Desi Swara: ಜ.14:ಬೆಂಗಳೂರಿನಲ್ಲಿ” ಅರಬ್ಬರ ನಾಡಿನಲ್ಲಿ ಕನ್ನಡಿಗರು” ಪುಸ್ತಕ ಬಿಡುಗಡೆ
20ಕ್ಕೂ ಹೆಚ್ಚು ಒಮಾನ್ ಕನ್ನಡಿಗರ ಬರಹ ದಾಖಲು
Team Udayavani, Jan 13, 2024, 2:46 PM IST
ವ್ಯಾಪಾರ ಮತ್ತು ಉದ್ಯೋಗಕ್ಕಾಗಿ ಜನ ವಲಸೆ ಹೋಗುವುದು ಸರ್ವೇ ಸಾಮಾನ್ಯ. ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಜನ ಶತ ಶತಮಾನದಿಂದಲೂ ವಲಸೆ ಹೋಗುತ್ತಿದ್ದಾರೆ. ಭಾರತೀಯರು ಸಹ ಇನ್ನೂರಕ್ಕೂ ಅಧಿಕ ದೇಶಗಳಲ್ಲಿ ವಿಶ್ವದಾದ್ಯಂತ ನೆಲೆಸಿ ಉದ್ಯೋಗ ಮತ್ತು ಉದ್ಯಮದಲ್ಲಿ ತೊಡಗಿಸಿಕೊಂಡಿರುವುದನ್ನ ನಾವು ಕಾಣಬಹುದು. ಕೊಲ್ಲಿ ರಾಷ್ಟ್ರಗಳಲ್ಲಿ ತೈಲ ಆವಿಷ್ಕರಣೆಯ ಅನಂತರ ಉದ್ಯೋಗ ಮತ್ತು ವ್ಯವಹಾರಕ್ಕಾಗಿ ಲಕ್ಷಾಂತರ ಭಾರತೀಯರು ಇಲ್ಲಿಗೆ ವಲಸೆ ಬಂದು ನೆಲೆಸಿ¨ªಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರು ಸಹ ಇದ್ದಾರೆ. ಅರಬ್ ರಾಷ್ಟ್ರಗಳು ಭಾರತದೊಂದಿಗಿನ ವಾಣಿಜ್ಯ ಸಂಭಂದ ಸುಮಾರು ಐದು ಸಾವಿರ ವರ್ಷಗಳ ಹಿಂದಿನಷ್ಟು ಹಳೆಯದು. ಹರಪ್ಪ ಮೊಹೆಂಜೋದಾರೋ ಕಾಲದಿಂದಲೂ ಹಿಂದಿದ್ದ ಆ ಬಾಂಧವ್ಯ ಇಂದಿಗೂ ಮುಂದುವರಿದಿದೆ.
ಕರುನಾಡಿನ ಬಹಳಷ್ಟು ಕನ್ನಡಿಗರಿಗೆ ಒಮಾನ್ ದೇಶದ ಬಗ್ಗೆ ಅಷ್ಟೇನು ಪರಿಚಯವಿಲ್ಲ. ಕೆಲವರಿಗೆ ಒಮಾನ್ ದೇಶ ಗಲ್ಫ್ ರಾಷ್ಟ್ರ ಮತ್ತು ಅರಬ್ ಮುಸ್ಲಿಂ ರಾಷ್ಟ್ರ ಅಂತ ಗೊತ್ತಿದೆ. ಇಲ್ಲಿ ಅತೀ ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುತ್ತದೆ, ಬಿರು ಬಿಸಿಲಿನ ಜಾಗ, ಅತೀ ಹೆಚ್ಚು ಮರುಭೂಮಿ ಹೊಂದಿರುವ ಪ್ರದೇಶ ಹಾಗೂ ಇಲ್ಲಿ ಕಡಿಮೆ ಮಳೆ ಬೀಳುತ್ತದೆ. ಸೌದಿ ಅರೇಬಿಯಾ, ದುಬೈ ಹತ್ತಿರದಲ್ಲಿ ಈ ದೇಶವಿದೆ ಎಂದು ತಿಳಿದುಕೊಂಡಿದ್ದಾರೆ. ಅದೆಲ್ಲವೂ ನಿಜ.
