅಯ್ಯೋ ಕೆಂಪು ಸೀರೆ ಮಾತ್ರ ಕಾಣುವುದಿಲ್ಲ !

ಪ್ರಸೆಪೆ ಒಂದು ದೈವ ಕಲೆಯೇ ಸರಿ!
ಪ್ರಸೆಪೆ ಅಂದರೆ ಕ್ರಿಸ್ತನ ಜನನದ ವಿವರಣೆ. ಇದನ್ನು ರಚಿಸುವ ಕಲೆ ನೋಡಿ ಅನುಭವಿಸಬೇಕು. ಇಟಲಿಯ ಟಸ್ಕನಿ ಸ್ಟೇಟ್‌ನಲ್ಲಿ ಚೇರ್ರೊತ್ತೂಗ್ವಿದಿ ಅನ್ನುವ ಊರು ಇದಕ್ಕೆ ತಲೆಮಾರುಗಳಿಂದ ಪ್ರಸಿದ್ಧಿ. ಊರಿನ ಎಲ್ಲೆಡೆ ವಿಧವಿಧ ಮಾದರಿಗಳ ಪ್ರಸೆಪೆಗಳನ್ನೂ ಇಲ್ಲಿ ಮಾಡುತ್ತಾರೆ. ಇದಕ್ಕೆ ಬೇಕಾಗುವ ಗೊಂಬೆಗಳನ್ನು ಕ್ರೋಶಾಗಳಿಂದ ತಯಾರಿಸುವುದಲ್ಲದೆ ಇಡೀ ದೃಶ್ಯ ಕ್ರೋಶಾಲಿ ಮಾಡಿರುತ್ತಾರೆ. ಇದು ನಿಜಕ್ಕೂ ನೋಡಬೇಕು.

ಪ್ರಸೆಪೆ ದೃಶ್ಯ ಏನು ವಿವರಿಸುತ್ತದೆ ?
ತುಂಬು ಗರ್ಭಿಣಿ ಮೇರಿ ಅವಳ ಪತಿ ಜೋಸೆಫ್ ನಾತ್ಸರೇಟ್ನಿಂದ ಬೆತ್ಲಹೆಮ್ಗೆ ಕೆಲಸಕ್ಕಾಗಿ ಕತ್ತೆ ಎತ್ತಿನ ಮೇಲೆ ಪ್ರಯಾಣ ಮಾಡುತ್ತಾರೆ. ಊರು ಸೇರುವಾಗ ರಾತ್ರಿ ಆಗಿರುತ್ತದೆ. ಕತ್ತಲ ವಾತಾವರಣ. ಮಲಗಲು ಎಲ್ಲೂ ಕೊಠಡಿ ಖಾಲಿ ಇರಲಿಲ್ಲ. ಮೇರಿಗೆ ಪ್ರಸವ ವೇದನೆ ಆರಂಭವಾಗುತ್ತದೆ. ಒಂದು ದನದ ಕೊಟ್ಟಿಗೆಯಲ್ಲಿ ಮಲಗಲು ಅನುವುಮಾಡುತ್ತಾರೆ. ಅಲ್ಲೇ ಕ್ರಿಸ್ತನ ಜನನ ಆಗುತ್ತದೆ. ಪ್ರಾಣಿಗಳೇ ಶಾಖಕೊಟ್ಟು ಹುಲ್ಲಿನ ಮೇಲೆ ಮಲಗಿಸಿದ್ದ ಮಗುವನ್ನು ಕಾಪಾಡುತ್ತವೆ. ಇತ್ತ ನತ್ಸರೇತ್‌ನಲ್ಲಿ ಮೂವರು ಶಾಸ್ತ್ರಜ್ಞರು ತಮ್ಮ ಜ್ಞಾನದಿಂದ ಮಹಾತ್ಮ ಹುಟ್ಟಿದನೆಂದು ಅಲ್ಲಿಗೆ ಬರುತ್ತಾರೆ.

