ಘಟಬಂಧನ್‌ಗೆ ಗೌಡರೇ ಸೇತು
Team Udayavani, May 9, 2019, 6:07 AM IST
ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಒಕ್ಕೂಟ ರಚನೆಗೆ ಮುಂದಾಗಿರುವ ಟಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರರಾವ್ ಹಾಗೂ ವೈಎಸ್‌ಆರ್ ಕಾಂಗ್ರೆಸ್‌ನ ಮಖ್ಯಸ್ಥ ಜಗನ್‌ಮೋಹನ್‌ರೆಡ್ಡಿ ಅವರ ಮನವೊಲಿಸಿ ಮಹಾಘಟ್ಬಂಧನ್ ತೆಕ್ಕೆಗೆ ಸೆಳೆಯಲು ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ.
ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ಈ ಕುರಿತು ಟಿಆರ್‌ಎಸ್‌ನ ಚಂದ್ರಶೇಖರರಾವ್ ಹಾಗೂ ವೈಆರ್‌ಎಸ್‌ನ ಜಗನ್‌ಮೋಹನ್‌ರೆಡ್ಡಿ ಜತೆ ಮಾತನಾಡುವಂತೆ ರಾಹುಲ್ ಮನವಿ ಮಾಡಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಟಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ್ ಅವರು ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿದ ಮಾಹಿತಿ ಪಡೆದುಕೊಂಡಿರುವ ರಾಹುಲ್ಗಾಂಧಿ, ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಒಕ್ಕೂಟ ಸ್ಥಾಪನೆಗಿಂತ ಬಿಜೆಪಿ ದೂರ ಇಡುವ ಗುರಿಯೊಂದಿಗೆ ಮಹಾಘಟ್ಬಂಧನ್‌ನಲ್ಲೇ ಸೇರುವುದು ಸೂಕ್ತ ಎಂದಿದ್ದಾರೆ.
ಟಿಆರ್‌ಎಸ್, ವೈಎಸ್‌ಆರ್, ಎಸ್‌ಪಿ-ಬಿಎಸ್‌ಪಿ, ಟಿಎಂಸಿ, ಬಿಜೆಡಿ, ಎಎಪಿ, ಎಡ ಪಕ್ಷಗಳು ಮಹಾಘಟ್ಬಂಧನ್ ಜತೆಗೂಡಿದರೆ ಅಗತ್ಯವಾದರೆ ಮೈತ್ರಿಕೂಟದ ಹೆಸರು ಸರ್ವಸಮ್ಮತವಾಗಿ ಬದಲಾವಣೆ ಸಹ ಮಾಡಬಹುದು. ಆಗ ಬಿಜೆಪಿ ವಿರುದ್ಧ ನಿಜಕ್ಕೂ ಒಂದು ಪ್ರಬಲ ಶಕ್ತಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ರಾಹುಲ್ಗಾಂಧಿ, ದೇವೇಗೌಡರಿಗೆ ತಿಳಿಸಿದ್ದಾರೆ.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಜತೆಗೂ ರಾಹುಲ್ಗಾಂಧಿ ಮಾತನಾಡಿದ್ದು, ಈಗಾಗಲೇ ಡಿಎಂಕೆ ಮಹಾಘಟ್ಬಂಧನ್ ಜತೆ ಇರುವುದರಿಂದ ಚಂದ್ರಶೇಖರರಾವ್ ಅವರ ಭೇಟಿಗೆ ಒಪ್ಪಿಲ್ಲ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯ ಐದು ಹಂತಗಳ ಮತದಾನದ ನಂತರದ ಪರಿಸ್ಥಿತಿಯಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬರುವ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಂ ಮಾಧವ್ ಸೇರಿ ಬಿಜೆಪಿ ನಾಯಕರೇ ಅನುಮಾನ ವ್ಯಕ್ತಪಡಿಸುತ್ತಿರುವುದರಿಂದ ಎಲ್ಲರೂ ಒಂದಾದರೆ ಬಿಜೆಪಿಯೇತರ ಮೈತ್ರಿಕೂಟ ಅಧಿಕಾರ ಹಿಡಿಯುವ ಸಾಧ್ಯತೆಯೂ ಇರುವುದರಿಂದ ಟಿಆರ್‌ಎಸ್-ವೈಎಸ್‌ಆರ್ ತಮ್ಮ ತೆಕ್ಕೆಗೆ ಸೆಳೆಯುವುದು ಸೂಕ್ತ ಎಂಬ ಅಭಿಪ್ರಾಯವನ್ನು ಕಾಂಗ್ರೆಸ್ ಹೊಂದಿದೆ. ಇದೇ ಕಾರಣಕ್ಕೆ ಚಂದ್ರಶೇಖರ ರಾವ್ ಹಾಗೂ ಜಗನ್‌ಮೋಹನ್‌ರೆಡ್ಡಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಬಾಂಧವ್ಯ ಹೊಂದಿರುವ ದೇವೇಗೌಡರಿಗೆ ತಿಳಿಸಿದೆ ಎಂದು ತಿಳಿದು ಬಂದಿದೆ.
ನಿಲುವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.