ಕರಾವಳಿಗೆ 3 ಬಹೂಪಯೋಗಿ ಬಂದರು: ಮಂಗಳೂರು, ಮಲ್ಪೆ, ಬೈಂದೂರಿನಲ್ಲಿ ಅಭಿವೃದ್ಧಿ ಯೋಜನೆ
ಜಲಸಾರಿಗೆ ಮಂಡಳಿಯಿಂದ ಕೇಂದ್ರ ಸರಕಾರಕ್ಕೆ ಪ್ರಸ್ತಾವ
Team Udayavani, Mar 11, 2024, 7:30 AM IST
ಮಂಗಳೂರು: ಕರಾವಳಿ ಕರ್ನಾ ಟಕದ ಆರ್ಥಿಕ ಹೆಬ್ಟಾಗಿಲಾಗಿರುವ ಮೀನುಗಾರಿಕೆ ಬಂದರನ್ನು ಬಹು ಆಯಾಮದಲ್ಲಿ ಬಳಕೆಗೆ ಯೋಗ್ಯವಾಗಿಸುವ ಮಹತ್ವದ ಬಹೂಪಯೋಗಿ ಬಂದರು (ಮಲ್ಟಿ- ಪರ್ಪಸ್ ಹಾರ್ಬರ್) ಯೋಜನಾ ಪ್ರಸ್ತಾವನೆ ಯೊಂದು ಕೇಂದ್ರ ಸರ ಕಾರಕ್ಕೆ ಸಲ್ಲಿಕೆಯಾಗಿದೆ.
ಉಡುಪಿ ಜಿಲ್ಲೆಯ ಬೈಂದೂರು ಮತ್ತು ಮಲ್ಪೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿ ನಲ್ಲಿ ಈ ಬಹೂಪಯೋಗಿ ಬಂದರು ಅಭಿವೃದ್ಧಿ ಪಡಿಸುವ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ರಾಜ್ಯದ ಜಲಸಾರಿಗೆ ಮಂಡಳಿ ಕೇಂದ್ರ ಸರಕಾರದ ಸಾಗರಮಾಲಾ ಕೋಶಕ್ಕೆ ಅನುಮೋದನೆಗಾಗಿ ಸಲ್ಲಿಸಿದೆ.
ಲಾಭವೇನು?
ಹಾಲಿ ಬಂದರನ್ನು ಪ್ರವಾ ಸೋದ್ಯಮ, ಕೈಗಾರಿಕೆ ಸ್ನೇಹಿಯಾಗಿ ರೂಪಿಸಿದರೆ ಆರ್ಥಿಕ ಚಟುವಟಿಕೆಯ ತಾಣವಾಗಲಿದೆ. ಪ್ರಯಾಣಿಕ ಬೋಟ್ ವ್ಯವಸ್ಥೆಯನ್ನು ಪರಿಚಯಿ ಸುವ ಸಾಧ್ಯತೆಗಳಿವೆ. ಸ್ಥಳೀಯ ವ್ಯಾಪಾರ-ವಹಿವಾಟು, ಉದ್ಯೋ ಗಕ್ಕೆ ಅನುಕೂಲ. ಸರ್ವ ವಿಧದಲ್ಲಿಯೂ ಬಂದರು ಜನರಿಗೆ ಸಿಗುವಂತಾಗುವುದು ಈ ಪರಿಕಲ್ಪನೆಯ ಉದ್ದೇಶ.
3 ಕಿರು ಬಂದರಿಗೆ ವಾಣಿಜ್ಯ ರೂಪ!
ಈ ಮಧ್ಯೆ ರಾಜ್ಯದ ಕಿರು ಬಂದರುಗಳ ವಾಣಿಜ್ಯೀಕರಣ ಹಾಗೂ ಸುಸ್ಥಿರ ಕಾರ್ಯನಿರ್ವಹಣೆಗಾಗಿ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ. ಪ್ರಥಮ ಹಂತದಲ್ಲಿ ಕಾರವಾರ, ಮಲ್ಪೆ ಹಾಗೂ ಹಳೆ ಮಂಗಳೂರು ಬಂದರುಗಳಲ್ಲಿ ಪ್ರಸ್ತುತ ಲಭ್ಯವಿರುವ ಜೆಟ್ಟಿ ಹಾಗೂ ಸಾಗರಮಾಲಾ ಯೋಜನೆಯಡಿ ಹಳೆ ಮಂಗಳೂರು ಬಂದರಿನಲ್ಲಿ ನಿರ್ಮಾಣ ಹಂತದಲ್ಲಿರುವ ಕೋಸ್ಟಲ್ ಬರ್ತ್‌ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯೀಕ ರಣಗೊಳಿಸಿ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಮೂಲಕ ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಿ ಮೀನುಗಾರಿಕೆ ಹಾಗೂ ವಾಣಿಜ್ಯ ವ್ಯವಹಾರ ಅಭಿವೃದ್ದಿ ಹೊಂದಿ ಸ್ಥಳೀಯರಿಗೆ ಉದ್ಯೋಗವಕಾಶ ಲಭಿಸಲು ಸಾಧ್ಯ ಎಂಬುದು ಸರಕಾರದ ಲೆಕ್ಕಾಚಾರ.