ಜತೆಗೆ ಒಮಾನ್ ಒಂದು ಸುಂದರ ದೇಶ, ಇಲ್ಲಿ ನಿಸರ್ಗ ನಿರ್ಮಿತ ರಮ್ಯ ಮನೋಹರ ತಾಣಗಳಿವೆ. ಶಾಂತಿ ಪ್ರಿಯ ಹಾಗೂ ಸ್ನೇಹಪರ ಸ್ವಭಾವವುಳ್ಳ ಒಮಾನಿಗಳು ಪ್ರಜೆಗಳು ಇಲ್ಲಿ ನೆಲೆಸಿರುವ ಎಲ್ಲ ದೇಶದ ವಲಸೆ ಉದ್ಯೋಗಿಗಳನ್ನ ಗೌರವದಿಂದ ಕಾಣುತ್ತಾರೆ. ಇಲ್ಲಿ ಭಾರತೀಯರು ಸೇರಿದಂತೆ ಇತರ ದೇಶದವರು ಸುಮಾರು ಇಪ್ಪತ್ತು ಲಕ್ಷಕ್ಕೂ ಹೆಚ್ಚಿನ ವಲಸೆ ಉದ್ಯೋಗಿಗಳು ಇಲ್ಲಿ ನೆಲೆಸಿದ್ದಾ ರೆ.
ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಈ ದೇಶವನ್ನು ನಮ್ಮ ಕರುನಾಡಿನ ಕನ್ನಡಿಗರಿಗೆ ತಮ್ಮ ಅನುಭವದ ಮಾತುಗಳಿಂದ ಪರಿಚಯಿಸಬೇಕು ಎನ್ನುವ ಆಲೋಚನೆಯಿಂದ ಲೇಖಕರಾದ ಪಿ.ಎಸ್.ರಂಗನಾಥ ಅವರೊಂದು ವಿಭಿನ್ನ ಪ್ರಯತ್ನ ಮಾಡಿ ಅರಬ್ಬರ ನಾಡಿನಲ್ಲಿ ಕನ್ನಡಿಗರು ಎನ್ನುವ ಕೃತಿಯನ್ನು ಸಂಪಾದಿಸಿದ್ದಾರೆ. ಈ ಪುಸ್ತಕದ ಲೇಖಕರು ಒಬ್ಬರು, ಇಬ್ಬರಲ್ಲ. ಒಮಾನ್ ರಾಷ್ಟ್ರದಲ್ಲಿ ದಶಕಗಳಿಂದ ನೆಲೆಸಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕನ್ನಡಿಗರಿಂದ ಅವರ ಅನುಭವ ಲೇಖನಗಳನ್ನು ಬರೆಯಿಸಿದ್ದಾರೆ. ಇದರಲ್ಲಿ ಎಂಜಿನಿಯರ್‌ಗಳು, ವೈದ್ಯರುಗಳು, ಅಧ್ಯಾಪಕರು ಮತ್ತು ಶಿಕ್ಷಕರು ಇದ್ದಾರೆ.