ಅವರಿಗೆ ನಕ್ಷತ್ರ ದಾರಿ ತೋರಿಸಿತಂತೆ ! ಅದೇ ಇಂದಿನ ಕ್ರಿಸ್ಮಸ್‌ ಸ್ಟಾರ್‌. ಮತ್ತೆ ಈ ದೃಶ್ಯದಲ್ಲಿ ಪ್ರಾಣಿಗಳು, ಎಲ್ಲ ಕಸುಬುದಾರರ ಮಿನಿಯೇಚರ್‌ ಗೊಂಬೆಗಳು, ಹರಿಯುವ ನೀರು, ಇವುಗಳಿಂದ ದೈನಂದಿನ ಜೀವನ ಪ್ರದರ್ಶಿಸುತ್ತಾರೆ. ಇವೆಲ್ಲ ಪುಟ್ಟ ಜನರೇಟರ್‌ ಮೂಲಕ ಕೆಲಸ ಮಾಡುತ್ತವೆ. ಈಗಿನ ಆಧುನಿಕ ಯುಗದಲ್ಲಿ ಇದು ಬಣ್ಣ ಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತದೆ.

ಪಾಸ್ತಾ, ಮಣಿಗಳು, ಗುಂಡಿಗಳು, ಮುತ್ತು ಹವಳಗಳು, ಗಾಜು, ಮಣ್ಣು ಇನ್ನು ಅನೇಕ ವಸ್ತುಗಳಿಂದ ಮಾಡಲ್ಪಟ್ಟ ಪ್ರಸೆಪೆಗಳು ಕಲಾಕಾರರ ಪ್ರತಿಭೆ ಎತ್ತಿ ತೋರಿಸುತ್ತದೆ.ಇದರ ಜತೆಗೆ ಕ್ರಿಸ್ಮಸ್‌ ಟ್ರೀ ಕೂಡ ಮುಖ್ಯ. ಮಕ್ಕಳಿಂದ ಹಿರಿಯರವರೆಗೆ ಎಲ್ಲರು ಸೇರಿ ಮನೆಗಳಲ್ಲಿ ಇಟ್ಟು ಅದರ ಕೆಳಗೆ ಉಡುಗೊರೆಗಳನ್ನು ಇಟ್ಟು ಕ್ರಿಸ್ತ ಜನನ ಆದಮೇಲೆ ಕೊಟ್ಟು ತೆಗೆದುಕೊಳ್ಳುತ್ತಾರೆ.
ಎಲ್ಲೆಲ್ಲೂ ಮನೋರಂಜನೆ, ಹೊಸ ಪುಸ್ತಕಗಳ ಮಾರಾಟ, ಜನಜಂಗುಳಿಯ ಶಾಪಿಂಗ್‌, ಅಲಂಕೃತ ರಸ್ತೆಗಳು ನಿಜಕ್ಕೂ ಇಟಲಿ ತನ್ನದೇ ಆದ ಸೊಬಗಿನಿಂದ ಎಲ್ಲರನ್ನು ಆಕರ್ಷಿಸುತ್ತದೆ. ಇನ್ನೊಂದು ವಿಶೇಷತೆ ಈ ದಿನಗಳಲ್ಲಿ ಬಡಬಗ್ಗರಿಗೆ ದಾನ, ರೋಗಿಗಳ ಸೇವೆ, ಅಂಗವಿಕಲರ ಸೇವೆಗೂ ಹಲವರು ಪ್ರಾಮುಖ್ಯ ನೀಡುತ್ತಾರೆ.

ಇದು ಒಂದು ಭಾಗದ ಕ್ರಿಸ್ಮಸ್‌ ಆಚರಣೆ ಆದರೆ ಇದರ ಮತ್ತೂಂದು ಅಂಗ ಭಾರ್ಜರೀ ಊಟ. ಇದರಲ್ಲಿ ಅಡುಗೆಯವರ ಪಾತ್ರ ಮುಖ್ಯ. ಕ್ರಿಸ್ಮಸ್‌ ಸ್ವೀಟ್‌, ಕೇಕ್‌ ಮಾತ್ರ ಅಲ್ಲ ಇಟಲಿಯಲ್ಲಿ ಒಂದೊಂದು ಪ್ರಾಂತದಲ್ಲಿ ಒಂದೊಂದು ಸ್ವೀಟ್‌ ಪ್ರಸಿದ್ಧಿ. ಇದರ ಹೆಸರುಗಳು ಬಾಯಲ್ಲಿ ನೀರೂರಿಸುತ್ತವೆ .