3 ಬಂದರಿನಲ್ಲಿ “ಸರ್ವಋತು ಡೀಪ್ ವಾಟರ್ ಗ್ರೀನ್ ಫೀಲ್ಡ್’ ಯೋಜನೆ
ರಾಜ್ಯದಲ್ಲಿ ಬಂದರು ಅವಲಂಬಿತ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ದಿಶೆಯಲ್ಲಿ “ಸರ್ವಋತು ಡೀಪ್ ವಾಟರ್ ಗ್ರೀನ್ ಫೀಲ್ಡ್’ ಬಂದರು ಅಭಿವೃದ್ಧಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದರಂತೆ ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 4,118 ಕೋ.ರೂ. ಮೊತ್ತದಲ್ಲಿ 30 ಎಂಟಿಪಿಎ ಸಾಮರ್ಥ್ಯದ ಬಂದರನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ಕಳೆದ ವರ್ಷ ನವೆಂಬರ್‌ನಲ್ಲಿ ಒಡಂಬಡಿಕೆ ಮಾಡಲಾಗಿದೆ. ಡಿಪಿಆರ್ ಸಹಿತ ನಿರ್ವಹಣೆಗೆ ಸ್ವತಂತ್ರ ಎಂಜಿನಿಯರ್ ನೇಮಕ ಪ್ರಕ್ರಿಯೆ ಜಾರಿಯಲ್ಲಿದೆ.
ಪಾವಿನಕುರ್ವೆಯಲ್ಲಿ 14ಎಂಟಿಪಿಎ ಸಾಮರ್ಥ್ಯದಲ್ಲಿ ಅಂದಾಜು 3047 ಕೋ.ರೂ. ವೆಚ್ಚದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿಗೆ ಉದ್ದೇಶಿಸಲಾಗಿದೆ.
ಮಂಕಿಯಲ್ಲಿ ಬಹೂಪಯೋಗಿ ಬಂದರಿನ ಅಭಿವೃದ್ಧಿ ಯೋಜನೆ ಇದೆ. ಕಾರ್ಯಸಾಧ್ಯತಾ ವರದಿ ಸಿದ್ಧವಾಗುತ್ತಿದೆ. ಜತೆಗೆ ಈ ಬಂದರಿಗೆ ಕೊಂಕಣ ರೈಲ್ವೇಯಿಂದ (ಕೆಆರ್‌ಸಿಎಲ್) ರೈಲು ಸಂಪರ್ಕ ಕಲ್ಪಿಸುವಂತೆ ಕೋರಲಾಗಿದೆ.
ಏನಿದು ಪ್ರಸ್ತಾವ?
ಕೆಲವು ಮೀನುಗಾರಿಕೆ ಬಂದರುಗಳು ಕೇವಲ ವಾಣಿಜ್ಯ ವ್ಯವಹಾರದ ತಾಣವಾಗಿ ಮಾತ್ರ ಉಳಿದಿಲ್ಲ. ಬದಲಾಗಿ ಆ ಸ್ಥಳದ ಆಸುಪಾಸನ್ನು ಪರಿಸರ ಸ್ನೇಹಿಯಾಗಿ- ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗಿದೆ. ಪ್ಯಾಸೆಂಜರ್ ಬೋಟ್ ಸಹಿತ ವಿವಿಧ ಆಯಾಮದಲ್ಲಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೇ ಆಶಯದೊಂದಿಗೆ ರಾಜ್ಯದ 3 ಸ್ಥಳವನ್ನು “ಮಲ್ಟಿ ಪರ್ಪಸ್ ಹಾರ್ಬರ್’ ಎಂಬ ಪರಿಕಲ್ಪನೆಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಎಲ್ಲೆಲ್ಲಿ ಅಭಿವೃದ್ಧಿ ?
ಮಂಗಳೂರಿನಲ್ಲಿ ಈಗ ಇರುವ ಮೀನು ಗಾರಿಕೆ ಬಂದರು ಸಮೀಪ ನೇತ್ರಾವತಿ ನದಿ ಪಾತ್ರದಲ್ಲಿ (ಹೊಗೆ ಬಜಾರ್) ಹೊಸ ಯೋಜನೆಯ ಬಗ್ಗೆ ಅಂದಾಜಿಸಲಾಗಿದೆ. ಮಲ್ಪೆಯಲ್ಲಿಯೂ ಈಗಿನ ಬಂದರಿನ ಪಕ್ಕದಲ್ಲಿ ಹೊಸ ಯೋಜನೆ ಉದ್ದೇಶವಿದ್ದರೆ, ಬೈಂದೂರಿನಲ್ಲಿ ಹೊಸದಾಗಿಯೇ ಸಾಕಾರವಾಗಲಿದೆ.
ಮಂಗಳೂರು, ಬೈಂದೂರು, ಮಲ್ಪೆಯಲ್ಲಿ ಬಹು ಉಪಯೋಗಿ ಬಂದರನ್ನು ಅಭಿವೃದ್ಧಿ ಪಡಿಸುವ ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ. ಯೋಜನೆ ಗಳಿಗೆ ಅನುಮೋದನೆ ಶೀಘ್ರ ದೊರಕುವ ನಿರೀಕ್ಷೆ ಇದೆ. ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.
– ಕ್ಯಾ| ಸ್ವಾಮಿ, ನಿರ್ದೇಶಕರು, ಕರ್ನಾಟಕ ಜಲಸಾರಿಗೆ ಮಂಡಳಿ
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.