Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
ಭಾರತೀಯ ಸಾಂಸ್ಕೃತಿಕ ಕೇಂದ್ರ
Team Udayavani, Mar 23, 2024, 10:06 AM IST
ಕತಾರ್:ಇಲ್ಲಿನ ಭಾರತೀಯ ಸಾಂಸ್ಕೃತಿಕ ಕೇಂದ್ರವು ಭಾರತೀಯ ದೂತಾವಾಸದ ಸಹಯೋಗದೊಂದಿಗೆ ಹಾಗೂ ಕತಾರ್ ವಸ್ತು ಸಂಗ್ರಹಾಲಯ ಮತ್ತು ಇಸ್ಲಾಮಿಕ್ ಕಲೆ ವಸ್ತು ಸಂಗ್ರಹಾಲಯಗಳ ಸಹಕಾರದೊಂದಿಗೆ ಮೂರು ದಿನಗಳ ಸಾಂಸ್ಕೃತಿಕ ಉತ್ಸವ, ಪ್ಯಾಸೇಜು ಟು ಇಂಡಿಯಾ (ಭಾರತದ ಪಥ) 2024 ಕಾರ್ಯಕ್ರಮವನ್ನು ಮಾ.7ರಂದು ವಿಜೃಂಭಣೆಯಿಂದ ಆಚರಿಸಿತು. ಈ ಕಾರ್ಯಕ್ರಮವು ಮೂರು ದಿನಗಳ ಕಾಲ ನಡೆಯಿತು.
ಅದ್ಭುತ ಸಾಂಸ್ಕೃತಿಕ ನೃತ್ಯ ಪ್ರದರ್ಶನದಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಮುಖ್ಯ ಆಕರ್ಷಣೆಯಾಗಿ ಭಾರತದ ಸುಪ್ರಸಿದ್ಧ ಚಿತ್ರ ಕಲಾವಿದರಾದ ವಿಲಾಸ್ ನಾಯಕ್ ಅವರು ಪ್ರದರ್ಶನ ನೀಡಿದರು. ಐಸಿಸಿ ಈ ಮಹೋನ್ನತ ಕಾರ್ಯಕ್ರಮವನ್ನು ಭಾರತದ ಶ್ರೀಮಂತ ಪರಂಪರೆ, ಸಂಸ್ಕೃತಿ ಹಾಗೂ ಅನೇಕತೆಯಲ್ಲಿ ಏಕತೆಯನ್ನು ಆಚರಿಸಲು ಹಮ್ಮಿಕೊಂಡಿತ್ತು.
ಈ ಉತ್ಸವವು ಭಾರತ ಹಾಗೂ ಕತಾರ್ ದೇಶಗಳ ನಡುವಿನ 50 ವರ್ಷಗಳ ರಾಜತಾಂತ್ರಿಕ ಸಂಬಂಧಗಳ ಮಹತ್ವವನ್ನು ಸಾರುತ್ತಿತ್ತು.
ಕತಾರ್‌ನ ಮಂತ್ರಿ ಹಾಗೂ ಕತಾರ್ ರಾಷ್ಟ್ರೀಯ ಗ್ರಂಥಾಲಯದ ಅಧ್ಯಕ್ಷರಾದ ಡಾ| ಅಹ್ಮದ್ ಬಿನ್ ಅಬ್ದುಲ್ಲಾ ಅಜೀಜ್ ಅಲ್ ಕುವೇರಿ ಸಂಜೆಯ ಪ್ರಾರಂಭಿಕ ಉತ್ಸವದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕತಾರ್‌ಗೆ ಭಾರತೀಯ ರಾಯಭಾರಿಗಳಾದ ವಿಫುಲ್ ಅವರು, ದೂತಾವಾಸದ ಇತರ ಅಧಿಕಾರಿಗಳು, ಭಾರತ ಮೂಲದ ಇತರ ಸಂಘಗಳ ಆಡಳಿತ ಸಮಿತಿಯ ಸದಸ್ಯರು ಸೇರಿ ಮುಖ್ಯ ಅತಿಥಿಗಳನ್ನು ಹಾಗೂ ಕತಾರ್‌ನ ಗಣ್ಯರನ್ನು ಸ್ವಾಗತಿಸಿದರು.
ಐಸಿಸಿ ಅಧ್ಯಕ್ಷರಾದ ಎ.ಪಿ. ಮಣಿಕಂಠನ್ ಅವರು ಸಭಿಕರನ್ನು ಸ್ವಾಗತಿಸುತ್ತಾ, ಕಾರ್ಯಕ್ರಮದ ವೈವಿಧ್ಯಮಯ ಸಾಂಸ್ಕೃತಿಕ ನೃತ್ಯ, ಕಲೆಯನ್ನು ಆನಂದಿಸಿ, ಆವರಣದಲ್ಲಿನ ವಿವಿಧ ಮಳಿಗೆಗಳ ಊಟೋಪಚಾರವನ್ನು ಸ್ವಾದಿಸಿ, ಭಾರತೀಯ ಕರಕುಶಲ ಮತ್ತು ಇತರ ಕಲೆಗಳನ್ನು ಮೂರು ದಿನಗಳ ಕಾಲ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು.
