ತ್ರಿವಿಕ್ರಮ ನಿರ್ಮಾಪಕರ ಎರಡು ಸಿನಿಮಾಗೆ ಧನಂಜಯ್ ಹೀರೋ
ಮುಂದಿನ ವರ್ಷ ಒಂದೇ ಬಾರಿಗೆ ಚಿತ್ರೀಕರಣ ಶುರು
Team Udayavani, Jun 12, 2020, 4:52 AM IST
“ಡಾಲಿ’ ಖ್ಯಾತಿಯ ನಟ ಧನಂಜಯ್ ಸದ್ಯದ ಮಟ್ಟಿಗೆ ಕನ್ನಡದ ಬೇಡಿಕೆ ನಟ. “ಟಗರು’ ಬಳಿಕ “ಡಾಲಿ’ ಎಂದೇ ಖ್ಯಾತಿಯಾದ ಧನಂಜಯ್, ಆ ಬಳಿಕ “ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕವೂ ಮಾಸ್ ಪ್ರಿಯರಿಗೆ ಮತ್ತಷ್ಟು ಹತ್ತಿರ ವಾದರು. ಸದ್ಯಕ್ಕೆ “ದುನಿಯಾ’ ವಿಜಯ್ ಅಭಿನಯದ “ಸಲಗ’ದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿರುವ ಧನಂಜಯ್, ಆ ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
ಬೇಡಿಕೆ ಹೆಚ್ಚಿಸಿಕೊಂಡಿರುವ ಧನಂಜಯ್ ಅವರೀಗ ಮತ್ತೆರೆಡು ಸಿನಿಮಾಗಳನ್ನು ಒಪ್ಪಿ ದ್ದಾರೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ಒಂದು ಕಡೆ ವಿಲನ್ ಆಗಿ, ಇನ್ನೊಂದು ಕಡೆ ಹೀರೋ ಆಗಿಯೂ ಅವರು ಮಿಂಚುತ್ತಿದ್ದಾರೆ.ಈ ಎರಡು ಶೇಡ್ ಪಾತ್ರಗಳಲ್ಲೂ ಧನಂಜಯ್ ಮೆಚ್ಚುಗೆಯಾಗುತ್ತಿದ್ದಾರೆ. ಈಗ ಧನಂಜಯ್ ಕೈಯಲ್ಲಿ ಒಂದಲ್ಲ, ಎರಡಲ್ಲ, ಬರೋಬ್ಬರಿ ಆರು ಚಿತ್ರಗಳು ಕೈಯಲ್ಲಿವೆ ಎಂದರೆ ನಂಬಲೇಬೇಕು.
ಆ ಸಾಲಿಗೆ ಈಗ ಅವರು ಮತ್ತೆ ರೆಡು ಸಿನಮಾಗಳನ್ನೂ ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಸಿನಿಮಾ ಪ್ರೀತಿ ಇಟ್ಟುಕೊಂಡಿರುವ “ತ್ರಿವಿಕ್ರಮ’ ಚಿತ್ರದ ನಿರ್ಮಾಪಕ ಸೋಮಣ್ಣ ಅವರು ಧನಂಜಯ್ ಅಭಿನಯದ ಎರಡೂ ಚಿತ್ರಕ್ಕೂ ಮುಂಗಡ ಹಣ ಕೊಟ್ಟು ನಿರ್ಮಾಣ ಮಾಡಲು ಮುಂದಾಗಿದ್ದಾರೆ. ತಮ್ಮ ಗೌರಿ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ಡಾಲಿಯ ಎರಡೂ ಸಿನಿಮಾಗಳು ನಿರ್ಮಾಣವಾಗುತ್ತಿವೆ.
ಮುಂದಿನ ವರ್ಷ ಈ ಚಿತ್ರಗಳು ಸೆಟ್ಟೇರಲಿವೆ. ವಿಶೇಷ ಅಂದರೆ, ಮುಂದಿನ ವರ್ಷವೇ ಈ ಎರಡು ಚಿತ್ರಗಳು ಒಮ್ಮೆಲೆ ಚಿತ್ರೀಕರಣಕ್ಕೆ ಅಣಿಯಾಗಲಿವೆ. ವಿಭಿನ್ನ ಜಾನರ್‌ನ ಈ ಎರಡು ಚಿತ್ರಗಳಿಗೆ ನಿರ್ದೇ ಶಕರು ಯಾರು ಅನ್ನು ವುದನ್ನು ನಿರ್ಮಾಪಕರು ಸದ್ಯಕ್ಕೆ ಸಸ್ಪೆನ್ಸ್ ನಲ್ಲಿಟ್ಟಿದ್ದಾರೆ. ಸದ್ಯಕ್ಕೆ ಸೋಮಣ್ಣ ತಮ್ಮ ಗೌರಿ ಎಂಟರ್‌ಟೈನರ್ ಬ್ಯಾನರ್‌ನಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ಅವರ “ತ್ರಿವಿಕ್ರಮ’ ಚಿತ್ರ ನಿರ್ಮಿಸುತ್ತಿದ್ದಾರೆ.
ಈ ಚಿತ್ರ ಬಹುತೇಕಮುಗಿಯುವ ಹಂತ ತಲುಪಿದ್ದು, ಎರಡು ಹಾಡುಗಳ ಬಾಕಿ ಉಳಿದಿದೆ. ಲಾಕ್‌ಡೌನ್ ಬಳಿಕ ಈ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಆ ನಂತರ ಸೋಮಣ್ಣ ಕೋಟಿಗಳ ವೆಚ್ಚದಲ್ಲಿ ಧನಂಜಯ್ ಚಿತ್ರಕ್ಕೆ ಮುಂದಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.