ಅಭಿವೃದ್ಧಿಗೆ ಕೊರೊನಾ ಲಾಕ್‌ಡೌನ್ ಅಡ್ಡಿ
ಅರ್ಧಕ್ಕೆ ನಿಂತಿವೆ 340ಕ್ಕೂ ಅಧಿಕ ಕಾಮಗಾರಿಗಳು | ರಸ್ತೆ, ಚರಂಡಿ, ನೀರು ಪೂರೈಕೆಗೆ ತೊಂದರೆ
Team Udayavani, Apr 8, 2020, 11:28 AM IST
ಧಾರವಾಡ: ಶ್ರೀನಗರ-ಗಣೇಶನಗರ ಮಧ್ಯೆ ಅರ್ಧಕ್ಕೆ ನಿಂತಿರುವ ಸಿಮೆಂಟ್ ರಸ್ತೆ ಕಾಮಗಾರಿ
ಧಾರವಾಡ: ಕೊರೊನಾ ಮಹಾಮಾರಿ ಸದ್ಯ ಜಿಲ್ಲೆಯ ಜನರನ್ನು ಮಾತ್ರ ಪೀಡಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದರೂ ಇದರ ಕಾಟ ದೀರ್ಘಾವಧಿಯಲ್ಲಿ ಬಡ-ಮಧ್ಯಮ ವರ್ಗದವರನ್ನು ಬೇತಾಳನಂತೆ ಕಾಡುವುದು ನಿಶ್ಚಯವಾಗಿದೆ. ಜಿಲ್ಲೆಯಲ್ಲಿ ಕೊರೊನಾ ಲಾಕ್‌ಡೌನ್‌ನಿಂದ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಕುಸಿತ ಕಂಡಿದ್ದು, ಮೂಲಭೂತ ಸೌಕರ್ಯ ಯೋಜನೆಗಳು, ನಿರಾಶ್ರಿತರ ಪುನರ್ವಸತಿ, ನೆರೆಹಾವಳಿಯಿಂದಾದ ಹಾನಿ ನಿಯಂತ್ರಣಕ್ಕೆ ಸಿದ್ಧಗೊಂಡಿದ್ದ ಬಹುಕೋಟಿ ಮೌಲ್ಯ ಯೋಜನೆಯ ಪ್ರಸ್ತಾವನೆಗಳು ಸದ್ಯಕ್ಕೆ ಮೂಲೆ ಸೇರಿದ್ದು 340ಕ್ಕೂ ಅಧಿಕ ಕಾಮಗಾರಿಗಳು ಸದ್ಯಕ್ಕೆ ಅರ್ಧಕ್ಕೆ ನಿಂತು ಹೋಗಿವೆ.
ಮಾರ್ಚ್ ಅಂತ್ಯಕ್ಕೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ತಮ್ಮ ಹಣವನ್ನು ಸರ್ಕಾರದಿಂದ ಮರಳಿ ಪಡೆಯುವ ಆತುರದಲ್ಲಿದ್ದ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಹೊಸ ಹುರುಪಿನೊಂದಿಗೆ ಪ್ರತಿ ವರ್ಷದ ಏಪ್ರಿಲ್ ತಿಂಗಳಿನಿಂದ ಆರಂಭಗೊಳ್ಳಬೇಕಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೂ ಹಿನ್ನಡೆಯಾದಂತಾಗಿದೆ.
ಹಳ್ಳಿಗಳಲ್ಲಿ ಇಷ್ಟೊತ್ತಿಗೆ ಕೆರೆ ಹೂಳೆತ್ತುವುದು, ನಾಲೆಗಳ ನವೀಕರಣ, ಹೊಲದ ರಸ್ತೆಗಳ ದುರಸ್ತಿ, ಕಿರು ಸೇತುವೆಗಳ ನಿರ್ಮಾಣ ಮತ್ತು ದುರಸ್ತಿ, ಕೆರೆ ತೋಬುಗಳ ದುರಸ್ತಿ ಸೇರಿದಂತೆ ನೂರೆಂಟು ಕಾಮಗಾರಿಗಳು ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಲಾಕ್ ಡೌನ್ ಬಿದ್ದಿರುವುದರಿಂದ ಮುಂದಿನ ದಿನಗಳಲ್ಲಿ ಈ ಎಲ್ಲ ಯೋಜನೆಗಳ ಕೊರತೆಯಿಂದ ಜಿಲ್ಲೆಯ ಜನರು ಸಂಕಷ್ಟ ಅನುಭವಿಸಬೇಕಿದೆ. 133 ಗ್ರಾಮೀಣ ರಸ್ತೆಗಳ ಕಾಮಗಾರಿ ಸ್ಥಗಿತ: ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ ಮತ್ತು ಪಂಚಾಯತರಾಜ್ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿ ಕಳೆದ ವರ್ಷ ತೀವ್ರ ಮಳೆಗೆ ಸಿಲುಕಿ ತೊಂದರೆಗೊಳಗಾಗಿದ್ದ ನೂರಕ್ಕೂ ಹೆಚ್ಚು ರಸ್ತೆಗಳ ದುರಸ್ತಿ ಕಾರ್ಯಗಳು ಅರ್ಧಕ್ಕೆ ನಿಂತಿದೆ. ಇನ್ನು 87 ಪ್ರಧಾನ ಸೇತುವೆಗಳು, 33ಕ್ಕೂ ಹೆಚ್ಚು ಕಿರು ಸೇತುವೆಗಳ ದುರಸ್ತಿ ಮತ್ತು ಪಕ್ಕಾ ಕಾಮಗಾರಿ ಮಾಡುವ ಯೋಜನೆಗಳು ಸದ್ಯಕ್ಕೆ ಸ್ಥಗಿತಗೊಂಡಿವೆ.