Panettone, pandoro, Torrone, Seadas, cartellate, Strufoli ,tartufi, amaretti, fichi, panforte, ಇವೆ ಅದರ ಹೆಸರುಗಳು ! ಒಟ್ಟಿನಲ್ಲಿ ಎಲ್ಲರ ಬಾಳು ಸಿಹಿಯಾಗಲಿ. ಈ ಸ್ವರಚನೆ ಕವನದ ಮೂಲಕ ಎಲ್ಲರಿಗೂ ಕ್ರಿಸ್ಮಸ್‌ ಹಾಗೂ ನೂತನ ಸಂವತ್ಸರದ ಶುಭಾಶಯಗಳು.

ಯೇಸುಕ್ರಿಸ್ತನ ಅವತರಣ

ತಾರೆಗಳ ಲೋಕದಿಂದ
ಧರೆಗಿಳಿದು ಬಂದೆ
ಗುಹೆಯೊಳಗೆ ಜನಿಸಿದೆ
ಚಳಿ, ಹಿಮ ವಾತಾವರಣದಿ ||

ಓ ಶಿಶುವೇ, ನನ್ನ ದೈವ ನೀನು
ಕಂಡೆ ತಂಗಾಳಿಯಲಿ ನಿನ್ನ
ನಡುಗುವುದನ್ನು ಭಗವಂತ ನೀನು
ಸಹಿಸಿದೆ ಗಾಳಿಯ ಹೊಡೆತ ತಾಳ್ಮೆಯಲಿ ನೀನು ||

ನನ್ನ ಪ್ರೇಮಕ್ಕಾಗಿ ನಿನ್ನ ತ್ಯಾಗವೆಷ್ಟು
ನಿನಗೆ ಬಂದ ಕಷ್ಟಗಳೆಷ್ಟು
ನನ್ನನುದ್ಧರಿಸಲು ತಡೆಗಳು ಬೆಟ್ಟದಷ್ಟು
ವಿಶ್ವ ದೊಡೆಯ ನಿನ್ನ ಸಹನೆ ಎಷ್ಟು ||

ಸೃಷ್ಠಿಕರ್ತ ನೀನು, ಆದರೇನು
ದೊರಕಲಿಲ್ಲ ಇಲ್ಲಿ, ಉಣಲು ಆಹಾರ,
ಉಡಲು ವಸ್ತ್ರ, ಬೆಚ್ಚಗಿನ ಬೆಂಕಿ ಚಳಿ ತಡೆಯಲು
ಹೆದರಲಿಲ್ಲ ನೀನು, ಕಷ್ಟ ಕಾರ್ಪಣ್ಯಗಳಿಗೆ ||

ಭಗವಂತ ಆರಿಸಿ ಧರೆಗೆ ಕಳುಹಿದ ಶಿಶು
ಅನುಮಾನವೆಲ್ಲಿ, ಬಡತನ ಕಾದಿತ್ತಿಲ್ಲಿ
ನಿನ್ನ ಆವರಿಸಿತ್ತು ಎಲ್ಲೆಲ್ಲಿ
ಅದೇ ಭಗವಂತನೆಡೆಗೆ ಹಾದಿ, ಸಾರಿದೆ ಇಲ್ಲಿ ||

ನಿನ್ನ ಹಂಬಲ ನನ್ನ ಆಕರ್ಷಿಸಿತು
ನಿನ್ನ ತ್ಯಾಗ ನನ್ನ ಕರೆಯಿತು
ನನ್ನ ಭಕ್ತಿ ನಿನ್ನಲ್ಲಿ ಮೂಡಿತು
ನೀ ತೋರು ವಿಶ್ವ ಶಾಂತಿ.||

ಜಯಮೂರ್ತಿ, ಇಟಲಿ

ಟಾಪ್ ನ್ಯೂಸ್

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಕತಾರ್‌:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್‌ ಶಹನ ಜತೆ ಸಂವಾದ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

ಬಹ್ರೈನ್‌ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್‌ ಅಬ್ಬರ-ಕ್ರಿಕೆಟ್‌ ಪ್ರೇಮಿಗಳ ಮೆಚ್ಚುಗೆ

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ 

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್‌ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!

Siddaramaiah

Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.