ಪಕೃತಿಯ ಮಡಿಲಲ್ಲಿ ಕಂಗೊಳಿಸುತ್ತಿದೆ ದೇವರಗುಂಡಿ ಜಲಪಾತ
Team Udayavani, Dec 27, 2020, 9:16 PM IST
ಸುಳ್ಯ ತಾಲೂಕು ತೊಡಿಕಾನ ಗ್ರಾಮದ ಸನಿಹದಲ್ಲಿರುವ ದೇವರಗುಂಡಿ ಜಲಪಾತ ಪಕ್ರತಿಯ ಮಡಿಲಲ್ಲಿ ಕಂಗೊಳಿಸುತ್ತಿದ್ದು ಚಾರಣ ಪ್ರಿಯರನ್ನು ಪಕೃತಿ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸುತ್ತದೆ.
ತೊಡಿಕಾನ ಸನಿಹದ ದೇವರಗುಂಡಿ ಜಲಪಾತ ಎಲ್ಲಾ ಜಲಪಾತಗಳಂತಲ್ಲ ಇದು ವರ್ಷ ಪೂರ್ತಿ ಸುಮಾರು ೬೦ ಪೀಟ್ ಎತ್ತರದಿಂದ ಜಲಧಾರೆಯಾಗಿ ದುಮ್ಮಿಕ್ಕಿ ಹರಿಯುತ್ತದೆ.
ಬೇಸಿಗೆ ನೀರಿನ ಹರಿವಿನ ಪ್ರಮಾಣ ಒಂದಷ್ಟು ಕಡಿಮೆಯಾಗುತ್ತದೆ .ಸುತ್ತಮುತ್ತ ಪಕೃತಿದತ್ತವಾದ ತಂಪಾದ ಹವೆ. ಹಕ್ಕಿಗಳ ಇಂಚರ, ಕೋಗಿಲೆಗಳ ಗಾನ,ದುಂಬಿಗಳ ಝೇಂಕಾರ, ಜಲಧಾರೆಯ ಜುಳು ಜುಳು ನಿನಾದ ಮನಸಿಗೆ ಮುದನೀಡುತ್ತದೆ.
ಜಲಪಾತದ ಸೊಬಗನ್ನು ಆಸ್ವಾದಿಸುತ್ತ ಸಮಯ ಜಾರಿ ಹೋಗುವುದು ಅರಿವಿಗೆ ಬರುವುದಿಲ್ಲ.ಅಲ್ಲಿಂದ ಹೊರೊಡೋಣ ಎಂದರೆ ಮನಸೆ ಬಾರದು. ಸುತ್ತಮುತ್ತಲ ಹಸಿರ ಕೃಷಿ ತೋಟಗಳು ಜಲಪಾತದ ಸೊಬಗಿಗೆ ಇನ್ನಷ್ಟು ಮೆರುಗು ನೀಡುತ್ತಿವೆ.
ಇದು ಕೇವಲ ಪ್ರವಾಸಿ ತಾಣವಲ್ಲ.ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯ ದೇವಾಯಕ್ಕೆ ಹಾಗೂ ದೇವರಗುಂಡಿ ಜಲಪಾತ ಧಾರ್ಮಿಕ ಹಿನ್ನಲೆಗಳಿವೆ.
ಕಣ್ವ ಮಹಾಮುನಿ ತಪಸ್ಸು ಆಚರಿಸಿದ್ದು ಇದೆ ಪರಿಸರದಲ್ಲಿ ಶ್ರೀ ವಿಷ್ಣುವು ಮತ್ಸ್ಯರೂಪ ತಾಳಿ ಇಲ್ಲಿಂದ ತೊಡಿಕಾನ ದೇವಾಲಯದ ಮತ್ಸ ತಟಾದಲ್ಲಿ ಶಿವನ ವಾಹನವಾಗಿ ಶಿವನೊಂದಿಗೆ ಪ್ರತ್ಯಕ್ಷಗೊಂಡನು ಎಂಬ ನಂಬಿಕೆ ಇಲ್ಲಿಯ ಜನರಲ್ಲಿದೆ.
ತೊಡಿಕಾನ ದೇವಳದಲ್ಲಿ ವಿಶೇಷ ಪರ್ವ ದಿನಗಳಲ್ಲಿ ದೇವರಗುಂಡಿಯಿಂದ ತೀರ್ಥ ತೆಗೆದುಕೊಂಡು ಹೋಗಿ ಶ್ರೀ ದೇವರಿಗೆ ಅಭಿಷೇಕ ಮಾಡುತ್ತಾರೆ.ಈ ಹಿನ್ನೆಯಲ್ಲಿ ದೇವರಗುಂಡಿಯ ಪಾವಿತ್ರ್ಯವನ್ನು ಕಾಪಾಡಲು ದೇವಾಲಯದ ವತಿಯಿಂದ ಭಕ್ತಾಧಿಗಳಿಗೆ ಪ್ರವಾಸಿಗರಿಗೆ ಸೂಚನೆ ನೀಡಲಾಗುತ್ತಿದೆ.
ಸುಳ್ಯ ತಾಲೂಕು ಕೇಂದ್ರದಿಂದ ತೊಡಿಕಾನಕ್ಕೆ ಖಾಸಗಿ ಬಸ್ಸುಗಳ ಸಂಚಾರ ಇದೆ.ಇಲ್ಲವೆ ಸ್ಚಂತಹ ವಾಹನಗಳ ಮೂಲಕ ತೊಡಿಕಾನಕ್ಕೆ ಭೇಟಿ ನೀಡಬಹುದು.
– ತೇಜೇಶ್ಬರ್ ಕುಂದಲ್ಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
Zakir Hussain: 5 ರೂ ಕಾನ್ಸರ್ಟ್ ನಿಂದ 5 ಗ್ರ್ಯಾಮಿಯವರೆಗೆ…: ತಬಲಾ ಉಸ್ತಾದ್ ನಾದಮಯ ಪಯಣ
Benjamin Joby: “ಬೇರೆಯವರ ಯಶಸ್ಸು ನೋಡಿ ಅಳಬೇಡ..” ವೈರಲ್ ಆಗುತ್ತಿರುವ ಈ ಬಾಲಕ ಯಾರು?
MUST WATCH
ಹೊಸ ಸೇರ್ಪಡೆ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್
Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
H-1B visa: ಎಚ್1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.