ಈ ಎಲ್ಲ ಬರಹಗಾರರು ತಮ್ಮ ಸ್ವಂತ ಅನುಭವದ ಜತೆಗೆ ಒಮಾನ್‌ನಲ್ಲಿ ನಡೆದ ಮತ್ತು ಕೇಳಿದ ಹಲವಾರು ಅನುಭವ ಕಥನಗಳು ಮತ್ತು ಸ್ಫೂರ್ತಿದಾಯಕ ಲೇಖನುಗಳು ಇಲ್ಲಿ ದಾಖಲಾಗಿವೆ. ಈ ಪುಸ್ತಕದ ಮೂಲಕ ಕನ್ನಡಿಗ ಓದುಗರಿಗೆ ಒಮಾನ್‌ನಲ್ಲಿನ ಇವರೆಲ್ಲರ ಬದುಕು, ಬವಣೆ, ಖುಷಿ ವಿಚಾರ ಇತ್ಯಾದಿಗಳನ್ನ ಪರಿಚಯಿಸುವ ವಿಭಿನ್ನ ಪ್ರಯತ್ನವನ್ನು ಮಾಡಿದ್ದಾರೆ. ಒಮಾನ್‌ನಲ್ಲಿ ಕನ್ನಡ ಸೇವೆ ಮಾಡುತ್ತಿರುವ ಸಂಘ ಸಂಸ್ಥೆಗಳು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುತ್ತಿರುವ ಸಂಘಟನೆಗಳು, ಕತೆ, ಕವನ ಲೇಖನಗಳನ್ನ ಬರೆಯುತ್ತಿರುವ ಬರಹಗಾರರು, ಕನ್ನಡದ ಸಾಧಕರು ಮತ್ತು ನಮ್ಮ ಮಕ್ಕಳಿಗೆ ಕನ್ನಡ ಕಲಿಸುತ್ತಿರುವ ಶಿಕ್ಷಕರು ಇವರೆಲ್ಲರ ಪರಿಚಯ ಮತ್ತು ಒಮಾನ್ ಅನುಭವ ಕಥನಗಳು ಹೀಗೆ ವಿವಿಧ ವಿಷಯಗಳನ್ನು ಈ ಪುಸ್ತಕ ಒಳಗೊಂಡಿದೆ. ಒಮಾನ್ ದೇಶದಲ್ಲಿ ನೆಲೆಗೊಂಡಿರುವ ಕನ್ನಡಿಗರ ಸಾಂಸ್ಕೃತಿಕ ಲೋಕವನ್ನು ಈ ಪುಸ್ತಕದ ಮೂಲಕ ಅರಿತುಕೊಳ್ಳಬಹುದು.
ಕೊಲ್ಲಿ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಪರವಾದ ಮೊದಲ ಪುಸ್ತಕವು ಇದಾಗಿದೆ. ಪಿ.ಎಸ್.ರಂಗನಾಥ್ ಅವರು ಸುಮಾರು 14 ವರ್ಷಗಳಿಂದ ಒಮಾನ್ ರಾಷ್ಟ್ರದ ರಾಜಧಾನಿ ಮಸ್ಕತ್ ನಲ್ಲಿ ನೆಲೆಸಿ ಉದ್ಯೋಗ ಮಾಡುತ್ತಿದ್ದಾ ರೆ. ಅದಕ್ಕೂ ಮುಂಚೆ ದುಬೈ ಮತ್ತು ಕುವೈಟ್‌ನಲ್ಲಿ 4 ವರ್ಷಗಳ ಕಾಲ ನೆಲೆಸಿದ್ದರು. ಕಳೆದ ಒಂದೂವರೆ ದಶಕಕ್ಕಿಂತಲೂ ಹೆಚ್ಚಿನ ಕಾಲ ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವುದರಿಂದ ಇಲ್ಲಿನ ಸಂಪೂರ್ಣ ಚಿತ್ರಣವನ್ನು ಪುಸ್ತಕದ ರೂಪದಲ್ಲಿ ಯಾಕೆ ಹೊರತರಬಾರದು ಎನ್ನುವ ಆಲೋಚನೆಯ ಫಲಶೃತಿಯೇ ಈ ಪುಸ್ತಕ. ಇದೊಂದು ವಿನೂತನ ಪ್ರಯತ್ನ ಎಂದು ಹೇಳಬಹುದು. ಇದೇ ಜ.14ರಂದು ರವಿವಾರ ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಈ ಕೃತಿಯು ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.