ಕಾರ್ಯಕ್ರಮದಲ್ಲಿ ಸಾವಿರಾರು ಭಾರತೀಯರು, ಕತಾರ್‌ನ ನಾಗರಿಕರು ಮತ್ತು ಇತರ ದೇಶಗಳ ಅನಿವಾಸಿ ನಾಗರೀಕರು ಆಗಮಿಸಿದ್ದರು. ಕರ್ನಾಟಕದ ಬೈಂದೂರು ಮೂಲದವರಾದ ಐ.ಸಿ.ಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಅವರು ಕಾರ್ಯಕ್ರಮದ ಆಯೋಜನೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು. ಐ.ಸಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ಹಾಗೂ ಐ.ಸಿ.ಸಿ ಆಡಳಿತ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಮಾ.8ರಂದು ಕಾರ್ಯಕ್ರಮದಲ್ಲಿ ಭಾರತೀಯ ದೂತಾವಾಸದ ಉಪಮುಖ್ಯಸ್ಥರಾದ ಸಂದೀಪ್ ಕುಮಾರ್ ಮಾತನಾಡಿ, “ಪ್ಯಾಸೇಜ್ ಟು ಇಂಡಿಯಾ’, ಇಂತಹ ಬೃಹತ್ ಗಾತ್ರದ ಭಾರತೀಯ ಸಂಭ್ರಮಾಚರಣೆಯ ಮಹತ್ವವನ್ನು ವಿಶ್ಲೇಷಿಸಿ ಆಗಮಿಸಿದ್ದ ಕತಾರ್‌ನ ವಿವಿಧ ಮಂತ್ರಾಲಯಗಳ ಗಣ್ಯರನ್ನು ಸಮ್ಮಾನಿಸಿದರು.
ಭಾರತೀಯ ದೂತಾವಾಸದ ಪ್ರಥಮ ಕಾರ್ಯದರ್ಶಿಗಳಾದ ಸಚಿನ್ ದಿನಕರ್ ಶಂಕಪಾಲ ಹಾಗೂ ಡಾ| ವೈಭವ್ ತಾಂಡಾಳೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎರಡನೇ ದಿನದ ಪ್ರಮುಖ ಆಕರ್ಷಣೆಗಳೆಂದರೆ ಚಿತ್ರಗಾರ ವಿಲಾಸ್ ನಾಯಕ್ ಅವರ ಅದ್ಭುತ ಆಶು ಚಿತ್ರ ಕಲೆ, ಬೃಹತ್ ತಂಡದಿಂದ ಗಾರ್ಬಾ ನೃತ್ಯ, ಕತಾರ್‌ನ ಆಂತರಿಕ ಮಂತ್ರಾಲಯದ ವತಿಯಿಂದ ಶ್ವಾನ ಪ್ರದರ್ಶನ ಮತ್ತು ಭಾರತದಿಂದ ಆಗಮಿಸಿದ್ದ ಕಲಾವಿದರಿಂದ ಕವ್ವಾಲಿ ಹಾಡುಗಾರಿಕೆ. ಸಂಜೆಯ ಕಾರ್ಯಕ್ರಮವು ಐ.ಸಿ.ಸಿ ಕಾರ್ಯದರ್ಶಿ ಅಬ್ರಹಾಂ ಜೋಸೆಫ್ ಅವರ ವಂದನಾರ್ಪಣೆಯೊಂದಿಗೆ ಸಂಪನ್ನವಾಯಿತು.
ಮಾ.10ರಂದು ಭಾರತದ ಸುಪ್ರಸಿದ್ಧ ಚಿತ್ರಕಾರ ವಿಲಾಸ್ ನಾಯಕ ಅವರ ಮೂರನೇ ಆವೃತ್ತಿಯ ಚಿತ್ರಣದೊಂದಿಗೆ ಪ್ರಾರಂಭಿಸಿ, ಭಾರತದಿಂದ ಆಗಮಿಸಿದ್ದ ತಂಡದಿಂದ ತಿರುವಿತರ ನೃತ್ಯ ಪ್ರದರ್ಶನ, ಮಹಾರಾಷ್ಟ್ರ ಮೂಲದ ನೃತ್ಯ ಪ್ರದರ್ಶನ, ಕವಾಲಿ ಗಾಯನ ಮತ್ತು ಇತರ ನೃತ್ಯ ಪ್ರದರ್ಶನ ಸಭಿಕರ ಮನರಂಜಿಸಿತು. ಅಂತಿಮ ದಿನದ ಕಾರ್ಯಕ್ರಮಕ್ಕೆ ಐಸಿಸಿ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರು ವಂದನಾರ್ಪಣೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.