Desi Swara: ನ್ಯೂಯಾರ್ಕ್-“ಮಿಸ್ ಇಂಡಿಯಾ’ ಕಿರೀಟ ಗೆದ್ದ ಮೊದಲ ಕನ್ನಡತಿ ಜೀವಿಕಾ
"ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್ 2024'ರಲ್ಲಿ ಭಾರತವನ್ನು ಪ್ರತಿನಿಧಿಸಲು ಸಜ್ಜು!
Team Udayavani, Oct 26, 2024, 12:14 PM IST
ನ್ಯೂಯಾರ್ಕ್:16 ವರ್ಷದ ಜೀವಿಕಾ ಬೆಂಕಿ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿ ನಡೆದ “ಮಿಸ್ ಇಂಡಿಯಾ’ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಈ ಸ್ಪರ್ಧೆ ಕೇವಲ ಸೌಂದರ್ಯದ ಸ್ಪರ್ಧೆ ಅಲ್ಲ. ಇದರಲ್ಲಿ ಅಭ್ಯರ್ಥಿಯ ಶೈಕ್ಷಣಿಕ, ಕ್ರೀಡೆ, ಕಲೆ, ನೃತ್ಯ, ನಾಯಕತ್ವ, ಸಮಾಜ ಸೇವೆ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಘಟನೆಗಳ ಪರಿಜ್ಞಾನ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳನ್ನು ಪರೀಕ್ಷಿಸಿ ಆಯ್ಕೆ ಮಾಡಲಾಗುತ್ತದೆ. ಜೀವಿಕಾ ಬೆಂಕಿ ಅ.27ರಂದು ನಡೆಯಲಿರುವ “ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
“ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ ಒಂದು ಸಣ್ಣ ಪ್ರಮಾಣದ “ಮಿಸ್ ಯುನಿವರ್ಸ್’ ತರಹದ ಸ್ಪರ್ಧೆಯಾಗಿದ್ದು ಇದರಲ್ಲಿ 30ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
53 ವರ್ಷಗಳ ಇತಿಹಾಸ ಇರುವ “ಫೆಸ್ಟಿವಲ್ ಆಫ್ ನೇಶನ್’ನಲ್ಲಿ “ಮಿಸ್ ಇಂಡಿಯಾ’ ಗೆದ್ದ ಮೊಟ್ಟಮೊದಲ ಕನ್ನಡತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾಳೆ. ಅಪ್ಪಟ ಕನ್ನಡ ಪ್ರೇಮಿ ಬೆಂಕಿ ಬಸಣ್ಣ ಮತ್ತು ಉಮಾ ಇವರ ಪುತ್ರಿ ಜೀವಿಕಾ ಬೆಂಕಿ ಈಗ ನಿಸ್ಕಯುನಾ ಸರಕಾರಿ ಹೈಸ್ಕೂಲ್‌ನಲ್ಲಿ 11ನೇ ತರಗತಿ ಓದುತ್ತಿದ್ದಾಳೆ.
ಭವಿಷ್ಯದಲ್ಲಿ ಪೈಲೆಟ್ ಆಗುವ ಕನಸು ಹೊಂದಿರುವ ಜೀವಿಕಾ, ತನ್ನ ಹೈಸ್ಕೂಲ್ ಅಭ್ಯಾಸದ ಜತೆಗೆ ವೀಕೆಂಡ್‌ಗಳಲ್ಲಿ ಈಗಾಗಲೇ ರಿಚ್ಮೋರ್ ಫ್ಲೈಟ್ ಸ್ಕೂಲ್‌ನಲ್ಲಿ ಚಿಕ್ಕ ವಿಮಾನಗಳನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದಾಳೆ. ಹೈಸ್ಕೂಲಿನ ಟೆನ್ನಿಸ್ ಮತ್ತು ಲಕ್ರಾಸ್ ತಂಡಗಳ ಕ್ಯಾಪ್ಟನ್ ಆಗಿ ನಾಯಕತ್ವದ ಗುಣ ಪ್ರದರ್ಶಿಸುತ್ತಿದ್ದಾಳೆ. ಸ್ಥಳೀಯ ಆಲ್ಬನಿ ಕನ್ನಡ ಸಂಘದ ಯೂಥ್ ಕ್ಲಬ್‌ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ.
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ನಾವಿಕ ಸಂಸ್ಥೆ ರೋಟರಿ ಕ್ಲಬ್ ಹಾಗೂ ಮಾಧ್ಯಮದ “ಜ್ಞಾನ ದೀವಿಗೆ’ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕರ್ನಾಟಕದ ಹಳ್ಳಿಯ ಎಸೆಸೆಲ್ಸಿ ಮಕ್ಕಳಿಗೆ ಟ್ಯಾಬ್ಲೆಟ್ ಹಂಚುವ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾಳೆ.
“ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ ನ ಮೊದಲ ಹಂತದ ಸ್ಪರ್ಧೆ ಅ.14ರಂದು ನಡೆಯಿತು. ಇದರ ಕೊನೆಯ ಸ್ಪರ್ಧೆ ಅ.27ರಂದು ಸಾವಿರಾರು ಪ್ರೇಕ್ಷಕರ ಮುಂದೆ ಆಲ್ಬನಿಯ ಎಂಪೈರ್‌ಸ್ಟೇಟ್ ಪ್ಲಾಜಾದ ಕನ್ವೆನ್‌ಶನ್ ಸೆಂಟರ್‌ನಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಜೀವಿಕಾ ಗೆದ್ದು “ಮಿಸ್ ಫೆಸ್ಟಿವಲ್ ಆಫ್ ನೇಶನ್ಸ್’ನಲ್ಲಿ ಗೆಲ್ಲಲಿ ಎಂದು ನಾವೆಲ್ಲರೂ ಹಾರೈಸುತ್ತೇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
ಲ್ಯಾಂಬೆತ್‌ಗೆ ಸಚಿವ ಎಂ.ಬಿ.ಪಾಟೀಲ್ ಭೇಟಿ-ಬಸವೇಶ್ವರ ಪ್ರತಿಮೆ ವೀಕ್ಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.