ಅಷ್ಟೆಯಲ್ಲ 61 ಯೋಜಿತ ಕುಡಿಯುವ ನೀರಿನ ಯೋಜನೆಗಳ ಕಾಮಗಾರಿಗಳು ಸದ್ಯಕ್ಕೆ ಸ್ಥಗಿತಗೊಂಡಿದ್ದು, ಬೇಸಿಗೆಯಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ
ದಟ್ಟವಾಗುತ್ತಿದೆ. ಧಾರವಾಡ-ಬೆಳಗಾವಿ ಮಧ್ಯದ ಇನಾಂ ಹೊಂಗಲ ಹಳ್ಳದ ಸೇತುವೆ ನೆರೆಯಲ್ಲಿ ಕಿತ್ತು ಹೋಗಿದ್ದು, ಅದನ್ನು ಪರಿಪೂರ್ಣವಾಗಿ ದುರಸ್ತಿ ಮಾಡಲು ಕನಿಷ್ಠ 3 ತಿಂಗಳ ಕಾಲಾವಕಾಶ ಬೇಕು. ಇದೀಗ ಲಾಕ್ ಡೌನ್ ಮಧ್ಯೆಯೇ ಒಂದು ತಿಂಗಳು ಕಳೆದು ಹೋಗಿದ್ದರಿಂದ ಬರುವ ಮಳೆಗಾಲದುದ್ದಕ್ಕೂ ಈ ರಸ್ತೆಯಲ್ಲಿ ಸಂಚರಿಸುವವರಿಗೆ ಸಂಕಷ್ಟ ನಿಶ್ಚಿತವಾದಂತಾಗಿದೆ. ಅಳ್ನಾವರಕ್ಕೆ ನೀರು ಸರಬುರಾಜು ಮಾಡುವ ಡೌಗಿ ನಾಲಾ ಮತ್ತು ಇಂದಿರಾ ಜಲಾಶಯದ ದುರಸ್ತಿ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ.
ಹುಬ್ಬಳ್ಳಿ-ಧಾರವಾಡ ನಗರಗಳಲ್ಲೂ: ಇನ್ನು ನಗರಾಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಸ್ತೆ, ಚರಂಡಿ, ಮೇಲ್ಸೇತುವೆ, ಒಳಚರಂಡಿ, ಉದ್ಯಾನವನಗಳ ಅಭಿವೃದ್ಧಿ ಮತ್ತು ಕೆರೆಗಳ ಅಭಿವೃದ್ಧಿಗೂ ಸದ್ಯಕ್ಕೆ ಕೊಕ್ ನೀಡಲಾಗಿದೆ. ಧಾರವಾಡದ ಶ್ರೀನಗರದಿಂದ ಗಣೇಶ ನಗರದ ರೈಲ್ವೆ ಕ್ರಾಸಿಂಗ್‌ವರೆಗೂ ನಡೆಯುತ್ತಿದ್ದ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಧಾರವಾಡ-ಹಳಿಯಾಳ ಮಧ್ಯದ ರಾಜ್ಯ ಹೆದ್ದಾರಿ 28ರಲ್ಲಿ ಗಣೇಶ
ನಗರದಿಂದ ಹಳ್ಳಿಗೇರಿ ಗ್ರಾಮದವರೆಗೂ ನಡೆಯುತ್ತಿದ್ದ ರಸ್ತೆ ಮೇಲ್ದರ್ಜೆಗೇರಿಸುವ ಮತ್ತು ಡಾಂಬರೀಕರಣ ಕಾಮಗಾರಿ ಅರ್ಧಕ್ಕೆ ನಿಂತು ಹೋಗಿದೆ. ಮರಾಠಾ
