Health: ಡಯಾಲಿಸಿಸ್ ಕೇಂದ್ರಕ್ಕೆ ಬೇಕಿದೆ ಚಿಕಿತ್ಸೆ- ಕಿಡ್ನಿ ವೈಫಲ್ಯಕ್ಕೊಳಗಾದವರ ಫಜೀತಿ
-ವಾರ್ಷಿಕವಾಗಿ 50 ಸಾವಿರ ಮಂದಿ ಬಲಿ
Team Udayavani, Oct 1, 2023, 8:06 PM IST
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿರುವ 169 ಡಯಾಲಿಸಿಸ್ ಯೂನಿಟ್‌ಗಳಲ್ಲಿ ನಿರ್ವಹಣೆ ಕೊರತೆಯಿಂದ ಸೂಕ್ತ ಸೇವೆ ಸಿಗದೇ ಕಿಡ್ನಿ ವೈಫಲ್ಯಕ್ಕೊಳಗಾದ ಸಾವಿರಾರು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿರುವ ಡಯಾಲಿಸಿಸ್‌ನ ಪ್ರತಿ ಯೂನಿಟ್‌ಗಳಲ್ಲಿ ಓರ್ವ ನೆಫ್ರೋಲಾಜಿಸ್ಟ್ , 1 ಎಂಬಿಬಿಎಸ್ ವೈದ್ಯರು, 3 ಬೆಡ್‌ಗೆ ಒಬ್ಬ ಡಯಾಲಿಸಿಸ್ ಟೆಕ್ನಿಷಿಯನ್ ಇರಬೇಕೆಂಬ ನಿಯಮವಿದೆ. ಆದರೆ, ಸದ್ಯ 120 ಡಯಾಲಿಸಿಸ್ ಯೂನಿಟ್‌ಗಳಲ್ಲಿ ನೆಪ್ರೋಲಾಜಿಸ್ಟ್ ವೈದ್ಯರೇ ಇಲ್ಲ. ತಜ್ಞ ವೈದ್ಯರು ಮಾಡಬೇಕಿರುವ ಡಯಾಲಿಸಿಸ್ ಪ್ರಕ್ರಿಯೆಗಳನ್ನು ಟೆಕ್ನಿಷಿಯನ್‌ಗಳ ಕೈಯಲ್ಲೇ ಮಾಡಿಸಲಾಗುತ್ತಿದೆ. ಇತ್ತ ಡಯಾಲಿಸಿಸ್ ಯೂನಿಟ್‌ಗಳ ನಿರ್ವಹಣೆ ಕೊರತೆಯಿಂದ ಕಿಡ್ನಿ ವೈಫಲ್ಯಕ್ಕೊಳಗಾದ 10 ಸಾವಿರಕ್ಕೂ ಅಧಿಕ ಮಂದಿ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿದ್ದಾರೆ.
ಡಯಾಲಿಸಿಸ್ ಯೂನಿಟ್‌ನ ಕೊರತೆಗಳೇನು ?: ಬಹುತೇಕ ಯೂನಿಟ್‌ಗಳಲ್ಲಿ ಅರ್ಧದಷ್ಟು ಎಂಬಿಬಿಎಸ್ ವೈದ್ಯರಿಲ್ಲ. ಇತ್ತ ಟೆಕ್ನಿಷಿಯನ್‌ಗಳಿಗೆ 2 ವರ್ಷಗಳಿಂದ ಗುತ್ತಿಗೆ ಸಂಸ್ಥೆಗಳು ಸಮಯಕ್ಕೆ ಸರಿಯಾಗಿ ವೇತನ ಪಾವತಿಸದೇ ಕೆಲಸಕ್ಕೆ ಗೈರಾಗಿ ಪ್ರತಿಭಟನೆಗೆ ಮುಂದಾಗುತ್ತಲೇ ಇದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ವ್ಯವಸ್ಥೆ ಇದ್ದರೂ ನಿರ್ವಹಣಾ ವೈಫಲ್ಯದಿಂದ ನೊಂದು ಬಡ ರೋಗಿಗಳು ದುಡ್ಡು ತೆತ್ತು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ ಕಿಡ್ನಿ ವೈಫಲ್ಯಕ್ಕೆ ವಾರ್ಷಿಕವಾಗಿ 50 ಸಾವಿರ ಮಂದಿ ಬಲಿಯಾಗುತ್ತಿದ್ದಾರೆ ಎನ್ನಲಾಗಿದೆ.
ಸಿಂಗಲ್ ಯೂಸರ್ ಡಯಾಲಿಸಿಸ್ ಲಭ್ಯ
ಇದುವರೆಗೆ ಖಾಸಗಿಯಲ್ಲಿ ಮಾತ್ರ ದೊರಕುತ್ತಿದ್ದ ಸಿಂಗಲ್ ಯೂಸರ್ ಡಯಾಲಿಸಿಸ್ ವ್ಯವಸ್ಥೆಯು ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲೂ ಲಭ್ಯವಿರಲಿದೆ. ಇದುವರೆಗೆ ಒಬ್ಬ ವ್ಯಕ್ತಿಗೆ ಡಯಾಲಿಸಿಸ್ ಮಾಡಿ ಅದನ್ನು ಶುಚಿಗೊಳಿಸಿ ಬಾಕ್ಸ್‌ನಲ್ಲಿ ಇಟ್ಟು ಮತ್ತೂಮ್ಮೆ ಆತ ಬಂದಾಗ ಅದನ್ನೇ ಮರು ಬಳಕೆ ಮಾಡಲಾಗುತ್ತಿತ್ತು. ಇನ್ನು ಮುಂದೆ ಈ ಸಮಸ್ಯೆಗೆ ಮುಕ್ತಿ ಸಿಗಲಿದೆ. ಸಿಂಗಲ್ ಯೂಸರ್ ಡಯಾಲಿಸಿಸ್ ಅನ್ನು ಬಳಕೆ ಮಾಡಿ ಎಸೆಯಲಾಗುತ್ತದೆ. ಒಂದು ಡಯಾಲಿಸಿಸ್‌ಗೆ ಅಂದಾಜು 1,500 ರೂ. ತಗುಲಲಿದೆ.
ಸರ್ಕಾರ ನೀಡುತ್ತಿರುವ ಉಚಿತ ಡಯಾಲಿಸಿಸ್‌ನಿಂದ ಸಾವಿರಾರು ಬಡ ಜನರಿಗೆ ಅನುಕೂಲ ಆಗಿದೆ. ಸೂಕ್ತ ಅರ್ಹತೆ ಹೊಂದಿರುವ ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುತ್ತೇವೆ.
| ಡಾ. ನವೀನ್ ಭಟ್, ನಿರ್ದೇಶಕರು, ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಇಲಾಖೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.