ಕಾಲೋನಿಯಲ್ಲಿ ಕಿರು ರಸ್ತೆಗಳ ದುರಸ್ತಿ, ಕಮಲಾಪೂರ, ಮಾಳಾಪೂರ ಕಿರು ರಸ್ತೆಗಳ ದುರಸ್ತಿ, ಟೆಂಡರ್‌ಶ್ಯೂರ್ ರಸ್ತೆಯ ಉಳಿದ ಕಾಮಗಾರಿಗಳು, ಧಾರವಾಡದ ಜ್ಯುಬಿಲಿ ವೃತ್ತದಿಂದ ನರೇಂದ್ರ ಬೈಪಾಸ್‌ವರೆಗಿನ ಚತುಷ್ಪಥ ರಸ್ತೆಯ ಉಳಿದ ಕಾಮಗಾರಿಗಳು ಅಷ್ಟೇಯಲ್ಲ ಧಾರವಾಡದಿಂದ ಹಳ್ಳಿಗಳನ್ನು ಸಂಪರ್ಕಿಸುವ ತುರ್ತು 30ಕ್ಕೂ ಹೆಚ್ಚು ರಸ್ತೆಗಳ ದುರಸ್ತಿ ಕಾರ್ಯಕ್ಕೂ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಹುಬ್ಬಳ್ಳಿಯ ಶಿರೂರು ಪಾರ್ಕ್ ರಸ್ತೆ ಸಂಪರ್ಕ ರಸ್ತೆ ಅರ್ಧಕ್ಕೆ ನಿಂತರೆ, ಕುಸುಗಲ್ ರಸ್ತೆಯ ಬಡಾವಣೆಗಳಿಗೆ ಚರ್ಚ್‌ನಿಂದ ಸಂಪರ್ಕ ಕಲ್ಪಿಸುವ ರಸ್ತೆ ಸಿಮೆಂಟ್ ಕಾಮಗಾರಿ ಬಾಕಿ ಉಳಿದಿದೆ. ಹಳೆ ಹುಬ್ಬಳ್ಳಿಯಲ್ಲಿನ 800 ಮೀ. ಒಳಚರಂಡಿ ಕಾಮಗಾರಿ ಹಾಗೆ ನಿಂತಿದೆ. ಉಣಕಲ್‌ನಿಂದ ಸಾಯಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಪುಟ್‌ಪಾತ್ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಕೊರೊನಾ ಲಾಕಡೌನ್‌ನಿಂದ ಸ್ಥಗಿತಗೊಂಡಿರುವುದು ಗೊತ್ತಿರುವ ಸಂಗತಿಯೇ. ಆದರೆ ಲಾಕ್‌ಡೌನ್ ನಂತರ ಏನೆಲ್ಲ ಕ್ರಮ ವಹಿಸಬೇಕು ಎನ್ನುವ ಕುರಿತು ಸರಕಾರದಿಂದ ಯಾವುದೇ ರೀತಿಯ ನಿರ್ದೇಶನಗಳು ಬಂದಿಲ್ಲ. ಈ ಕುರಿತು ಸದ್ಯಕ್ಕೆ ಏನೂ ಹೇಳಲಾಗದು.
.ದೀಪಾ ಚೋಳನ್,
ಜಿಲ್ಲಾಧಿಕಾರಿ, ಧಾರವಾಡ
ಕೊರೊನಾ ನೆಪದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಳ್ಳದಂತೆ ಜಿಲ್ಲಾಡಳಿತ ಎಚ್ಚರಿಕೆ ವಹಿಸಬೇಕು. ಕೊರೊನಾ ಅಲ್ಪಾವಧಿ ಸಮಸ್ಯೆಯಾದರೆ
ಅಭಿವೃದ್ಧಿ ದೀರ್ಘಾವಧಿ ಸಮಸ್ಯೆ. ಜಿಲ್ಲೆಯ ಮೂಲಸೌಕರ್ಯಗಳ ಅಗತ್ಯ ಕಾಮಗಾರಿಗಳನ್ನು ಕಾಲಮಿತಿ ಹಾಕಿಕೊಂಡು ಮುಗಿಸಬೇಕು.
ಶ್ರೀಶೈಲಗೌಡ ಕಮತರ,
ಜೆಡಿಯು ಮುಖಂಡ
ಬಸವರಾಜ ಹೊಂಗಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್ ಲಾಡ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.